Sonu Srinivas Gowda : 'ನಾನು ಡಿ ಬಾಸ್ ಫ್ಯಾನ್.. ನಾನು ದರ್ಶನ ಸರ್ ಹಾಗೆ ನೇರವಾಗಿ ಮಾತಾಡ್ತೀನಿ' 

ಇದೀಗ ಸೋಷಿಯಲ್ ಮೀಡಿಯಾ ಸ್ಟಾರ್ ಸೋನು ಗೌಡ ನಾನು ಡಿ ಬಾಸ್ ಅಭಿಮಾನಿ. ನಾನು ಡಿ ಬಾಸ್ ಥರ ಮಾತಾಡ್ತೀನಿ.ಯಾರಿಗೂ ಕೇರ್ ಮಾಡಲ್ಲ ಅನ್ನೋದನ್ನ ಜೀ ಕನ್ನಡ ನ್ಯೂಸ್ ಗೆ ಕೊಟ್ಟ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. 

Written by - YASHODHA POOJARI | Last Updated : Sep 28, 2022, 02:30 PM IST
  • ಡಿ ಬಾಸ್ ದರ್ಶನ್ ಅವರನ್ನ ಜನ ಆರಾಧಿಸುತ್ತಾರೆ
  • ಸೋಷಿಯಲ್ ಮೀಡಿಯಾ ಸ್ಟಾರ್ ಸೋನು ಗೌಡ
  • ನಾನು ಡಿ ಬಾಸ್ ಅಭಿಮಾನಿ ಎಂದ ಸೋನು ಗೌಡ
Sonu Srinivas Gowda : 'ನಾನು ಡಿ ಬಾಸ್ ಫ್ಯಾನ್.. ನಾನು ದರ್ಶನ ಸರ್ ಹಾಗೆ ನೇರವಾಗಿ ಮಾತಾಡ್ತೀನಿ'  title=

Sonu Gowda : 'ಡಿ ಬಾಸ್' ದರ್ಶನ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಇವ್ರು ಕೋಟಿ ಕೋಟಿ ಅಭಿಮಾನಿಗಳ ದೇವ್ರು. ಡಿ ಬಾಸ್ ದರ್ಶನ್ ಅವರನ್ನ ಜನ ಆರಾಧಿಸುತ್ತಾರೆ, ಗೌರಸುತ್ತಾರೆ ಮತ್ತು ಪೂಜಿಸುತ್ತಾರೆ. ದರ್ಶನ್ ರೋಡಿಗಿಳಿದ್ರೆ ಸಾಕು ಕೋಟಿ ಕೋಟಿ ಅಭಿಮಾನಿಗಳು ಅವರಿಗೆ ಸುತ್ತುವರೆದು ತಮ್ಮ ಪ್ರೀತಿಯನ್ನ ಧಾರೆಯೆರೆಯುತ್ತಾರೆ.

ಇದೀಗ ಸೋಷಿಯಲ್ ಮೀಡಿಯಾ ಸ್ಟಾರ್ ಸೋನು ಗೌಡ ನಾನು ಡಿ ಬಾಸ್ ಅಭಿಮಾನಿ. ನಾನು ಡಿ ಬಾಸ್ ಥರ ಮಾತಾಡ್ತೀನಿ.ಯಾರಿಗೂ ಕೇರ್ ಮಾಡಲ್ಲ ಅನ್ನೋದನ್ನ ಜೀ ಕನ್ನಡ ನ್ಯೂಸ್ ಗೆ ಕೊಟ್ಟ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಡಿ ಬಾಸ್ ಯಾರಿಗೂ ತಲೆಕೆಡಿಸಿಕೊಳ್ಳೋದಿಲ್ಲ.ಏನಿದ್ರೂ ನೇರವಾಗಿ ಹೇಳೋ ಮೂಲಕ ಜನಮನಗೆದ್ದಿದ್ದಾರೆ.ನಂಗೆ ಒಂದು ದೊಡ್ಡ ಆಸೆ ಏನಪ್ಪಾ ಅಂದ್ರೆ ಡಿ ಬಾಸ್ ಜೊತೆ ಹೀರೋಯಿನ್ ಆಗಿ ನಟನೆ ಮಾಡಬೇಕು ಅನ್ನೋ ಆಸೆಯನ್ನ ಕೂಡ ರಿವಿಲ್ ಮಾಡಿದ್ದಾರೆ.

