Ek Love Ya: ಹೊಸ ಅವತಾರದಲ್ಲಿ‌ ಡೈರೆಕ್ಟರ್ ಪ್ರೇಮ್:‌ ‘ಏಕ್‌ ಲವ್‌ ಯಾ’ ಟ್ರೈಲರ್‌ ಕ್ರೇಜ್..!

Ek Love Ya Update - ಕನ್ನಡದ ಸ್ಟಾರ್‌ ಡೈರೆಕ್ಟರ್‌ (Star Sandalwood Director) ಜೋಗಿ ಪ್ರೇಮ್‌ (Jogi Prem) ಮತ್ತೊಂದು ಚಿತ್ರದ ಮೂಲಕ ಸದ್ದು ಮಾಡಲು ಬರುತ್ತಿದ್ದಾರೆ. ಈ ಬಾರಿ ‘ಏಕ್‌ ಲವ್‌ ಯಾ’ (Ek Love Ya) ಅಂತಿದ್ದಾರೆ ಪ್ರೇಮ್.‌ ಸದ್ಯ ಪ್ರೇಮ್‌ ನಿರ್ದೇಶನದ ಟ್ರೈಲರ್‌ ರಿಲೀಸ್‌ (Ek Love Ya Trailer) ಆಗಿದ್ದು, ಸಖತ್‌ ಸದ್ದು ಮಾಡ್ತಿದೆ.

Written by - Malathesha M | Edited by - Nitin Tabib | Last Updated : Feb 12, 2022, 06:09 PM IST
  • ಕನ್ನಡದ ಸ್ಟಾರ್ ಡೈರೆಕ್ಟರ್ ಮತ್ತೊಂದು ಚಿತ್ರದ ಮೂಲಕ ಸದ್ದು ಮಾಡಲು ಬರುತ್ತಿದ್ದಾರೆ.
  • ಫೆಬ್ರವರಿ 24ಕ್ಕೆ ‘ಏಕ್‌ ಲವ್‌ ಯಾ’ ಬಿಡುಗಡೆಯಾಗಲಿದ್ದು, ಭಾರಿ ನಿರೀಕ್ಷೆ ಮೂಡಿಸಿದೆ.
  • ಇತ್ತೀಚಿಗೆ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ಸಕತ್ ಸೌಂಡ್ ಮಾಡುತ್ತಿದೆ.
Ek Love Ya: ಹೊಸ ಅವತಾರದಲ್ಲಿ‌ ಡೈರೆಕ್ಟರ್ ಪ್ರೇಮ್:‌ ‘ಏಕ್‌ ಲವ್‌ ಯಾ’ ಟ್ರೈಲರ್‌ ಕ್ರೇಜ್..! title=
Ek Love Ya Latest News (File Photo)

Ek Love Ya Special Story- ಕೊರೊನಾ ಕಂಟಕಕ್ಕೆ (Corona Pandemic) ಬ್ರೇಕ್‌ ಬಿದ್ದಿದ್ದೇ ಬಿದ್ದಿದ್ದು, ಚಂದನವನಕ್ಕೆ ಹೊಸ ಹುರುಪು ಬಂದಿದೆ. ಸಾಲು ಸಾಲು ಚಿತ್ರಗಳು ರಿಲೀಸ್‌ಗೆ ರೆಡಿಯಾಗಿವೆ.‌ ಇದೀಗ ಕನ್ನಡದ ಸ್ಟಾರ್‌ ನಿರ್ದೇಶಕ ಜೋಗಿ ಪ್ರೇಮ್‌ (Jogi Prem) ಚಿತ್ರವೂ ರಿಲೀಸ್‌ಗೆ ಸಿದ್ಧವಾಗಿದೆ. 

ಜೋಗಿ ಪ್ರೇಮ್‌ ನಿರ್ದೇಶನದ ಬಹುನಿರೀಕ್ಷಿತ ಚಿತ್ರ ‘ಏಕ್‌ ಲವ್‌ ಯಾ’ (Ek Love Ya) ಟ್ರೈಲರ್‌ (Trailer) ರಿಲೀಸ್‌ ಆಗಿದ್ದು, ಸಖತ್‌ ಸದ್ದು ಮಾಡ್ತಿದೆ. ಫೆಬ್ರವರಿ 24ಕ್ಕೆ ‘ಏಕ್‌ ಲವ್‌ ಯಾ’ ಬಿಡುಗಡೆಯಾಗಲಿದ್ದು, ಭಾರಿ ನಿರೀಕ್ಷೆ ಮೂಡಿಸಿದೆ.

