ಇನ್ನೊಮ್ಮೆ ಪೊಲೀಸ್ ಠಾಣೆಗೆ DBoss ಬಂದ್ರೆ, ಕರ್ನಾಟಕ ಅಲ್ಲಿರುತ್ತೆ..! ದರ್ಶನ್ ಫ್ಯಾನ್ಸ್ ಗುಡುಗು
Actor Darshan : ಸ್ಯಾಂಡಲ್ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕಾಟೇರ್ ಸಿನಿಮಾ ಎರಡನೇ ವಾರವೂ ಸಹ ಅದ್ಭುತ ಪ್ರದರ್ಶನ ಕಾಣುತ್ತಿದೆ. ದಚ್ಚು ಸಿನಿಮಾಗೆ ಸಿನಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೆ ನಿನ್ನೆ ಸುಬ್ರಮಣ್ಯ ನಗರ ಪೊಲೀಸ್ ಠಾಣೆಯ ಮುಂದೆ ಹಾಜರಾಗಿದ್ದ ಡಿಬಾಸ್ಗೆ ಬೆಂಬಲವಾಗಿ ನೂರಾನು ಜನ ಅಭಿಮಾನಿಗಳು ಠಾಣೆಮುಂದೆ ಜಮಾಯಿಸಿದ್ದರು.
Darshan target : ಡಿಬಾಸ್ ಅವರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂಬ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಅವರ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಬೆನ್ನಲ್ಲೆ, ದಾಸನ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ. ಅಲ್ಲದೆ, ಇನ್ನು ಮುಂದೆ ದರ್ಶನ್ ಅವರನ್ನು ಯಾವುದೇ ಠಾಣೆಗಾದರು ಕರೆಯಿಸಿಕೊಂಡರೆ ಕರ್ನಾಟಕವೇ ಅಲ್ಲಿ ಇರುತ್ತ ಅಂತ ಅವರ ಫ್ಯಾನ್ಸ್ ಹೇಳುತ್ತಿದ್ದಾರೆ.
ಹೌದು.. ಕಾಟೇರ ಸಿನಿಮಾದ ಸಕ್ಸಸ್ ಸಹಿಸಿಕೊಳ್ಳಲಾಗದೆ, ಅವರಿಗೆ ತೊಂದರೆ ನೀಡಲಾಗುತ್ತಿದೆ ಎಂದು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ನಿನ್ನೆ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಸಹ ಶುರುವಾಗಿದೆ, ಡಿಬಾಸ್ ಅವರನ್ನು ಟಾರ್ಗೆಟ್ ಮಾಡಿದ್ದು ಯಾರು ಅಂತ ಪ್ರಶ್ನೆ ಮಾಡುತ್ತಿದ್ದಾರೆ.
ಇದನ್ನೂ ಓದಿ:Kaatera Collection: ಕಾಟೇರ ಅಬ್ಬರ.. ಎರಡನೇ ವಾರ ಗಲ್ಲಾಪೆಟ್ಟಿಗೆಯಲ್ಲಿ ಗಳಿಸಿದ್ದೆಷ್ಟು?
ನಟ ದರ್ಶನ್ ನಟನೆಯ ಕಾಟೇರ ಸಿನಿಮಾ ಉತ್ತಮ ಪ್ರದರ್ಶನ ಕಂಡಿದೆ. ಇತ್ತೀಚಿಗೆ ಚಿತ್ರತಂಡ ಸಕ್ಸಸ್ ಪಾರ್ಟಿ ಆಯೋಜನೆ ಮಾಡಿತ್ತು. ಬೆಳಗಿನಜಾವದವರೆಗೂ ಪಾರ್ಟಿ ಮಾಡಿದ್ರು ಅಂತಾ ನಟ ದರ್ಶನ್ ಸೇರಿ 8 ಮಂದಿ ನಟರಿಗೆ ನೊಟೀಸ್ ನೀಡಿದ್ದರಿಂದ ಪೊಲೀಸರ ಮುಂದೆ ಹಾಜರಾಗಿದ್ದರು. ನಿನ್ನೆ ಠಾಣೆಗೆ ಬಂದು ವಿಚಾರಣೆ ಎದುರಿಸಿದ್ದರು.
ಜನವರಿ 3ನೇ ರಂದು ರಾತ್ರಿ ಜೆಟ್ಲಾಗ್ ಪಬ್‌ನಲ್ಲಿ ಕಾಟೇರ ಚಿತ್ರತಂಡ ಸಕ್ಸಸ್ ಪಾರ್ಟಿ ಆಯೋಜನೆ ಮಾಡಿತ್ತು. ಈ ಪಾರ್ಟಿಯಲ್ಲಿ ಸಾಕಷ್ಟು ಜನ ನಟ-ನಟಿಯರು ಭಾಗವಹಿಸಿದ್ದರು. ಅಲ್ಲದೆ, ಮುಂಜಾನೆ 3-4ಗಂಟೆವರೆಗೂ ಪಬ್ ನಲ್ಲಿದ್ರು ಅನ್ನೋ ವಿಷ್ಯ ಹೊರಬರುತ್ತಿದ್ದಂತೆ ಸುಬ್ರಮಣ್ಯ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ನಟ ದರ್ಶನ್ ಸೇರಿ 8 ಜನ ನಟರಿಗೆ ನೊಟೀಸ್ ನೀಡಿದ್ದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.