Game Changer movie : ಶಂಕರ್-ರಾಮ್ ಚರಣ್ ಕಾಂಬೋ ಸಿನಿಮಾ ಗೇಮ್ ಚೇಂಜರ್. ಅದ್ಧೂರಿ ವೆಚ್ಚದಲ್ಲಿ ತಯಾರಾಗುತ್ತಿರುವ ಈ ಸಿನಿಮಾದಲ್ಲಿ ಕಿಯಾರಾ ಅಡ್ವಾಣಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರದ ಬಗ್ಗೆ ಒಂದು ಕುತೂಹಲಕಾರಿ ಅಪ್‌ಡೇಟ್‌ ಒಂದು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ.  


COMMERCIAL BREAK
SCROLL TO CONTINUE READING

ನಿರ್ದೇಶಕ ಶಂಕರ್ ಸಿನಿಮಾಗಳು ಅಂದ್ರೆ ಪ್ರೇಕ್ಷಕಕರು ತುದಿಗಾಲಿನ ಮೇಲೆ ನಿಂತು ಕಾಯುತ್ತಿರುತ್ತಾರೆ. ಯಾಕಂದ್ರೆ ಅದ್ಧೂರಿತನದ ಜೊತೆಗೆ ಉತ್ತಮ ಕಥೆಯುಳ್ಳ ಸಿನಿಮಾಗಳನ್ನು ಅವರು ನಿರ್ದೇಶನ ಮಾಡುತ್ತಾರೆ. ಸಧ್ಯ ಫ್ಯಾನ್‌ ಇಂಡಿಯಾ ಸ್ಟಾರ್‌ ರಾಮ್‌ ಚರಣ್‌ ಜೊತೆ ಶಂಕರ್‌ ಅವರು ಗೇಮ್‌ ಚೇಂಜರ್‌ ಸಿನಿಮಾವನ್ನು ಮಾಡುತ್ತಿದ್ದಾರೆ.


ಇದನ್ನೂ ಓದಿ:ಫ್ಯಾಷನ್ ಲೋಕಕ್ಕೆ ಕಾಲಿಟ್ಟ ಲಂಕೇಶ್ ಕುಟುಂಬದ ಕುಡಿ


ಹೌದು.. ಪ್ರಭಾವಶಾಲಿ ದೃಶ್ಯಗಳು, ಮನಸ್ಸಿಗೆ ಮುದನೀಡುವ ಗ್ರಾಫಿಕ್ಸ್, ಅದ್ಧೂರಿ ಸೆಟ್‌ಗಳು... ಈಗಾಗಲೆ ಶಂಕರ್ ಬಹಳಷ್ಟು ತೋರಿಸಿದ್ದಾರೆ. ಅಲ್ಲದೆ, ಎಲ್ಲಿಯೂ ರಾಜಿ ಮಾಡಿಕೊಳ್ಳದೆ ಹಾಡುಗಳಿಗೆ ಹೆಚ್ಚು ಖರ್ಚು ಮಾಡುತ್ತಾರೆ. ಸದ್ಯ ಅವರು ರಾಮ್ ಚರಣ್ ಜೊತೆ ‘ಗೇಮ್ ಚೇಂಜರ್’ ಎಂಬ ಸಿನಿಮಾ ಮಾಡುತ್ತಿರುವುದು ಗೊತ್ತೇ ಇದೆ. ಈ ಚಿತ್ರದಲ್ಲಿ ರಾಜಕೀಯ ಮತ್ತು ಸಾಮಾಜಿಕ ವಿಷಯಗಳ ಚರ್ಚೆ ನಡೆಯಲಿದೆಯಂತೆ. 


ಈ ಚಿತ್ರದಲ್ಲಿ ಐದು ಹಾಡುಗಳಿವೆ. ಇವುಗಳ ಚಿತ್ರೀಕರಣಕ್ಕೆ 90 ಕೋಟಿ ಹೊಂದಿಸಲಾಗಿದೆಯಂತೆ. ಇದೀಗ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಚಿತ್ರಕ್ಕೆ ತಮನ್ ಸಂಗೀತ ಸಂಯೋಜಿಸುತ್ತಿದ್ದಾರೆ. ಗೇಮ್ ಚೇಂಜರ್ ಆಲ್ಬಂ ಉತ್ತಮ ಗುಣಮಟ್ಟದ್ದಾಗಿರುತ್ತದೆ ಎಂದು ಥಮನ್ ಈಗಾಗಲೇ ಹಲವು ಸಂದರ್ಶನಗಳಲ್ಲಿ ಹೇಳಿದ್ದಾರೆ.


ಇದನ್ನೂ ಓದಿ: ಮಳೆಯಲ್ಲಿ ದಿಶಾ ಪಟಾನಿ ಹಾಟ್‌ನೆಸ್‌ ಕಂಡು ನಿದ್ದೆಗೆಟ್ಟ ಗಂಡಹೈಕ್ಳು


ಕೊರಿಯೋಗ್ರಾಫರ್ ಜಾನಿ ಮಾಸ್ಟರ್ ಕೂಡ ಸಂದರ್ಶನವೊಂದರಲ್ಲಿ ಗೇಮ್ ಚೇಂಜರ್ ಹಾಡುಗಳ ಬಗ್ಗೆ ಮಾತನಾಡಿದ್ದಾರೆ. ಹಾಡುಗಳ ವಿಷಯದಲ್ಲಿ ಇಂತಹ ಪರಿಕಲ್ಪನೆಯನ್ನು ಯಾರೂ ಮಾಡಿಲ್ಲ ಎಂದು ಜಾನಿ ಮಾಸ್ಟರ್ ಹೇಳಿದ್ದಾರೆ. ಸದ್ಯ ಈ ಚಿತ್ರದ ಚಿತ್ರೀಕರಣ ಶರವೇಗದಲ್ಲಿ ನಡೆಯಲಿದೆ.


ಶ್ರೀವೆಂಕಟೇಶ್ವರ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಟಾಪ್ ನಿರ್ಮಾಪಕ ದಿಲ್ ರಾಜು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಇದು ದಿಲ್ ರಾಜು ಅವರ 50ನೇ ಚಿತ್ರ. ಅದರೊಂದಿಗೆ ಬಜೆಟ್ ನಲ್ಲಿ ರಾಜಿ ಮಾಡಿಕೊಳ್ಳದೇ ಈ ಸಿನಿಮಾ ಮಾಡುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಇದರಲ್ಲಿ ಚರಣ್ ದ್ವಿಪಾತ್ರದಲ್ಲಿ ನಟಿಸಲಿದ್ದಾರೆ. ಕಿಯಾರಾ ಅಡ್ವಾಣಿ, ಶ್ರೀಕಾಂತ್, ಅಂಜಲಿ, ಎಸ್.ಜೆ.ಸೂರ್ಯ, ಸುನೀಲ್ ಮುಂತಾದವರು ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.