Pathaan trailer : ಜೈಹಿಂದ್‌.. ಘೋಷಣೆ, ಸೈನಿಕನ ದೇಶ ಭಕ್ತಿ, ʼಪಠಾಣ್‌ʼ ಟ್ರೇಲರ್‌ ಸೂಪರ್‌..!

ಬಹುನಿರೀಕ್ಷಿತ ಪಠಾಣ್ ಚಿತ್ರದ ಟ್ರೇಲರ್ ರಿಲೀಸ್‌ ಆಗಿದೆ. ವಿವಾದಗಳೆಲ್ಲವನ್ನೂ ಮೆಟ್ಟಿನಿಂತು ಚಿತ್ರಗಳಲ್ಲಿ ಜೈ ಹಿಂದ್ ಘೋಷಣೆ ಮೊಳಗಿದೆ. ಸಖತ್‌ ಆಕ್ಷನ್‌, ಥ್ರಿಲ್ಲರ್‌ ಕಥೆ, ಕೆಚ್ಚೆದೆಯ ಸೈನಿಕನ ಹೋರಾಟ ಅದ್ಭುತವಾಗಿದೆ. ವಿಲನ್‌ ಪಾತ್ರದಲ್ಲಿ ಕಾಣಿಸಿಕೊಂಡಿರುವ ಜಾನ್ ಅಬ್ರಹಾಂ ಜೊತೆ ಕಿಂಗ್‌ ಖಾನ್‌ ಅಬ್ಬರಿಸಿದ್ದಾರೆ. ಎಜೆಂಟ್‌ ಪಾತ್ರದಲ್ಲಿ ಬಾದ್‌ ಶಾ ಕಾಣಿಸಿಕೊಂಡಿದ್ದು, ವೈರಿಗಳಿಂದ ಭಾರತದೇಶವನ್ನು ಕಾಪಾಡುವ ಏಕದೃಷ್ಟಿಯ ಸಿನಿಮಾದ ಟ್ರೈಲರ್‌ ಸಖತ್ತಾಗಿದೆ.

Written by - Krishna N K | Last Updated : Jan 10, 2023, 01:51 PM IST
  • ಪಠಾಣ್ ಚಿತ್ರದ ಟ್ರೇಲರ್ ರಿಲೀಸ್‌ ಆಗಿದೆ.
  • ವಿವಾದಗಳೆಲ್ಲವನ್ನೂ ಮೆಟ್ಟಿನಿಂತು ಚಿತ್ರಗಳಲ್ಲಿ ಜೈ ಹಿಂದ್ ಘೋಷಣೆ ಮೊಳಗಿದೆ.
  • ವೈರಿಗಳಿಂದ ಭಾರತದೇಶವನ್ನು ಕಾಪಾಡುವ ಏಕದೃಷ್ಟಿಯ ಸಿನಿಮಾದ ಟ್ರೈಲರ್‌ ಸಖತ್ತಾಗಿದೆ.
Pathaan trailer : ಜೈಹಿಂದ್‌.. ಘೋಷಣೆ, ಸೈನಿಕನ ದೇಶ ಭಕ್ತಿ, ʼಪಠಾಣ್‌ʼ ಟ್ರೇಲರ್‌ ಸೂಪರ್‌..! title=

Pathaan trailer : ಬಹುನಿರೀಕ್ಷಿತ ಪಠಾಣ್ ಚಿತ್ರದ ಟ್ರೇಲರ್ ರಿಲೀಸ್‌ ಆಗಿದೆ. ವಿವಾದಗಳೆಲ್ಲವನ್ನೂ ಮೆಟ್ಟಿನಿಂತು ಚಿತ್ರಗಳಲ್ಲಿ ಜೈ ಹಿಂದ್ ಘೋಷಣೆ ಮೊಳಗಿದೆ. ಸಖತ್‌ ಆಕ್ಷನ್‌, ಥ್ರಿಲ್ಲರ್‌ ಕಥೆ, ಕೆಚ್ಚೆದೆಯ ಸೈನಿಕನ ಹೋರಾಟ ಅದ್ಭುತವಾಗಿದೆ. ವಿಲನ್‌ ಪಾತ್ರದಲ್ಲಿ ಕಾಣಿಸಿಕೊಂಡಿರುವ ಜಾನ್ ಅಬ್ರಹಾಂ ಜೊತೆ ಕಿಂಗ್‌ ಖಾನ್‌ ಅಬ್ಬರಿಸಿದ್ದಾರೆ. ಎಜೆಂಟ್‌ ಪಾತ್ರದಲ್ಲಿ ಬಾದ್‌ ಶಾ ಕಾಣಿಸಿಕೊಂಡಿದ್ದು, ವೈರಿಗಳಿಂದ ಭಾರತದೇಶವನ್ನು ಕಾಪಾಡುವ ಏಕದೃಷ್ಟಿಯ ಸಿನಿಮಾದ ಟ್ರೈಲರ್‌ ಸಖತ್ತಾಗಿದೆ.

