ಡಿ ಬಾಸ್ 'ಕ್ರಾಂತಿ' ಸಿನಿಮಾ ರಿಲೀಸ್ ಆದ ದಿನ ಕರುನಾಡಿನಲ್ಲಿ 'ಮಹಾಕ್ರಾಂತಿ' ಫಿಕ್ಸ್..!

ಡಿ ಬಾಸ್ ಮುಂದಿನ ಸಿನಿಮಾ "ಕ್ರಾಂತಿ" ಚಿತ್ರೀಕರಣದ ಇನ್ನೇನು ಆಲ್ಮೋಸ್ಟ್ ಮುಗಿದಿದ್ದು ತೆರೆ ಮೇಲೆ ಬರಲಷ್ಟೇ ಬಾಕಿಯಿದೆ. ಕ್ರಾಂತಿ ಸಿನಿಮಾ ರಿಲೀಸ್ ಆಗೋ ದಿನ ಇಡೀ ಕರುನಾಡಿನಲ್ಲಿ ಮಹಾಕ್ರಾಂತಿಯಾಗೋದು ಕೂಡ ಕನ್ಫರ್ಮ್ ಆಗಿದೆ. ರಚಿತಾ ರಾಮ್ ಕ್ರಾಂತಿ ಸಿನಿಮಾದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಜೊತೆಯಾಗಿದ್ದಾರೆ.

Written by - YASHODHA POOJARI | Edited by - Yashaswini V | Last Updated : Sep 29, 2022, 09:34 AM IST
  • ಸಾಮಾಜಿಕ ಜಾಲತಾಣದಲ್ಲಿ ನಾವೆಲ್ಲರೂ ಪ್ರತಿನಿತ್ಯ ಗಮನಿಸಿದಂತೆ ಕ್ರಾಂತಿ ಸಿನಿಮಾ ಪ್ರಚಾರವನ್ನ ಅಭಿಮಾನಿಗಳು ಸ್ವಯಂಪ್ರೇರಿತರಾಗಿ ಮಾಡುತ್ತಿದ್ದಾರೆ.
  • ಇದನ್ನ ಗಮನಿಸಿದರೆ ಇದೇ ಮೊದಲ ಬಾರಿ ಅಭಿಮಾನಿಗಳೇ ರಿಲೀಸ್ ಡೇಟ್ ಅನೌನ್ಸ್ ಆಗೋ ಚಿತ್ರದ ಪಬ್ಲಿಸಿಟಿಗೆ ಇಳಿದಿರೋದು.
  • ಅಭಿಮಾನಿಗಳು ಇದೀಗ ಚಿತ್ರತಂಡ, ಡಿ ಬಾಸ್ ಜೊತೆ ಕೇಳುತ್ತಿರೋ ಬಿಗ್ ಪ್ರಶ್ನೆ ಏನಪ್ಪಾ ಅಂದ್ರೆ ಕ್ರಾಂತಿ ಸಿನಿಮಾ ರಿಲೀಸ್ ಯಾವಾಗ ಅನ್ನೋದು..?
ಡಿ ಬಾಸ್ 'ಕ್ರಾಂತಿ' ಸಿನಿಮಾ ರಿಲೀಸ್ ಆದ ದಿನ ಕರುನಾಡಿನಲ್ಲಿ 'ಮಹಾಕ್ರಾಂತಿ' ಫಿಕ್ಸ್..! title=
D Boss Challenging Star Darshan Kranti Movie Update

ಬೆಂಗಳೂರು:  ರಾಬರ್ಟ್ ಸಿನಿಮಾ ಆದ ಬಳಿಕ ಡಿ ಬಾಸ್ ನ ತೆರೆಯ ಮೇಲೆ ನೋಡೋಕೆ ಅಭಿಮಾನಿಗಳು ಉಸಿರು ಬಿಗಿದು ಕಾದು ನಿಂತಿದ್ದಾರೆ. ಕ್ರಾಂತಿ ಸಿನಿಮಾನ ಯಾವಾಗ ಬಿಗ್ ಸ್ಕ್ರೀನ್ ಮೇಲೆ ನೋಡೋದು ಅನ್ನೋ ಪ್ರಶ್ನೆ ಅಭಿಮಾನಿಗಳ್ಳಿ ಕಾಡುತ್ತಿದೆ. ಯಾಕಂದ್ರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನ ತೆರೆ ಮೇಲೆ ನೋಡೋ ಆನಂದವೇ ಬೇರೇ. ಆ ಡೈಲಾಗ್ ಗಳು, ಆ ಆಕ್ಷನ್, ಲವ್, ರೋಮ್ಯಾನ್ಸ್ ಡಿ ಬಾಸ್ ಮಾಡೋ ಪ್ರತಿಯೊಂದು ಆಕ್ಟ್ ಅನ್ನು ನೋಡಿ ಸಂಭ್ರಮಿಸುತ್ತಾರೆ.

