ಪ್ರೀತಿಯ ಸಿಹಿ ಜೊತೆಗೆ ʼನಿಧಿʼಯ ಮಧುರ ನೆನಪು: ಇದೇ ʼಆದಿʼಯ ಕಥೆ..!

Written by - Zee Kannada News Desk | Last Updated : Feb 11, 2022, 09:28 PM IST
  • ಲವ್‌ ಮಾಕ್ಟೇಲ್‌ 2ನ ಕಥೆಗೆ ಪ್ರೇಕ್ಷಕರು ತಲೆಬಾಗಿದ್ದಾರೆ. ಮಧ್ಯೆ ಮಧ್ಯೆ ಬಂದು ಹೋಗುವ ಕಾಮಿಡಿ ಸೀನ್‌ಗಳು ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುತ್ತವೆ.
  • ಒಂದು ಕಡೆ ಕೆಲವು ದೃಶ್ಯಗಳು ನಗು ತರಿಸಿದರೆ, ಸೆಂಟಿಮೆಂಟ್ ಸೀನ್‌ಗಳಲ್ಲಿ ಕಣ್ಣು ತುಂಬುವುದು ಗ್ಯಾರಂಟಿ.‌
ಪ್ರೀತಿಯ ಸಿಹಿ ಜೊತೆಗೆ ʼನಿಧಿʼಯ ಮಧುರ ನೆನಪು: ಇದೇ ʼಆದಿʼಯ ಕಥೆ..! title=

ಸ್ಯಾಂಡಲ್‌ ವುಡ್‌ ನ ಬಹು ನಿರೀಕ್ಷಿತ ಸಿನಿಮಾ ಲವ್‌ ಮಾಕ್ಟೇಲ್‌ -2 ಇಂದು ರಿಲೀಸ್‌ ಆಗಿದೆ. ಇಷ್ಟುದಿನ ಚಿತ್ರಕ್ಕಾಗಿ ಕಾದು ಕುಳಿತಿದ್ದ ಪ್ರೇಕ್ಷಕರು ಲವ್‌ ಮಾಕ್ಟೇಲ್‌ ಸಿಕ್ವೇಲ್‌ ನ ಸಖತ್‌ ಎಂಜಾಯ್‌ ಮಾಡಿದ್ರು. ಇಂದು ಬೆಳಗ್ಗೆಯಿಂದಲೇ ಥಿಯೇಟರ್‌ಗಳ ಎದುರು ಜನ ತುಂಬಿ ತುಳುಕುತ್ತಿದ್ದರು.

ಪ್ರೀತಿ, ಬದುಕು, ಮತ್ತದರ ನೋವು-ನಲಿವುಗಳನ್ನ ಸುಂದರವಾಗಿ ಕಟ್ಟಿಕೊಟ್ಟು ಕನ್ನಡಿಗರ ಮನಗೆದ್ದಿದ್ದ ಲವ್‌ ಮಾಕ್ಟೇಲ್‌ ಸಿನಿಮಾ ಇದೀಗ ಪಾರ್ಟ್‌ 2 ಮೂಲಕ ಮತ್ತೆ ಕನ್ನಡಿಗರ ಎದುರು ಬಂದಿದೆ. ಡಾರ್ಲಿಂಗ್‌ ಕೃಷ್ಣ ಹಾಗೂ ಮಿಲನಾ ಅಭಿನಯಕ್ಕೆ ʼಪ್ರೇಕ್ಷಕ ಪ್ರಭುʼ ಫಿದಾ ಆಗಿದ್ದಾನೆ.

ಇದನ್ನೂ ಓದಿ-Valentine Day Horoscope - ಈ ಎರಡು ಗ್ರಹಗಳ ಪ್ರಭಾವವಿರುವ ಯುವಕರ ಮೇಲೆ ಯುವತಿಯರು ಫಿದಾ

ಕಥೆ ಸಖತ್..!
ಲವ್‌ ಮಾಕ್ಟೇಲ್‌ 2ನ ಕಥೆಗೆ ಪ್ರೇಕ್ಷಕರು ತಲೆಬಾಗಿದ್ದಾರೆ. ಮಧ್ಯೆ ಮಧ್ಯೆ ಬಂದು ಹೋಗುವ ಕಾಮಿಡಿ ಸೀನ್‌ಗಳು ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುತ್ತವೆ.  ಒಂದು ಕಡೆ ಕೆಲವು ದೃಶ್ಯಗಳು ನಗು ತರಿಸಿದರೆ, ಸೆಂಟಿಮೆಂಟ್ ಸೀನ್‌ಗಳಲ್ಲಿ ಕಣ್ಣು ತುಂಬುವುದು ಗ್ಯಾರಂಟಿ.‌ ಹೀಗೆ ಡಾರ್ಲಿಂಗ್‌ ಕೃಷ್ಣ ಹಾಗೂ ಮಿಲನಾ ಜೋಡಿ ಮತ್ತೊಮ್ಮೆ ಮೋಡಿ ಮಾಡಿದೆ. ಸಿನಿಮಾದ ಒಂದೊಂದು ದೃಶ್ಯವೂ ಅದ್ಭುತ ಎನಿಸುವಷ್ಟು ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ ಡಾರ್ಲಿಂಗ್‌ ಕೃಷ್ಣ. ‌

