ಬೆಂಗಳೂರು : ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸದ್ಯ ‘ಮಾರ್ಟಿನ್​’ಚಿತ್ರದ ಗುಂಗಿನಲ್ಲಿದ್ದಾರೆ. ಮಾರ್ಟಿನ್ ಚಿತ್ರವನ್ನು ಈ ವರ್ಷದಲ್ಲೇ​ ಮುಗಿಸಿ ಜೋಗಯ್ಯ ಪ್ರೇಮ್​ ಅಡ್ಡಕ್ಕೆ ಪೊಗರು ಪೋರ ಎಂಟ್ರಿ ಕೊಡೋದು ಕನ್ಫರ್ಮ್​ ಆಗಿದೆ.  ಈ ಚಿತ್ರಕ್ಕೆ ಗುಟ್ಟಾಗಿ ಮಾಸ್​ ಟೈಟಲ್​ ಫಿಕ್ಸ್  ಮಾಡಿಕೊಂಡು ಆ ಟೈಟಲ್​ನ ರಿವೀಲ್​ ಮಾಡೋದಕ್ಕೆ ಮುಹೂರ್ತ ಇಟ್ಟಿದ್ದಾರೆ ಸ್ಯಾಂಡಲ್​ವುಡ್​ನ ‘ಡಿಕೆ’.


COMMERCIAL BREAK
SCROLL TO CONTINUE READING

ಧ್ರುವ ಅಂದಾಕ್ಷಣ ನಮಗೆ ಥಟ್ ಅಂತ ನೆನಪಾಗೊಂದು ಲಕ್ಮ್ಮೀ ಪಟಾಕಿ ತರ ಪಟಪಟ ಅಂತ ಸಿಡಿಯೋ ಖಡಕ್ ಮಾಸ್ ಡೈಲಾಗ್​ಗಳು. ಅದ್ದೂರಿ ಚಿತ್ರದಿಂದ ಪೊಗರು ಚಿತ್ರದವರೆಗೂ ಡೈಲಾಗ್ ಮೂಲಕವೇ ಅಬ್ಬರಿಸಿರೋ ಧ್ರುವಾಗೆ ಭರ್ಜರಿ ಮಾಸ್ ಫ್ಯಾನ್ಸ್ ಫಾಲೋವರ್ಸ್ ಇದ್ದಾರೆ. ಆದರೆ, ಈಗ ಧ್ರುವ ತೆರೆ ಮೇಲೆ ಗತ್ತಿನ ಮೂಲಕ ತಾಖತ್ ತೋರಿಸೋಕೆ ಹೊರಟಿದ್ದಾರೆ. ಅದಕ್ಕೆ ಪೂರಕ ವಾಗಿ ಮಾರ್ಟಿನ್ ಚಿತ್ರದಲ್ಲಿ ಲೆಂತಿ ಡೈಲಾಗ್ ಇರಲ್ಲ ಅಂತ ಧ್ರುವನೆ ಕ್ಲಾರಿಟಿ ಕೊಟ್ಟಿದ್ದಾರೆ. ಮಾರ್ಟಿನ್ ಕೊನೆ‌ ಹಂತಕ್ಕೆ ತಂದು ನಿಲ್ಲಿಸಿ ಸದ್ದಿಲ್ಲದೆ ತನ್ನ ಆರನೇ ಚಿತ್ರಕ್ಕೆ ತೆರೆಮರೆಯಲ್ಲೇ ಧ್ರುವ ಸಜ್ಜಾಗ್ತಿದ್ದಾರೆ‌.


ಇದನ್ನೂ ಓದಿ : ಡಿ ಬಾಸ್ 'ಕ್ರಾಂತಿ' ಸಿನಿಮಾ ರಿಲೀಸ್ ಆದ ದಿನ ಕರುನಾಡಿನಲ್ಲಿ 'ಮಹಾಕ್ರಾಂತಿ' ಫಿಕ್ಸ್..!