ಇದನ್ನೂ ಓದಿ : ತೆರೆ ಮೇಲೆ ಚಾಮರಾಜನಗರ ಆಮ್ಲಜನಕ ದುರಂತ: ಲಾಭಾಂಶದ ಹಣ ಸಂತ್ರಸ್ತರಿಗೆ

ಈ ಸಂದರ್ಶನ ನೋಡಿದ ಡಿ ಬಾಸ್ ಅಭಿಮಾನಿಗಳು ಒಂದಷ್ಟು ಜನ ಪಾಸಿಟಿವ್ ಆಗಿ ಮಾತಾಡಿದ್ರೆ,ಇನ್ನೊಂದಿಷ್ಟು ಫ್ಯಾನ್ಸ್ ಚನ್ನಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.ಸಾಧ್ಯವಾದ್ರೆ ನಿನ್ನ ಮೇಲಿರೋ ನೆಗೆಟಿವ್ ಟಾಕ್ ನಿಲ್ಲಿಸು,ನೀನು ಡಿ ಬಾಸ್ ಮುಂದೆ ಯಾವ ಲೆಕ್ಕಾ ಹೀಗೆ ಬೇರೇ ಬೇರೇಯದ್ದೇ ರೀತಿಯಲ್ಲಿ ಕಾಮೆಂಟ್ ಮಾಡೋ ಮೂಲಕ ಸೋನು ಗೌಡ ಮೇಲಿರೋ ಸಿಟ್ಟನ್ನ ಹೊರಹಾಕಿದ್ದಾರೆ.
 
ಬಿಗ್ ಬಾಸ್ ಮನೆಯಿಂದ ಹೊರಬಂದ ಬಳಿಕ ಜನ ಯಾಕೋ ಸೋನು ಗೌಡಗೆ ನೇರವಾಗಿ ಒಂದಷ್ಟು ಪ್ರಶ್ನೆ ಕೇಳೋ ಮೂಲಕ ಆಕೆಯ ಮೇಲಿರೋ ಸಿಟ್ಟನ್ನ ಹೊರಹಾಕುತ್ತಿದ್ದಾರೆ. ಬಿಗ್ ಬಾಸ್ ಮನೆಗೆ ಹೋದೆ ಅಂತ ಓವರ್ ಆಗಿ ಆಡ್ಬೇಡ  ಸೋನು ಗೌಡ ಅನ್ನೋದನ್ನ ಕೂಡ ಹೇಳುತ್ತಿದ್ದಾರೆ.ಆಗಿದ್ದು ಆಗ್ಲಿ ಇನ್ನಾದ್ರೂ ಬದಲಾಗು ಒಳ್ಳೆ ಹೆಸ್ರು ತಗೋ ಅಂತ ಬುದ್ದಿವಾದ ಕೂಡ ಹೇಳುತ್ತಿದ್ದಾರೆ.ಆದ್ರೆ ಸೋನುಗೌಡ ನಾನು ಇರೋದೇ ಹೀಗೆ ನೋಡಿ. ಯಾರಿಗಾಗಿಯೂ ನಾನು ಬದಲಾಗಲ್ಲ  ನಂಗೆ ಹೇಗೆ ಬೇಕೋ ಹಾಗೆ ಇರುತ್ತೀನಿ ಅಂತ ಹೇಳುತ್ತಾರೆ.

ಕಷ್ಟ ಅಂತ ಬಂದ್ರೆ ಯಾರೂ ನಮ್ಮ  ಬೆನ್ನಿಗೆ ನಿಲ್ಲೋದಿಲ್ಲ,ನಮಗೆ ನಾವೇ ಆಗ್ಬೇಕು. ನಾನು ತುಂಬಾ ರಿಚ್ ಇದ್ದೀನಿ,ನನ್ನ ತಾಯಿ ಕಡೆ ಎಲ್ಲಾರು ರಾಜಕೀಯದಲ್ಲಿ ಇದ್ದಾರೆ,ನಾನು ತಿಂಗಳಿಗೆ ಲಕ್ಷ ಲಕ್ಷ ಸಂಪಾದನೆ ಮಾಡ್ತೀನಿ ಅಂತ ಹೇಳುತ್ತಾರೆ ಸೋನು ಗೌಡ. ಏನೇ ಆಗಲಿ ತಪ್ಪು ಮಾಡೋದು ಸಹಜ ಅದನ್ನ ತಿದ್ದಿ ನಡೆಯೋದೆ ಮನುಜ.ಇಷ್ಟೆಲ್ಲಾ ನೆಗೆಟಿವ್ ಟಾಕ್ ನಡುವೆ ನೋನು ನಾನು ಹಂಗಿಲ್ಲ ಅನ್ನೋದನ್ನ ಹೆಂಗೇ ಪ್ರೂವ್ ಮಾಡ್ತಾರೆ ಅನ್ನೋದೇ ದೊಡ್ಡ ಪ್ರಶ್ನೆ.

ಇದನ್ನೂ ಓದಿ : ತೆರೆ ಮೇಲೆ ಚಾಮರಾಜನಗರ ಆಮ್ಲಜನಕ ದುರಂತ: ಲಾಭಾಂಶದ ಹಣ ಸಂತ್ರಸ್ತರಿಗೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News