ಬೆಂಗಳೂರು : ನವರಸ ನಾಯಕ ಜಗ್ಗೇಶ್ (Jaggesh) ಯಾವತ್ತೂ ತಮ್ಮ ತಂದೆತಾಯಿಯ ಬಗ್ಗೆ ಹೆಮ್ಮೆಯಿಂದ ಮಾತನಾಡುತ್ತಿರುತ್ತಾರೆ. ತಮ್ಮ ಹೆತ್ತವರ ಬಗ್ಗೆ  ಜಗ್ಗೇಶ್  ಯಾವಾಗಲೂ ಬಹಳ ಗೌರವದಿಂದ ಮಾತನಾಡುತ್ತಾರೆ. ಅಪ್ಪ ಅಂದರೆ ಆಕಾಶ ಅನ್ನುತ್ತಾರಲ್ಲ ಹಾಗೆ   ಜಗ್ಗೇಶ್ ಅವರಿಗೆ ಅಪ್ಪ ಆಕಾಶ ಮಾತ್ರ  ಅಲ್ಲ ಸರ್ವಸ್ವವೂ ಹೌದು. ಇವತ್ತು ಅಂದರೆ ಜನವರಿ 21 ಜಗ್ಗೇಶ್ ಅವರ ತಂದೆ ಶಿವಲಿಂಗಪ್ಪ ಅವರ ಜನ್ಮದಿನ.. ಅಪ್ಪನ ಜನ್ಮದಿನದಂದು ಜಗ್ಗೇಶ್ ಅಪ್ಪನ ಬಗ್ಗೆ  ಕೆಲ  ಮಾತುಗಳನ್ನಾಡಿದ್ದಾರೆ. ತಮ್ಮ ಮನಸ್ಸಿನ ಭಾವನೆಗಳನ್ನು ಹಂಚಿಕೊಂಡಿದ್ದಾರೆ. ಎಲ್ಲವನ್ನೂ ಮರೆತು ತಮ್ಮ ಹೆಸರಿನ ಪಕ್ಕ ನೆಚ್ಚಿನ ನಟ, ನಟಿಯರ ರಾಜಕಾರಣಿಗಳ ಹೆಸರು ಸೇರಿಸಿಕೊಳ್ಳುವ ಯುವಕರಿಗೆ ಬುದ್ದಿ ಮಾತು ಹೇಳಿದ್ದಾರೆ. 


COMMERCIAL BREAK
SCROLL TO CONTINUE READING

ಜಗ್ಗೇಶ್ ಮನದಾಳದ ಮಾತು ಹೀಗಿದೆ..
ಇದು ನನ್ನ 50ನೆ ಹುಟ್ಟುಹಬ್ಬದ ಸಂದರ್ಭ.! ಮಗನ ಹುಟ್ಟುಹಬ್ಬ (Birthday) ಬಂದರೆ ಬೆಳಗಿನ ಜಾವ 5ಘಂಟೆಗೆ ಮನೆಮುಂದೆ ಇರುತ್ತಿದ್ದರು ಅಪ್ಪ! ಪ್ರತಿಯೊಬ್ಬ ತಂದೆಗೆ ತನ್ನ ಬೆಳವಣಿಗೆಗಿಂತ ತನ್ನ ಮಕ್ಕಳು ಸಾಧಿಸಿ  ಬಿಟ್ಟರೆ ತಂದೆಗೆ ಆಗುವ ಆನಂದ ಬ್ರಹ್ಮಾನಂದ.! ಆ ವಿಷಯದಲ್ಲಿ ನಾನು ಅಪ್ಪನಿಗೆ ಹೆಮ್ಮೆ ಪಡುವಂತೆ ರಾಯರ ದಯೆಯಿಂದ ಬೆಳೆದು ಅಪ್ಪನ (Father) ಹಾಗು ವಂಶದ ಗೌರವ ಹೆಚ್ಚಿಸಿದೆ. ಯಾಕೆ ಜನ್ಮಕೊಟ್ಟ ತಂದೆ ತನ್ನ ಬೆಳವಣಿಗೆಗಿಂತ ಮಕ್ಕಳ ಬೆಳವಣಿಗೆ ನೋಡಲು ಶಬರಿಯಂತೆ ಕಾಯೋದು ಎಂದರೆ ಮಗ ಗೆದ್ದರೆ ತಾನು ಗೆದ್ದಂತೆ, ತನ್ನ ವಂಶ  ಗೆದ್ದಂತ ಭಾವ!


