ನಾನು ಗೆದ್ದೆತ್ತಿನ ಬಾಲ ಹಿಡಿಯಲ್ಲ..! ನಟ ದರ್ಶನ್ ಈ ಮಾತನ್ನು ಹೇಳಿದ್ದು ಏಕೆ ಗೊತ್ತೆ..?
Kaatera 2 updates : ಇತ್ತೀಚಿಗೆ ಕಾಟೇರ ಸಿನಿಮಾ ಶತದಿನೋತ್ಸವ ಕೂಡ ಆಚರಿಸಿಕೊಂಡಿತ್ತು. ಇದೇ ವೇಳೆ ಕಾಟೇರ 2 (Kaatera 2) ಸಿನಿಮಾ ತೆರೆಗೆ ಬರತ್ತಾ ಎನ್ನುವ ಕುತೂಹಲ ಡಿಬಾಸ್ ಅಭಿಮಾನಿಗಳಲ್ಲಿ ಮೂಡಿತ್ತು. ಸಧ್ಯ ಈ ಕುರಿತು ದರ್ಶನ್ ಸ್ಪಷ್ಟನೆ ನೀಡಿದ್ದಾರೆ ನಟ ದರ್ಶನ್.
Darshan on Kaatera 2 : ನಟ ದರ್ಶನ್ ಸ್ಯಾಂಡಲ್‌ವುಡ್ ಸ್ಟಾರ್ ನಟರಲ್ಲಿ ಒಬ್ಬರು. ಇತ್ತೀಚಿಗೆ ಕಾಟೇರ ಸಿನಿಮಾದ ಯಶಸ್ಸಿನಿಂದ ಬಾಕ್ಸ್ ಆಫೀಸ್‌ನಲ್ಲಿ ಡಿಬಾಸ್ ದಾಖಲೆ ಬರೆದರು. ಇದೀಗ, ಕಾಟೇರ್ ಸಿನಿಮಾದ ಶತದಿನೋತ್ಸವ ಆಚರಿಸಿದ ದಚ್ಚು, ಈ ವೇಳೆ ನೀಡಿದ ಹೇಳಿಕೆಯೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಹೌದು.. ತರುಣ್ ಸುಧೀರ್ ನಿರ್ದೇಶನದ ಕಾಟೇರ ಸಿನಿಮಾ ಡಿ.29 2023 ರಂದ ಬಿಡುಗಡೆಯಾಯಿತು. ಮೊದಲ ದಿನದಿಂದಲೇ ಚಿತ್ರಕ್ಕೆ ಉತ್ತಮ ಸ್ಪಂದನೆ ಸಿಕ್ಕಿತು. ರೈತಾಪಿ ವರ್ಗದ ಕಥೆ ಆಧರಿತ ಸಿನಿಮಾ, ಎಲ್ಲಾ ವರ್ಗದ ಪ್ರೇಕ್ಷಕರಿಗೆ ಈ ಚಿತ್ರ ತುಂಬಾ ಇಷ್ಟವಾಯಿತು. ದಚ್ಚು ನಟನೆ ಮತ್ತು ಕಥೆ ಈ ಸಿನಿಮಾದ ಹೈಲೇಟ್ ಅಂದ್ರೆ ತಪ್ಪಾಗಲ್ಲ.
ಇದನ್ನೂ ಓದಿ:ಮದುವೆಯಾಗದೇ ʼಅದನ್ನುʼ ಮಾಡುತ್ತಿದ್ದೇವೆ.. ಖ್ಯಾತ ಬಿಗ್‌ಬಾಸ್ ಸ್ಪರ್ಧಿ ಸೆನ್ಸೇಷನಲ್ ಕಾಮೆಂಟ್!!
ಇತ್ತೀಚಿಗೆ ಕಾಟೇರ ಸಿನಿಮಾ ಶತದಿನೋತ್ಸವ ಕೂಡ ಆಚರಿಸಿಕೊಂಡಿತ್ತು. ಇದೇ ವೇಳೆ ಕಾಟೇರ 2 (Kaatera 2) ಸಿನಿಮಾ ತೆರೆಗೆ ಬರತ್ತಾ ಎನ್ನುವ ಕುತೂಹಲ ಡಿಬಾಸ್ ಅಭಿಮಾನಿಗಳಲ್ಲಿ ಮೂಡಿತ್ತು. ಸಧ್ಯ ಈ ಕುರಿತು ದರ್ಶನ್ ಸ್ಪಷ್ಟನೆ ನೀಡಿದ್ದು, ನಾನು ಗೆದ್ದ ಎತ್ತಿನ ಬಾಲ ಹಿಡಿಯೋದಿಲ್ಲ, ಕಾಟೇರ 2 ಮಾಡಲ್ಲ ಅಂತ ಸ್ಪಷ್ಟವಾಗಿ ಹೇಳಿದ್ದಾರೆ.
1970ರ ಕಾಲಘಟ್ಟದಲ್ಲಿ ನಡೆಯುವ ಕಥೆಯನ್ನು ನಿರ್ದೇಶಕ ತರುಣ್ ಸುಧೀರ್ ಚೆಂದವಾಗಿ ತೆರೆಮೇಲೆ ತಂದಿದ್ದರು. ಮಾಲಾಶ್ರೀ ಪುತ್ರಿ ಆರಾಧನಾ ಈ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟರು. ಜಡೇಶ್ ಕುಮಾರ್ ಹಂಪಿ ಕಾಟೇರ್ ಸಿನಿಮಾಗೆ ಕಥೆ ಬರೆದಿದ್ದಾರೆ.
ಇದನ್ನೂ ಓದಿ:ನಾನು ರಾಹುಲ್ ಗಾಂಧಿಯವರ ಪಕ್ಕಾ ಅಭಿಮಾನಿ : ದೊಡ್ಮನೆ ಮರ್ಯಾದೆ ಕಳಿಬೇಡಿ ಶಿವಣ್ಣ ಎಂದ ನೆಟ್ಟಿಗರು
ಸಧ್ಯ ಕಾಟೇರ ಸಿನಿಮಾ ಜೀ ಕನ್ನಡ ವಾಹಿನಿಯಲ್ಲಿ ಡಿಜಿಟಲ್ ಪ್ರಿಮಿಯರ್ ಆಗಿದೆ. ಕುಟುಂಬ ಸಮೇತ ಟಿವಿ ಮುಂದೆ ಕುಳಿತು ಜನ ಸಿನಿಮಾವನ್ನು ಕಣ್ತುಂಬಿಕೊಂಡಿದ್ದರು. ಸಧ್ಯ ಒಟಿಟಿಯಲ್ಲೂ ಸ್ಟ್ರೀಮಿಂಗ್ ಆಗುತ್ತಿರುವ ಕಾಟೇರ, ಉತ್ತಮ ಪ್ರದರ್ಶನ ಕಾಣುತ್ತಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.