ಹೌದು, ಜೋಗಿ ಪ್ರೇಮ್ ಧ್ರುವ ಕಾಂಬಿನೇಷನ್​ನಲ್ಲಿ ಈ ಸಿನಿಮಾ ಮಾಡೋದಾಗಿ ಕೆವಿಎನ್ ಪ್ರೊಡಕ್ಷನ್ಸ್ ಅನೌನ್ಸ್ ಮಾಡಿದ್ದು ಆಗಿದೆ. ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಅದ್ದೂರಿ ಮುಹೂರ್ತ ಕೂಡಾ ನಡೆದಿದೆ. ಈ ಚಿತ್ರದಲ್ಲಿ ಡೈರೆಕ್ಟರ್​ ಪ್ರೇಮ್ ಸಖತ್ ವರ್ಕ್​ಔಟ್​ ಮಾಡಿ  80ರ ದಶಕದ  ಕತೆ ಹೆಣೆದು  ರೆಟ್ರೋ ಸ್ಟೈಲ್ ನಲ್ಲಿ ಧ್ರುವನ ತೆರೆ ಮೇಲೆ ತೋರಿಸೋಕೆ ಭರ್ಜರಿ ಪ್ಲಾನ್ ಮಾಡಿದ್ದಾರೆ. ಜೊತೆಗೆ ಈ ಚಿತ್ರಕ್ಕೆ ‘ಕೇಡಿ’ ಎಂಬ ಪವರ್​ಫುಲ್​ ಮಾಸ್​ ಟೈಟಲ್​ ಫೈನಲ್​ ಮಾಡಿಕೊಂಡಿರುವ ಪ್ರೇಮ್​, ಟೈಟಲ್​ಗಾಗಿಯೇ 10 ಲಕ್ಷ ಖರ್ಚು ಮಾಡಿ,   ಟೀಸರ್​ ರೆಡಿ ಮಾಡಿದ್ದಾರೆ. ಸದ್ದಿಲ್ಲದೆ ಟೈಟಲ್​ ರಿವೀಲ್​ ಮಾಡೋಕೆ ​ ವೇದಿಕೆ ರೆಡಿ ಮಾಡ್ಕೊಂಡಿದ್ದಾರೆ ಶೋ ಮ್ಯಾನ್​ ಪ್ರೇಮ್. ಅಕ್ಟೋಬರ್​ 5ಕ್ಕೆ ‘ಕೇಡಿ’ ಟೈಟಲ್​ ಅನ್ನು ಆಫಿಶಿಯಲ್​ ಆಗಿ ಅನೌನ್ಸ್​ ಮಾಡಲಿದ್ದಾರೆ..


ಹೌದು ಅಕ್ಟೋಬರ್​5 ಕ್ಕೆ ಧ್ರುವ ಚಿತ್ರದ ಟೈಟಲ್​ ಟೀಸರ್​ ಲಾಂಚ್​  ಮಾಡಿ ಸರ್ಪ್ರೈಸ್​ ಕೋಡೊಕೆ ಸಿದ್ದವಾಗಿದ್ದಾರೆ ಪ್ರೇಮ್​. ಐನಾಕ್ಸ್​ ಮತ್ತು ಜೆಸಿ ರಸ್ತೆಯ ಊರ್ವಶಿ ಎರಡು ಚಿತ್ರಮಂದಿಗಳಲ್ಲಿ ಟೀಸರ್​ ಲಾಂಚ್​ ಮಾಡಲು ಪ್ರೇಮ್​ ಬಳಗ ಪ್ಲಾನ್​ ಮಾಡಿಕೊಂಡಿದ್ದು, ಟೈಟಲ್​ ಟೀಸರ್​ ಲಾಂಚ್​ಗೆ ಸ್ಟಾರ್​ ನಟ ಗೆಸ್ಟ್​ ಆಗಿ ಬಂದರೂ ಬರಬಹುದು ಎನ್ನುತ್ತಿದ್ದಾರೆ ಪ್ರೇಮ್​ ಆಪ್ತರು.


ಇದನ್ನೂ ಓದಿ : ಬಾಲಿವುಡ್ ನಿರ್ಮಾಪಕಿ ಏಕ್ತಾ ಕಪೂರ್ ವಿರುದ್ಧ ಅರೆಸ್ಟ್ ವಾರೆಂಟ್


ಇನ್ನು ಈಗಾಗಲೇ ಅದ್ದೂರಿಯಾಗಿ ಮುಹೂರ್ತ ಮಾಡಿ, 20 ಎಕರೆ ಜಾಗದಲ್ಲಿ  80ರ ದಶಕದ ಬೆಂಗಳೂರಿನ ಸೆಟ್ ಹಾಕಲಾಗಿದೆ. ಸಂಪೂರ್ಣ ಚಿತ್ರವನ್ನು  ಕೋಟಿ ಕೋಟಿ ವೆಚ್ಚದ ಸೆಟ್​ಗಳಲ್ಲಿ  ಶೂಟ್​ ಮಾಡಲಾಗುವುದು. ಮೊದಲ ಪ್ಯಾನ್​ ಇಂಡಿಯಾ ಪಿಕ್ಚರ್​ಗೆ ಕನ್ನಡದ ಹುಡುಗಿಯನ್ನೇ ನಾಯಕಿಯಾಗಿ  ಕರೆದುಕೊಂಡು ಬರಲಿದ್ದಾರೆ ಪ್ರೇಮ್. ​ ಒಂದೇ ಶೆಡ್ಯೂಲ್​ನಲ್ಲಿ  ಶೂಟಿಂಗ್​ ಕಂಪ್ಲೀಟ್​ ಮಾಡಿ ಮುಂದಿನ ವರ್ಷ  ಪ್ಯಾನ್​ ಇಂಡಿಯಾ ಪ್ರೇಕ್ಷಕರಿಗೆ ‘ಕೇಡಿ’ ದರ್ಶನ ಮಾಡಿಸುವ ಅಲೋಚನೆಯಲ್ಲಿದ್ದಾರೆ.


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.