ಇದನ್ನೂ ಓದಿ-#JamesTeaser: ದೊಡ್ಮನೆ ಅಭಿಮಾನಿಗಳಿಗೆ ಬಿಗ್ ಗಿಫ್ಟ್; ಬಹುನಿರೀಕ್ಷಿತ 'ಜೇಮ್ಸ್' ಚಿತ್ರದ ಟೀಸರ್ ರಿಲೀಸ್

ಪಾತ್ರಗಳ ರೀ ಎಂಟ್ರಿ..!
ಆದಿ ಮತ್ತೊಂದು ಮದುವೆ ಆಗ್ತಾನಾ..? ಎಂಬ ಪ್ರಶ್ನೆಯೊಂದಿಗೆ ಶುರುವಾಗುವ ಕಥೆ ಪ್ರತಿ ದೃಶ್ಯದಲ್ಲೂ ಟ್ವಿಸ್ಟ್‌ ಪಡೆಯುತ್ತದೆ. ಮ್ಯೂಸಿಕ್‌ ಮತ್ತೆ ಮೋಡಿ ಮಾಡಿದೆ. ಮೊದಲ ಭಾಗದಲ್ಲಿ ಬಂದು ಹೋಗಿದ್ದ ಪಾತ್ರಗಳು ಇಲ್ಲೂ ಬಂದು ಕಚಗುಳಿ ಇಡುತ್ತವೆ. ಜನರು ಹಿಂದಿನ ಭಾಗದಲ್ಲಿ ಕಂಡ ಪಾತ್ರಗಳನ್ನು ಇಂದಿಗೂ ಮರೆಯದಂತೆ ಕಥೆ ಕಟ್ಟಿಕೊಡಲಾಗಿದೆ. ಇಲ್ಲೇ ಗೊತ್ತಾಗೋದು ಡಾರ್ಲಿಂಗ್‌ ಕೃಷ್ಣ ಕಥೆ ಮೇಲೆ ಹಾಕಿರೋ ಎಫರ್ಟ್‌ ಎಂತಹದ್ದು ಅಂತಾ.

ಚಿತ್ರದ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ನಿರ್ದೇಶಕ ಹಾಗೂ ಚಿತ್ರದ ನಾಯಕ ಡಾರ್ಲಿಂಗ್‌ ಕೃಷ್ಣ, ಚಿತ್ರಮಂದಿರದಲ್ಲಿ ಪ್ರೇಕ್ಷಕರ ರಿಯಾಕ್ಷನ್‌ಗೆ ಹಾಗೂ ಫ್ಯಾನ್ಸ್‌ ಜೋಶ್‌ಗೆ ಫುಲ್‌ ಖುಷ್‌ ಆಗಿದ್ರು. ಈ ಮೂಲಕ ಡಾರ್ಲಿಂಗ್‌ ಕೃಷ್ಣ ಮತ್ತೊಮ್ಮೆ ಗೆಲುವಿನ ನಗೆ ಬೀರಿದ್ದಾರೆ. ಹಾಗೇ ಲವ್‌ ಮಾಕ್ಟೇಲ್‌ ಪಾರ್ಟ್‌ ಥ್ರೀ ಬಗ್ಗೆಯೂ ಹಿಂಟ್‌ ಕೊಟ್ಟಿದ್ದಾರೆ.

ಚಿತ್ರದ ನಿರ್ಮಾಪಕಿಯೂ ಆಗಿರುವ ನಾಯಕಿ ಮಿಲನಾ ನಾಗರಾಜ್ ಕೂಡ ಚಿತ್ರದ ಯಶಸ್ವಿ ಪ್ರದರ್ಶನದ ಬಗ್ಗೆ ಸಖತ್‌ ಸಂತಸ ವ್ಯಕ್ತಪಡಿಸಿದ್ರು. ಹಾಗೇ ಸಿನಿಮಾ ನಿರ್ಮಾಣದ ಅನುಭವ ಹಂಚಿಕೊಂಡರು.

ಚಿತ್ರದ ಪಾತ್ರವರ್ಗ ಕೂಡ ಗಮನ ಸೆಳೆಯುವಂತಿದೆ. ಚಿತ್ರದ ಮ್ಯೂಸಿಕ್‌ ಮತ್ತೊಮ್ಮೆ ಅದ್ಭುತವನ್ನೇ ಸೃಷ್ಟಿಸಿದೆ. ಪ್ರತಿಯೊಂದು ಹಾಡು ಕೂಡ ಕೇಳುಗರನ್ನ ಮತ್ತೆ ಮತ್ತೆ ಸೆಳೆಯುವಂತಿದೆ. ಒಟ್ಟಾರೆ ನೋಡಲೇಬೇಕಾದ ಸಿನಿಮಾಗಳ ಲಿಸ್ಟ್‌ಗೆ ಲವ್‌ ಮಾಕ್ಟೇಲ್‌ -2 ಕೂಡ ಸೇರೋದು ಪಕ್ಕಾ. ಹೀಗಾಗಿ ಕ್ಲೈಮ್ಯಾಕ್ಸ್‌ನ ನೀವು ಚಿತ್ರಮಂದಿರದಲ್ಲೇ ಕಣ್ತುಂಬಿಕೊಳ್ಳಿ.

ಇದನ್ನೂ ಓದಿ-10 Rupee Coin: 10 ರೂಪಾಯಿಯ ಯಾವ ನಾಣ್ಯ ಮಾನ್ಯವಾಗಿದೆ? ಗೊಂದಲ ನಿವಾರಿಸಿದ ಸರ್ಕಾರ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News