ಕಂಗನಾ ಜೀವನದಲ್ಲಿ ಪ್ರೀತಿಯ ಸಿಂಚನ.. ಬಾಲಿವುಡ್‌ ಕ್ವೀನ್ ಕೈ ಹಿಡಿದು ನಿಂತ ಈ ಹುಡುಗ ಯಾರು ಗೊತ್ತೇ!

Kangana Ranaut: ಕಂಗನಾ ರಣಾವತ್ ಹುಡುಗನೊಂದಿಗೆ ಕಾಣಿಸಿಕೊಂಡಿರುವ ಫೋಟೋ ವೈರಲ್ ಆಗುತ್ತಿದೆ.

Written by - Chetana Devarmani | Last Updated : Jan 13, 2024, 12:30 PM IST
  • ಕಂಗನಾ ರಣಾವತ್ ಗೆಳೆಯನ ಫೋಟೋ
  • ಕಂಗನಾ ಜೀವನದಲ್ಲಿ ಪ್ರೀತಿಯ ಆಗಮನ?
  • ಕೈ ಹಿಡಿದು ನಿಂತ ಈ ಹುಡುಗ ಯಾರು ಗೊತ್ತೇ!
ಕಂಗನಾ ಜೀವನದಲ್ಲಿ ಪ್ರೀತಿಯ ಸಿಂಚನ.. ಬಾಲಿವುಡ್‌ ಕ್ವೀನ್ ಕೈ ಹಿಡಿದು ನಿಂತ ಈ ಹುಡುಗ ಯಾರು ಗೊತ್ತೇ!  title=

Kangana Ranaut : ಬಾಲಿವುಡ್ ನಟಿ ಕಂಗನಾ ರಣಾವತ್ ಕೆಲವು ಕಾರಣಗಳಿಂದಾಗಿ ಸುದ್ದಿಯಲ್ಲಿದ್ದಾರೆ. ಪ್ರಸ್ತುತ ಬಿಗ್ ಬಾಸ್‌ನಲ್ಲಿ ಕಾಣಿಸಿಕೊಂಡಿರುವ ತನ್ನ ಸ್ನೇಹಿತೆ ಅಂಕಿತಾ ಲೋಖಂಡೆಗೆ ಕಂಗನಾ ಇತ್ತೀಚೆಗೆ ಬೆಂಬಲ ನೀಡಿದ್ದಾರೆ. ಇದೀಗ ಕಂಗನಾ ಜೀವನದಲ್ಲಿ ಪ್ರೀತಿಯ ಆಗಮನ ಆಗಿದೆ ಎಂದು ಹೇಳಲಾಗುತ್ತಿದೆ. 

ಕಂಗನಾ ರಣಾವತ್ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ ಮತ್ತು ಪ್ರತಿದಿನ ಏನಾದರೂ ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಕಂಗನಾ ಅವರು ವ್ಯಕ್ತಿ ಒಬ್ಬರ ಜೊತೆಗಿರುವ ಫೋಟೋ ವೈರಲ್ ಆಗಿದ್ದು, ಅಭಿಮಾನಿಗಳು ಶಾಕ್‌ ಆಗಿದ್ದಾರೆ. 

ಈ ಫೋಟೋದಲ್ಲಿ ಕಂಗನಾ ಆ ಹುಡುಗನ ಕೈಯನ್ನು ಹಿಡಿದಿದ್ದಾರೆ. ಸಿಂಪಲ್ ಕುರ್ತಾ‌ ಧರಿಸಿ, ಫ್ರೀ ಹೇರ್‌ ಬಿಟ್ಟಿದ್ದಾರೆ. ಕಂಗನಾ ಜೊತೆ ಕಾಣಿಸಿಕೊಂಡಿರುವ ಈ ಹುಡುಗ ಬ್ಲ್ಯಾಕ್‌ ಬಟ್ಟೆ ಧರಿಸಿದ್ದಾರೆ. ಇಬ್ಬರೂ ಪರಸ್ಪರರ ಕೈಗಳನ್ನು ಹಿಡಿದಿದ್ದಾರೆ.  

ಇದನ್ನೂ ಓದಿ: ಮದುವೆಯಾಗದೇ ತಾಯಿಯಾದ ಖ್ಯಾತ ನಟಿ.. ಸಿನಿಮಾದಲ್ಲಿ ತುಂಡು ಬಟ್ಟೆ ಹಾಕದೇ ನಿಯಮ ಪಾಲಿಸಿದ್ದ ಬಾಲಿವುಡ್ ಬೆಡಗಿ!

ಖ್ಯಾತ ಬಾಲಿವುಡ್ ಛಾಯಾಗ್ರಾಹಕ ಯೋಗೇಶ್ ಶಾ ನಿನ್ನೆ ಅಂದರೆ ಜನವರಿ 12 ರಂದು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಈ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಮುಂಬೈನ ಸಲೂನ್‌ನ ಹೊರಗೆ ಕಂಗನಾ ಕಾಣಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಈ ಸಮಯದಲ್ಲಿ, ಕಂಗನಾ ಈ ವ್ಯಕ್ತಿಯ ಕೈಯನ್ನು ಹಿಡಿದಿದ್ದರು ಮತ್ತು ಇಬ್ಬರೂ ತುಂಬಾ ಮುದ್ದಾಗಿದ್ದರು. ಈ ವೇಳೆ ಕಂಗನಾ ನಗುತ್ತಾ ಪೋಸ್ ನೀಡಿದ್ದಾರೆ ಎಂದಿದ್ದಾರೆ. 

 

 
 
 
 

 
 
 
 
 
 
 
 
 
 
 

A post shared by yogen shah (@yogenshah_s)

 

ಕಂಗನಾ ಅವರ ಈ ಫೋಟೋ ನೋಡಿದ ಪ್ರತಿಯೊಬ್ಬ ಅಭಿಮಾನಿಯೂ ಶಾಕ್‌ ಆಗಿದ್ದಾರೆ. ಏಕೆಂದರೆ ಇದುವರೆಗೂ ಕಂಗನಾ ಲವ್ ಲೈಫ್ ಬಗ್ಗೆ ಯಾರಿಗೂ ಮಾಹಿತಿ ಇರಲಿಲ್ಲ. ಆದರೆ, ಇದು ಕಂಗನಾ ಅವರ ಸ್ನೇಹಿತನೋ ಅಥವಾ ಬೇರೆಯವರೋ ಎಂಬುದು ಸದ್ಯಕ್ಕೆ ಬಿಗ್‌ ಸೀಕ್ರೇಟ್‌ ಆಗಿದೆ. 

ಇದನ್ನೂ ಓದಿ: ಬಿಗ್‌ ಬಾಸ್‌ ಸಂಗೀತಾ ಫಿನಾಲೆ ಟಿಕೆಟ್‌ ಪಡೆದದ್ದು ಪ್ರಿ ಡಿಸೈಡೆಡ್? ಅತಿ ಹೆಚ್ಚು ಅಂಕ ಗಳಿಸಿಯೂ ಫೈನಲ್‌ ತಲುಪದ ಪ್ರತಾಪ್!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News