ಇದನ್ನೂ ಓದಿ: Sumalatha Ambareesh: ನುಡಿದಂತೆ ನಡೆದ ಸಂಸದೆ ಸುಮಲತಾ ಅಂಬರೀಶ್..!


ಎಲ್ಲಾ ಯುವಸಮಾಜಕ್ಕು ನನ್ನ ಸಂದೇಶ.  ದಯಮಾಡಿ ಎಷ್ಟೆ ಶ್ರಮವಾದರು ಅಪಮಾನವಾದರು ಅವಮಾನವಾದರು ಸಹಿಸಿ ನಿಮ್ಮ ಮಿತಿಯಲ್ಲಿ ನಿಮ್ಮ ಇಷ್ಟ ಕ್ಷೇತ್ರದಲ್ಲಿ ಅಪ್ಪ ಬದುಕಿರುವಾಗಲೆ ಜೀವನಗೆದ್ದು ಅಪ್ಪನಿಗೆ ಹೆಮ್ಮೆಪಡುವಂತೆ ಮಾಡಿಬಿಡಿ. ಆಗ ನಿಮ್ಮ ಮಕ್ಕಳು ನಿಮ್ಮ ಹೆಸರು ಉಳಿಸುವ ಯೋಗ ರಾಯರು (Raghavendra Swmay) ನೀಡುತ್ತಾರೆ. ನಾವು ನಡೆದುಕೊಂಡಂತೆ ನಮ್ಮ ಮುಂದಿನ ಪೀಳಿಗೆ ಇರುತ್ತದೆ  ಎಂದು ಯುವಕರಿಗೆ (Youth)ಕಿವಿಮಾತು ಹೇಳಿದ್ದಾರೆ.


(Politician) ಹೆಸರು ಸೇರಿಸಬೇಡಿ. ಜನ್ಮಕೋಟ್ಟ ತಂದೆ ಒಳಗೆ ದುಃಖಪಡುತ್ತಾನೆ. ನೆನಪಿಡಿ ನಾವು ಏನೇ ಸಾಧಿಸಿದರು ಆ ಸಾಧನೆಗೆ ದೇಹ ಜೀವ ಉಸಿರು ಅಪ್ಪನ ಭಿಕ್ಷೆಯಿಂದಲೇ.  ಇಂದು ಅಪ್ಪನ ನಾನು ನೆನೆಯಲು ಕಾರಣ,  ಅಪ್ಪ ಹುಟಿದ ದಿನ.  21/1/1931ಅಪ್ಪ ಹುಟ್ಟಿದ್ದು!


ತಿಳಿದೋ ತಿಳಿಯದೆಯೋ ಯೌವನದ ಮದದಲ್ಲಿ ಅಪ್ಪನಿಗೆ ನೋಯಿಸಿದ್ದರೆ ಕ್ಷಮೆಯಿರಲಿ ಅಪ್ಪ ನಿನ್ನ ಮಗನ ಮೇಲೆ #ILoveuಅಪ್ಪ ಎಂದು ಜಗ್ಗೇಶ್ (Jaggesh) ಬರೆದುಕೊಂಡಿದ್ದಾರೆ.


ಇದನ್ನೂ ಓದಿ: Pruthvi Ambaar: 'ದಿಯಾ' ಸಿನಿಮಾದ ನಟ ಪೃಥ್ವಿ ಅಂಬರ್‌ಗೆ ಸಿಕ್ತು 'ಬಾಲಿವುಡ್‌ ಫಿಲ್ಮ್ ಆಫರ್'..‌!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G 
Apple Link - https://apple.co/3hEw2hy 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.