Vairam teaser : ಆಂಗ್ರಿ ಯಂಗ್ ಮ್ಯಾನ್ ಪ್ರಣಾಮ್ ʼವೈರಂʼ ಚಿತ್ರದ ಟೀಸರ್ ಬಿಡುಗಡೆ
ಹಿರಿಯನಟ ದೇವರಾಜ್ ಪುತ್ರ ಪ್ರಣಾಮ್ ದೇವರಾಜ್ ಅಭಿನಯದ ದ್ವಿತೀಯ ಚಿತ್ರ ʼವೈರಂʼ ಸಿನಿಮಾದ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದೆ. ನಟ ದೇವರಾಜ್, ಚಂದ್ರಕಲಾ ದೇವರಾಜ್ ಹಾಗೂ ರಾಗಿಣಿ ಪ್ರಜ್ವಲ್ ಟೀಸರ್ ಬಿಡುಗಡೆ ಮಾಡಿದರು. ಆಂಗ್ರಿ ಯಂಗ್ ಮ್ಯಾನ್ ಆಗಿ ಪ್ರಣಾಮ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದು, ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ.
Vairam teaser : ಹಿರಿಯನಟ ದೇವರಾಜ್ ಪುತ್ರ ಪ್ರಣಾಮ್ ದೇವರಾಜ್ ಅಭಿನಯದ ದ್ವಿತೀಯ ಚಿತ್ರ ʼವೈರಂʼ ಸಿನಿಮಾದ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದೆ. ನಟ ದೇವರಾಜ್, ಚಂದ್ರಕಲಾ ದೇವರಾಜ್ ಹಾಗೂ ರಾಗಿಣಿ ಪ್ರಜ್ವಲ್ ಟೀಸರ್ ಬಿಡುಗಡೆ ಮಾಡಿದರು. ಆಂಗ್ರಿ ಯಂಗ್ ಮ್ಯಾನ್ ಆಗಿ ಪ್ರಣಾಮ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದು, ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ.
ವೈರಂ ಟೀಸರ್ ಬಿಡುಗಡೆ ಮಾಡಿದ ದೇವರಾಜ್ ಅವರು ಮಾತನಾಡುತ್ತಾ, ಕನ್ನಡ ಚಿತ್ರರಂಗ ಈಗ ಮತ್ತೆ ಬ್ಯುಸಿಯಾಗಿದೆ. ಇಂತಹ ಸಮಯದಲ್ಲಿ ನನ್ನ ಮಗನ 2ನೇ ಸಿನಿಮಾ ಬರುತ್ತಿದೆ. ನಿರ್ದೇಶಕ ಸಾಯಿಶಿವನ್ ಒಳ್ಳೆಯ ಸಿನಿಮಾ ಮಾಡಿದ್ದಾರೆ. ಚಿತ್ರದ ಹಾಡುಗಳನ್ನು ಕೇಳಿದ್ದೇನೆ. ಚೆನ್ನಾಗಿದೆ. ಈ ಸಿನಿಮಾ ಶತದಿನೋತ್ಸವ ಆಚರಿಸಲಿ ಎಂದು ಶುಭ ಹಾರೈಸಿದರು.
ಇದನ್ನೂ ಓದಿ: ಆಸ್ಕರ್ ರೇಸ್‌ನಲ್ಲಿ ಕನ್ನಡಿಗರ ಸಿನಿಮಾ : ʼಕಾಂತಾರʼ, ʼವಿಕ್ರಾಂತ್ ರೋಣʼ.. ಜಯ ಯಾರಿಗೆ..?
ಚಿಕ್ಕ ವಯಸಿನಿಂದ ಅಪ್ಪ, ಅಣ್ಣನ ಸಿನಿಮಾಗಳನ್ನು ನೋಡಿಕೊಂಡು ಬೆಳೆದವನು. 4 ವರ್ಷಗಳ ನಂತರ ಈ ಸ್ಟೇಜ್ ಮೇಲೆ ನಿಂತು ಮಾತನಾಡುತ್ತಿದ್ದೇನೆ.. ಹಿಂದಿನ ಚಿತ್ರದಲ್ಲಿ ಚಾಕೊಲೇಟ್ ಬಾಯ್ ಆಗಿದ್ದೆ. ಈ ಸಿನಿಮಾದಲ್ಲಿ ಆಕ್ಷನ್ ಹೀರೋ ಆಗಿದ್ದೆನೆ. ಸಾಯಿ ಶಿವನ್ ಅವರಲ್ಲಿ ತುಂಬಾ ಕಾನ್ಫಿಡೆನ್ಸ್ ಇದೆ. ನಿರ್ಮಾಪಕರಾಗಿ ಮಲ್ಲಿಕಾರ್ಜುನ ಹಾಗೂ ವೇಮಾರೆಡ್ಡಿ ಅವರು ತುಂಬಾ ಸಪೋರ್ಟ್ ಮಾಡಿದ್ದಾರೆ. ಡಿ.ಓ.ಪಿ. ಕೆಲಸವೂ ಅದ್ಭುತವಾಗಿದೆ. ನಾನು ಇಷ್ಟು ಚೆನ್ನಾಗಿ ತೆರೆಮೇಲೆ ಕಾಣಿಸಲು ಅವರೇ ಕಾರಣ.