ಹೌದು... ಹಾಡೋಂದರ ಮೂಲಕ ವಿವಾದಕ್ಕೆ ಗುರಿಯಾಗಿದ್ದ ಪಠಾಣ್‌, ಟ್ರೇಲರ್‌ ಮೂಲಕ ಎಲ್ಲಾ ಕಾಂಟ್ರೊವರ್ಸಿಗಳಿಗೆ ಪುಲ್‌ ಸ್ಟಾರ್‌ ಇಟ್ಟಂತಿದೆ. ಪಠಾಣ್‌ ಒಬ್ಬ ದೇಶ ಭಕ್ತ ಸೈನಿಕನಾಗಿ ಎಲ್ಲರ ಮನ ಗೆದ್ದಂತಿದೆ. ಟ್ರೇಲರ್‌ ನೋಡಿದ್ರೆ ಗೊತ್ತಾಗುತ್ತೆ ಇದೋಂದು ಪಕ್ಕಾ ದೇಶ ಭಕ್ತಿ ಸಿನಿಮಾ ಅನ್ನೋದು. ಸೈನಿಕನ ಶೌರ್ಯ, ಸಾಹಸ ಹಾಗೂ ದೇಶಕ್ಕಾಗಿ ಯೋಧನೊಬ್ಬ ಹೋರಾಡಲು ತನ್ನ ಪ್ರಾಣವನ್ನೂ ಲೆಕ್ಕಿಸುವುದಿಲ್ಲ ಎಂಬ ಡೈಲಾಗ್‌ ಪಠಾಣ್‌ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಕೊನೆಯಲ್ಲಿ ಜೈ ಹಿಂದ್ ಎಂದು ಹೇಳುವ ಮೂಲಕ ಟ್ರೇಲರ್ ಕೊನೆಗೊಳ್ಳುತ್ತದೆ. ಇದೀಗ ಟ್ರೇಲರ್‌ ನೋಡಿದ್ರೆ ಚಿತ್ರದ ಮೇಲಿದ್ದ ಎಲ್ಲಾ ವಿವಾದಗಳು ಕಡಿಮೆಯಾಗುತ್ತವಾ ಎಂಬ ಪ್ರಶ್ನೆ ಮೂಡುವಂತಿದೆ. 

ಇದನ್ನೂ ಓದಿ:

ಔಟ್ ಫಿಕ್ಸ್ ಎಕ್ಸ್ ಎಂಬ ಭಯೋತ್ಪಾದಕ ಸಂಘಟನೆ ಭಾರತದ ಮೇಲೆ ದೊಡ್ಡ ಪ್ರಮಾಣದ ದಾಳಿಯನ್ನು ಯೋಜಿಸಿರುತ್ತದೆ. ಅದನ್ನು ತಡೆಯಲು ಸರ್ಕಾರ ಪಠಾಣ್‌ನನ್ನು ನಿಯೋಜಿಸುತ್ತದೆ. ಹೀಗೆ ಶುರುವಾಗುವ ಟ್ರೇಲರ್.. ಪಠಾಣ್ ಎಂಟ್ರಿಯಿಂದ ರೋಚಕತೆ ಪಡೆಯುತ್ತದೆ. ಚಿತ್ರದಲ್ಲಿರುವ ಆಕ್ಷನ್ ಸೀಕ್ವೆನ್ಸ್‌ಗಳು ನಿಜವಾಗಿಯೂ ಮತ್ತೊಂದು ಲೆವೆಲ್‌ನಲ್ಲಿವೆ. ದೀಪಿಕಾ ಪಡುಕೋಣೆ ಸ್ಟಂಟ್‌ಗಳು ಕೂಡ ಕಣ್ಣು ಕುಕ್ಕುವಂತಿವೆ.

ಪಠಾಣ್‌ನಲ್ಲಿ ಜಾನ್ ಅಬ್ರಹಾಂ ಮುಖ್ಯ ಖಳನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಪಠಾಣ್ ದೇಶದ ಮೇಲಿನ ದಾಳಿಯನ್ನು ಹೇಗೆ ನಿಲ್ಲಿಸ್ತಾನೆ.. ಈ ದಾಳಿ ಹಿಂದಿನ ರೂವಾರಿ ಯಾರು..? ಅಸಲಿಗೆ ಪಠಾಣ್ ಯಾರು..? ಯಾಕೆ ದೇಶ ಬಿಟ್ಟು ದೂರ ಇದ್ದ.. ಮತ್ಯಾಕೆ ಮಿಷನ್‌ಗೆ ಪಾಠಾಣ್‌ನನ್ನು ಕರೆದ್ರು? ಎನ್ನುವ ಹಲವಾರು ಕುತೂಹಲಕಾರಿ ಪ್ರಶ್ನೆಗಳನ್ನು ಟ್ರೇಲರ್‌ ಹುಟ್ಟುಹಾಕಿದೆ. ಪಠಾಣ್ ಚಿತ್ರದ ಮೂಲಕ ಶಾರುಖ್ ಬಯಸಿದ್ದ ಯಶಸ್ಸು ಸಿಗಲಿದೆ ಎನ್ನುವ ಮಾತು ಸಹ ನಿಜವಾಗುವಂತಿದೆ. ಈ ಚಿತ್ರ ಜನವರಿ 25 ರಂದು ದೇಶಾದ್ಯಂತ ಬಿಡುಗಡೆಯಾಗುತ್ತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News