Aashram 3: `ಬಾಲಿವುಡ್ ನಟರಿಗೆ ಅಭಿನಯ ಗೊತ್ತೇ ಇಲ್ಲ` ಹೀಗಂತ ಖ್ಯಾತ ನಿರ್ದೇಶಕ ಪ್ರಕಾಶ್ ಝಾ ಹೇಳಿದ್ದಾದರು ಏಕೆ?
Prakash Jha On Bollywood Actors: ಪ್ರಕಾಶ್ ಝಾ ಬಾಲಿವುಡ್ ನ ಖ್ಯಾತ ನಿರ್ದೇಶಕರಾಗಿದ್ದಾರೆ. ಹಿಂದಿ ಸಿನಿಮಾ ಜಗತ್ತಿನಲ್ಲಿ ಇವರ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತದೆ. ಬಾಲಿವುಡ್ ನ ಪ್ರತಿಯೋರ್ವ ನಟ ಈ ನಿರ್ದೇಶಕನ ಜೊತೆಗೆ ಕೆಲಸ ಮಾಡಲು ತುದಿಗಾಲಲ್ಲಿ ನಿಂತಿರುತ್ತಾರೆ.ಆದರೆ, ಈ ಬಾರಿ ಪ್ರಕಾಶ್ ಝಾ ನೀಡಿರುವ ಒಂದು ಹೇಳಿಕೆ ಬಾಲಿವುಡ್ ನಟರಿಗೆ ಸ್ವಲ್ಪ ಇರಿಸುಮುರುಸು ಉಂಟು ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
Prakash Jha Statement on Bollywood Actors: ಪ್ರಕಾಶ್ ಝಾ ಬಾಲಿವುಡ್‌ನ ಅತ್ಯಂತ ಗೌರವಾನ್ವಿತ ನಿರ್ದೇಶಕರಲ್ಲಿ ಒಬ್ಬರಾಗಿದ್ದಾರೆ. ಇವರ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಕೊಳ್ಳೆ ಹೊಡೆಯುವುದಷ್ಟೇ ಅಲ್ಲ, ಜನರ ಹೃದಯವನ್ನೂ ಕೂಡ ಆಳಿವೆ. ಇದಕ್ಕೆ ಮುಖ್ಯ ಕಾರಣ ಎಂದರೆ, 'ಅಪಹರಣ' ಆಗಲಿ, 'ಗಂಗಾಜಲ್' ಆಗಲಿ ಅಥವಾ ಆಶ್ರಮ ವೆಬ್ ಸೀರೀಸ್' ಆಗಿರಲಿ. ಪ್ರಕಾಶ್ ಝಾ ಅವರ ಸಿನಿಮಾಗಳು ಸಮಾಜಕ್ಕೆ ಹಿಡಿದ ಕನ್ನಡಿಯಂತಿರುತ್ತವೆ. ಪ್ರಕಾಶ್ ಝಾ ಅವರ ಆಶ್ರಮ್ ವೆಬ್ ಸಿರೀಸ್ ನ ಮೂರನೇ ಭಾಗ ಸದ್ಯದಲ್ಲೇ ಬಿಡುಗಡೆಯಾಗಲಿದೆ. ಆದರೆ ಆಶ್ರಮ 3 ಬಿಡುಗಡೆಗೂ ಮುನ್ನವೇ ಪ್ರಕಾಶ್ ಝಾ ಹಾಗೂ ಬಾಲಿವುಡ್ ನಟರ ನಡುವೆ ಹೊಸ ವಾರ್ ಶುರುವಾಗಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ-Bollywood vs South Actors Controversy: ಬಾಪ್ ಬಾಪ್ ಹೋತಾ ಹೈ' ಎಂದು ಸುನಿಲ್ ಶೆಟ್ಟಿ ಹೇಳಿದ್ದೇಕೆ?
ಬಾಲಿವುಡ್ ನಟರಿಗೆ ಅಭಿನಯ ಗೊತ್ತಿಲ್ಲ
ಪ್ರಕಾಶ್ ಝಾ ಅವರು ಇತ್ತೀಚಿಗೆ ನೀಡಿರುವ ತಮ್ಮ ಹೇಳಿಕೆಯಲ್ಲಿ ಬಾಲಿವುಡ್ ನಟರ ಕ್ಲಾಸ್ ತೆಗೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಗೋವಾಫೆಸ್ಟ್ 2022 ರಲ್ಲಿ ಭಾಗವಹಿಸಿದ್ದ ಪ್ರಕಾಶ್ ಝಾ ಅವರು, ಭಾರತೀಯ ನಟರ ಪ್ರೊಫೆಶನಲಿಸಮ್ ಮೇಲೆಯೇ ಪ್ರಶ್ನೆಯನ್ನು ಎತ್ತಿದ್ದು, 'ಭಾರತೀಯ ನಟರ ಜೊತೆಗೆ ಕೆಲಸ ಮಾಡುವುದು ತಮಗೆ ಇಷ್ಟವಿಲ್ಲ. ಏಕೆಂದರೆ, ಅವರಿಗೆ ಅಭಿನಯ ತಿಳಿದೇ ಇಲ್ಲ. ಯಾವುದೇ ಓರ್ವ ನಟ ತಮ್ಮನ್ನು ಶೂಟ್ ಟೈಮಿಂಗ್, ಲೋಕೇಶನ್, ಆಕ್ಷನ್ ಸಿಕ್ವೆನ್ಸ್ ಕುರಿತು ಪ್ರಶ್ನೆಯನ್ನೇ ಕೇಳಿಲ್ಲ' ಎಂದಿದ್ದಾರೆ. 'ಬಾಲಿವುಡ್ ಹಾಗೂ ಹಾಲಿವುಡ್ ನಟರಲ್ಲಿ ಇದೆ ವ್ಯತ್ಯಾಸವಿದೆ. ಅಲ್ಲಿನ ನಟರು ತಮ್ಮ ನಟನಾ ಕೌಶಲ್ಯ ಹೆಚ್ಚಿಸಿಕೊಳ್ಳಲು ವರ್ಕ್ ಶಾಪ್ ಕೈಗೊಳ್ಳುತ್ತಾರೆ' ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ-'ನನ್ನ ನಿಭಾಯಿಸಲು ಬಾಲಿವುಡ್ ಕೈಯಲ್ಲಿ ಆಗಲ್ಲ': ಟಾಲಿವುಡ್ ಸೂಪರ್ ಸ್ಟಾರ್..!
ತಾವೂ ವರ್ಕ್ ಶಾಪ್ ಗೆ ಹಾಜರಾಗುತ್ತಿರುವುದಾಗಿ ಹೇಳಿದ ಝಾ
ಬಾಬಿ ಡಿಯೋಲ್ ಅಭಿನಯದ ಆಶ್ರಮ 3 ವೆಬ್ ಸಿರೀಸ್ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ನಕಲಿ ಧರ್ಮಗುರುಗಳ ಬಣ್ಣ ಬಯಲು ಮಾಡುವ ಈ ವೆಬ್ ಸಿರೀಸ್ ಭಾರಿ ಚರ್ಚೆಯಲ್ಲಿದೆ. ಈ ವೆಬ್ ಸಿರೀಸ್ ನ ಎರಡು ಭಾಗಗಳು ಈಗಾಗಲೇ ಬಿಡುಗಡೆಯಾಗಿದ್ದು, ಮೂರನೇ ಭಾಗ ಬಿಡುಗಡೆಯಾಗಲಿದೆ.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.