ಒಬ್ಬ ಹೀರೋ ಗುರುತಿಸಿಕೊಳ್ಳೋದು ಅವನೆದುರು ಸ್ಟ್ರಾಂಗ್ ವಿಲನ್ ಇದ್ದಾಗ, ನನಗೆ ಎರಡನೇ ಚಿತ್ರದಲ್ಲೇ ಗರುಡರಾಮ್ ರಂಥ ಖಳನಟರೆದುರು ಅಭಿನಯಿಸುವ ಅವಕಾಶ ಸಿಕ್ತು. ಶಂಕರ್ ಅಶ್ವಥ್ ಹಾಗೂ ವೀಣಾಸುಂದರ್ ನನ್ನ ತಂದೆ, ತಾಯಿ ಪಾತ್ರ ಮಾಡಿದ್ದಾರೆ.ಚಿತ್ರದಲ್ಲಿ ಎಂಜಾಯ್ ಮಾಡುವಂಥ ೪ ಹಾಡುಗಳಿದ್ದು, ಕವಿರಾಜ್, ನಾಗೇಂದ್ರ ಪ್ರಸಾದ್, ರಾಮ್ ನಾರಾಯಣ್ ಹಾಡುಗಳನ್ನು ಬರೆದಿದ್ದಾರೆ ಎಂದು ನಾಯಕ ಪ್ರಣಾಮ್ ದೇವರಾಜ್ ತಿಳಿಸಿದರು.
ಇದನ್ನೂ ಓದಿ: Pathaan trailer : ಜೈಹಿಂದ್.. ಘೋಷಣೆ, ಸೈನಿಕನ ದೇಶ ಭಕ್ತಿ, ʼಪಠಾಣ್ʼ ಟ್ರೇಲರ್ ಸೂಪರ್..!
ಚಿತ್ರದ ನಾಯಕಿ ಮೋನಾಲ್ ಮಾತನಾಡುತ್ತ ಇದು ನನ್ನ ಮೊದಲ ಕನ್ನಡ ಚಿತ್ರ. ಒಬ್ಬ ಕ್ರಿಶ್ಚಿಯನ್ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ. ಒಂದೊಳ್ಳೆ ಲವ್ ಸ್ಟೋರಿ ಚಿತ್ರದಲ್ಲಿದೆ ಎಂದರು. ಚಿತ್ರದಲ್ಲಿ ಜನರಿಗೆ ಒಂದು ಯೂನಿವರ್ಸಲ್ ಮೆಸೇಜ್ ಇದೆ. ಜನ ಬದಲಾಗಬೇಕು ಎಂದು ಹೇಳಲಾಗಿದೆ. ಜನ ಸಪೋರ್ಟ್ ಮಾಡುತ್ತಾರೆಂಬ ನಂಬಿಕೆಯಿದೆ ಎಂದರು ಖಳನಾಯಕ ಗರುಡಾರಾಮ್.
ಚಿತ್ರದಲ್ಲಿ ಹೀರೋ ಡೆಡಿಕೇಶನ್, ಇನ್ವಾಲ್ ಮೆಂಟ್ ತುಂಬಾ ಚೆನ್ನಾಗಿತ್ತು. ಆತ ಸಿಂಗಲ್ ಟೇಕ್ ಆರ್ಟಿಸ್ಟ್ ಎಂದು ನಿರ್ದೇಶಕ ಸಾಯಿಶಿವನ್, ಪ್ರಣಾಮ್ ದೇವರಾಜ್ ಅವರನ್ನು ಹೊಗಳಿದರು. ನಿರ್ಮಾಪಕರಾದ ಜೆ.ಮಲ್ಲಿಕಾರ್ಜುನ ಹಾಗೂ ವೇಮಾರೆಡ್ಡಿ ಅವರು ಚಿತ್ರದ ಬಗ್ಗೆ ಮಾತನಾಡಿದರು. ಗೋಪಿನಾಥ್ ಅವರ ಛಾಯಾಗ್ರಹಣ ಹಾಗೂ ಮಹತಿ ಸ್ವರಸಾಗರ್ ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.