ವಿಭಿನ್ನ ಪ್ರಮೋಷನ್..! (Ek Love Ya Latest News)
ಅಂದಹಾಗೆ ʼಏಕ್ ಲವ್ ಯಾ' ಸಿನಿಮಾ ಈವರೆಗೂ ಹಾಡುಗಳಿಂದಲೇ ಗಮನ ಸೆಳೆದಿತ್ತು. ಹಾಗೇ ಈ ಹಿಂದೆ ಟೀಸರ್‌ ಕೂಡ ಸದ್ದು ಮಾಡಿತ್ತು. ಈಗ ಚಿತ್ರದ ಟ್ರೇಲರ್‌ ಕೂಡ ಸಖತ್‌ ಸೌಂಡ್‌ ಮಾಡುತ್ತಿದೆ. ಅದ್ಭುತ ಕ್ಯಾಮೆರಾ ವರ್ಕ್‌ ಹಾಗೂ ಮ್ಯೂಸಿಕ್‌ ಪ್ರೇಕ್ಷಕರನ್ನು ಸೆಳೆಯುವಂತಿದೆ. ಡೈರೆಕ್ಟರ್‌ ಪ್ರೇಮ್‌ ತಮ್ಮ ಹಿಂದಿನ ಸಿನಿಮಾಗಳಿಗಿಂತ ಭಿನ್ನವಾಗಿಯೇ ಈ ಬಾರಿ ಪ್ರಮೋಷನ್‌ ಆರಂಭಿಸಿದ್ದಾರೆ. ಟ್ರೇಲರ್‌ ಮೂಲಕ ಪ್ರೇಕ್ಷಕರ ನಿರೀಕ್ಷೆ ಮತ್ತಷ್ಟು ಹೆಚ್ಚುವಂತೆ ಮಾಡಿದ್ದಾರೆ.

ಚಾಮುಂಡಿ ದೇವಿ ದರ್ಶನ (Ek Love Ya Latest News)
'ಏಕ್ ಲವ್ ಯಾ' ಟ್ರೈಲರ್ ರಿಲೀಸ್‌ಗೆ ಮುನ್ನ ನಿರ್ದೇಶಕ ಪ್ರೇಮ್ ಇಡೀ ಚಿತ್ರ ತಂಡವನ್ನು ಮೈಸೂರಿಗೆ ಕರೆದೊಯ್ದಿದ್ದಾರೆ. ಟ್ರೈಲರ್ ರಿಲೀಸ್‌ಗೂ ಮುನ್ನ ಚಿತ್ರತಂಡ ಚಾಮುಂಡಿ ತಾಯಿಯ ಆಶೀರ್ವಾದ ಪಡೆದುಕೊಂಡಿದೆ.‌ ಫೆಬ್ರವರಿ 24ಕ್ಕೆ ‘ಏಕ್‌ ಲವ್‌ ಯಾ’ ಚಿತ್ರ ಬಿಡುಗಡೆಯಾಗಲಿದೆ. ಸಿನಿಮಾದ ಮುಖ್ಯ ಪಾತ್ರದಲ್ಲಿ  ರಾಣಾ, ರಚಿತಾ ರಾಮ್‌ (Rachita Ram) ಹಾಗೂ ರೀಷ್ಮಾ ನಾಣಯ್ಯ ಕಾಣಿಸಿಕೊಂಡಿದ್ದಾರೆ. ಲವರ್ಸ್‌ ಡೇಗೂ ಮುನ್ನ ಟ್ರೇಲರ್‌ ರಿಲೀಸ್‌ ಮಾಡಿರೋದು ಪ್ರೇಮಿಗಳಿಗೆ ಉಡುಗೊರೆ ನೀಡಿದಂತಾಗಿದೆ.

ಇದನ್ನೂ ಓದಿ-ಹ್ಯಾಂಡ್ ಸಮ್ ಅಲ್ಲು ಅರ್ಜುನ್ ಪುಷ್ಪಾದ ರಗಡ್ ಲುಕ್ ಗೆ ಬದಲಾದಾಗ.. ಇಲ್ಲಿದೆ ನಟನ Transforming ವಿಡಿಯೋ

ಡಿಫ್ರೆಂಟ್‌ ಕಥೆ ಹೊತ್ತು, ನಿರ್ದೇಶಕ ಪ್ರೇಮ್‌ ಸ್ಯಾಂಡಲ್‌ವುಡ್‌ಗೆ ಹೊಸ ಪ್ರೇಮಕಥೆ ಕೊಡಲು ಸಜ್ಜಾಗಿದ್ದಾರೆ. ಸಿನಿಮಾ ಇನ್ನೇನು ಕೆಲವೇ ದಿನಗಳಲ್ಲಿ ಚಿತ್ರ ಮಂದಿರದಲ್ಲಿ ಸದ್ದು ಮಾಡಲಿದ್ದು, ಪ್ರೇಕ್ಷಕ ಪ್ರಭು ಪ್ರೇಮ್‌ ಚಿತ್ರಕ್ಕಾಗಿ ವೆಯ್ಟ್‌ ಮಾಡ್ತಿದ್ದಾರೆ.

ಇದನ್ನೂ ಓದಿ-ನಾಳೆ 'ಜೇಮ್ಸ್' ಎಂಟ್ರಿ , ಮುಗಿಲು ಮುಟ್ಟಿದ ಅಪ್ಪು ಅಭಿಮಾನಿಗಳ ಸಂಭ್ರಮ..!

ಇದನ್ನೂ ಓದಿ-'ಬೈಟ್ ಟು ಲವ್' ಇದು ಚಂದನವನದ ಕ್ಯೂಟ್‌ ಲವ್‌ ಸ್ಟೋರಿ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News