ಇದೀಗ ಡಿ ಬಾಸ್ ಮುಂದಿನ ಸಿನಿಮಾ "ಕ್ರಾಂತಿ" ಚಿತ್ರೀಕರಣದ ಇನ್ನೇನು ಆಲ್ಮೋಸ್ಟ್ ಮುಗಿದಿದ್ದು ತೆರೆ ಮೇಲೆ ಬರಲಷ್ಟೇ ಬಾಕಿಯಿದೆ. ಕ್ರಾಂತಿ ಸಿನಿಮಾ ರಿಲೀಸ್ ಆಗೋ ದಿನ ಇಡೀ ಕರುನಾಡಿನಲ್ಲಿ ಮಹಾಕ್ರಾಂತಿಯಾಗೋದು ಕೂಡ ಕನ್ಫರ್ಮ್ ಆಗಿದೆ. ರಚಿತಾ ರಾಮ್ ಕ್ರಾಂತಿ ಸಿನಿಮಾದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಜೊತೆಯಾಗಿದ್ದಾರೆ.

ಇದನ್ನೂ ಓದಿ- ಸೆಟ್ಟೇರಿತು ರಾಜವರ್ಧನ್ ನಾಲ್ಕನೇ ಚಿತ್ರ - 'ಗಜರಾಮ'ನಿಗೆ ಕ್ಲ್ಯಾಪ್ ಮಾಡಿದ ಜೂನಿಯರ್ ರೆಬೆಲ್ ಸ್ಟಾರ್

ಕ್ರಾಂತಿ ಸಿನಿಮಾ ನಮ್ಮದು ಅಂತ ಕೋಟಿ ಕೋಟಿ ಅಭಿಮಾನಿಗಳು ರಿಲೀಸ್ ಡೇಟ್ ಅನೌನ್ಸ್ ಆಗೋ ಮುಂಚೆ ಭರ್ಜರಿಯಾಗಿ ಕರುನಾಡಿನ ಮೂಲೆಮೂಲೆಯಲ್ಲಿ ಪ್ರಚಾರ ಮಾಡೋ ಮೂಲಕ ಸಖತ್ ಹವಾ ಕ್ರಿಯೇಟ್ ಮಾಡಿದ್ದಾರೆ. ಅಭಿಮಾನಿಗಳು ಇದೀಗ ಚಿತ್ರತಂಡ, ಡಿ ಬಾಸ್ ಜೊತೆ ಕೇಳುತ್ತಿರೋ ಬಿಗ್ ಪ್ರಶ್ನೆ ಏನಪ್ಪಾ ಅಂದ್ರೆ ಕ್ರಾಂತಿ ಸಿನಿಮಾ ರಿಲೀಸ್ ಯಾವಾಗ ಅನ್ನೋದು..?

ಸಾಮಾಜಿಕ ಜಾಲತಾಣದಲ್ಲಿ ನಾವೆಲ್ಲರೂ ಪ್ರತಿನಿತ್ಯ ಗಮನಿಸಿದಂತೆ ಕ್ರಾಂತಿ ಸಿನಿಮಾ ಪ್ರಚಾರವನ್ನ ಅಭಿಮಾನಿಗಳು ಸ್ವಯಂಪ್ರೇರಿತರಾಗಿ ಮಾಡುತ್ತಿದ್ದಾರೆ. ಇದನ್ನ ಗಮನಿಸಿದರೆ ಇದೇ ಮೊದಲ ಬಾರಿ ಅಭಿಮಾನಿಗಳೇ ರಿಲೀಸ್ ಡೇಟ್ ಅನೌನ್ಸ್ ಆಗೋ ಚಿತ್ರದ ಪಬ್ಲಿಸಿಟಿಗೆ ಇಳಿದಿರೋದು.

ಇದನ್ನೂ ಓದಿ- Sonu Srinivas Gowda : 'ನಾನು ಡಿ ಬಾಸ್ ಫ್ಯಾನ್.. ನಾನು ದರ್ಶನ ಸರ್ ಹಾಗೆ ನೇರವಾಗಿ ಮಾತಾಡ್ತೀನಿ' 

ಡಿ ಬಾಸ್ ದೊಡ್ಡ ಕೊಡುಗೈ ದಾನಿ. ಹೂವಿನಂತ ಮನಸ್ಸು, ಕೋಪ ಮಾತ್ರ ಜಾಸ್ತಿ ಬಿಟ್ರೆ ಅದ್ಭುತ ವ್ಯಕ್ತಿತ್ವ ಹೊಂದಿರೋ ನಟ. ತಾವೂ ಹಿಂದೆ ಪಟ್ಟ ಕಷ್ಟವನ್ನ ಯಾವತ್ತಿಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮರೆತಿಲ್ಲ. ಎನಿ ವೇ ದರ್ಶನ್ ಬಗ್ಗೆ ಎಷ್ಟು ಮಾತನಾಡಿದ್ರೂ ಸಾಲಲ್ಲ ಬಿಡಿ. ಇದೀಗ ಕ್ರಾಂತಿ ಸಿನಿಮಾ ಡೇಟ್ ಅಭಿಮಾನಿಗಳಿಗೆ ಸಿಕ್ರೆ ಜಾತ್ರೆಯಾಗೋದು ಪಕ್ಕಾ..

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News