Pruthvi Ambaar: 'ದಿಯಾ' ಸಿನಿಮಾದ ನಟ ಪೃಥ್ವಿ ಅಂಬರ್‌ಗೆ ಸಿಕ್ತು 'ಬಾಲಿವುಡ್‌ ಫಿಲ್ಮ್ ಆಫರ್'..‌!

'ದಿಯಾ' ಚಿತ್ರದ ಹಿಂದಿ ರಿಮೇಕ್‌! ಚಿತ್ರಮಂದಿರದಲ್ಲಿ ಉತ್ತಮ ಪ್ರದರ್ಶನ ಕಂಡು, ಬಳಿಕ ಓಟಿಟಿಯಲ್ಲೂ ಪ್ರೇಕ್ಷಕರ ಮನಗೆದ್ದ ಈ ಸಿನಿಮಾ ಈಗ ಹಿಂದಿಗೆ ರಿಮೇಕ್‌ ಆಗುತ್ತಿದೆ.

Last Updated : Jan 20, 2021, 01:05 PM IST
  • 2020ರಲ್ಲಿ ತೆರೆಕಂಡು ಜನಮೆಚ್ಚುಗೆ ಗಳಿಸಿದ 'ದಿಯಾ' ಸಿನಿಮಾದಿಂದ ನಟ ಪೃಥ್ವಿ ಅಂಬರ್‌ ಅವರಿಗೆ ಬೇಡಿಕೆ ಹೆಚ್ಚಾಗಿದೆ.
  • 'ದಿಯಾ' ಸಿನಿಮಾಗೆ ನಿರ್ದೇಶನ ಮಾಡಿದ್ದ ಕೆ.ಎಸ್‌. ಅಶೋಕ್‌ ಅವರು ಈಗ ರಿಮೇಕ್‌ನಲ್ಲಿ ಕ್ರಿಯೇಟಿವ್‌ ಹೆಡ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಈ ಚಿತ್ರದ ಶೂಟಿಂಗ್‌ ಕೂಡ ಆರಂಭ ಆಗಿದೆ.
  • 'ದಿಯಾ' ಚಿತ್ರದ ಹಿಂದಿ ರಿಮೇಕ್‌! ಚಿತ್ರಮಂದಿರದಲ್ಲಿ ಉತ್ತಮ ಪ್ರದರ್ಶನ ಕಂಡು, ಬಳಿಕ ಓಟಿಟಿಯಲ್ಲೂ ಪ್ರೇಕ್ಷಕರ ಮನಗೆದ್ದ ಈ ಸಿನಿಮಾ ಈಗ ಹಿಂದಿಗೆ ರಿಮೇಕ್‌ ಆಗುತ್ತಿದೆ.
Pruthvi Ambaar: 'ದಿಯಾ' ಸಿನಿಮಾದ ನಟ ಪೃಥ್ವಿ ಅಂಬರ್‌ಗೆ ಸಿಕ್ತು 'ಬಾಲಿವುಡ್‌ ಫಿಲ್ಮ್ ಆಫರ್'..‌! title=

ಬೆಂಗಳೂರು: 2020ರಲ್ಲಿ ತೆರೆಕಂಡು ಜನಮೆಚ್ಚುಗೆ ಗಳಿಸಿದ 'ದಿಯಾ' ಸಿನಿಮಾದಿಂದ ನಟ ಪೃಥ್ವಿ ಅಂಬರ್‌ ಅವರಿಗೆ ಬೇಡಿಕೆ ಹೆಚ್ಚಾಗಿದೆ. ಸ್ಯಾಂಡಲ್‌ವುಡ್‌ನಲ್ಲಿ ಹಲವು ಸಿನಿಮಾಗಳನ್ನು ಒಪ್ಪಿಕೊಂಡಿರುವ ಅವರು ಈಗ ಬಾಲಿವುಡ್‌ ಕಡೆಗೆ ಮುಖ ಮಾಡಿದ್ದಾರೆ! ಹೌದು, ಅಂಥದ್ದೊಂದು ಸೂಪರ್‌ ಅವಕಾಶ ಅವರಿಗೆ ಸಿಕ್ಕಿದೆ.

ಅಷ್ಟಕ್ಕೂ ಪೃಥ್ವಿ ನಟಿಸುತ್ತಿರುವ ಹಿಂದಿ ಸಿನಿಮಾ ಯಾವುದು? 'ದಿಯಾ' ಚಿತ್ರ(Dia Film)ದ ಹಿಂದಿ ರಿಮೇಕ್‌! ಚಿತ್ರಮಂದಿರದಲ್ಲಿ ಉತ್ತಮ ಪ್ರದರ್ಶನ ಕಂಡು, ಬಳಿಕ ಓಟಿಟಿಯಲ್ಲೂ ಪ್ರೇಕ್ಷಕರ ಮನಗೆದ್ದ ಈ ಸಿನಿಮಾ ಈಗ ಹಿಂದಿಗೆ ರಿಮೇಕ್‌ ಆಗುತ್ತಿದೆ. ಅದರಲ್ಲಿ ಪೃಥ್ವಿ ನಟಿಸುತ್ತಿದ್ದಾರೆ ಎಂಬ ಮಾಹಿತಿ ಬಲವಾಗಿ ಕೇಳಿಬಂದಿದೆ. ಕನ್ನಡದಲ್ಲಿ ಅವರು ಆದಿ ಎಂಬ ಪಾತ್ರ ಮಾಡಿದ್ದರು. ರಿಮೇಕ್‌ನಲ್ಲೂ ಅದೇ ಪಾತ್ರವನ್ನು ನಿಭಾಯಿಸಲಿದ್ದಾರೆ ಎನ್ನಲಾಗಿದೆ.

Sajid Khan ಮೇಲೆ Sherlyn Chopra ಗಂಭೀರ ಆರೋಪ

'ದಿಯಾ' ಸಿನಿಮಾಗೆ ನಿರ್ದೇಶನ ಮಾಡಿದ್ದ ಕೆ.ಎಸ್‌. ಅಶೋಕ್‌ ಅವರು ಈಗ ರಿಮೇಕ್‌ನಲ್ಲಿ ಕ್ರಿಯೇಟಿವ್‌ ಹೆಡ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಈ ಚಿತ್ರದ ಶೂಟಿಂಗ್‌ ಕೂಡ ಆರಂಭ ಆಗಿದೆ. ಲಖನೌನಲ್ಲಿ ಚಿತ್ರತಂಡ ಬೀಡು ಬಿಟ್ಟಿದೆ. ಇತ್ತೀಚೆಗೆ ಪೃಥ್ವಿ ಅವರು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡ ಒಂದು ಫೋಟೋ ಕೂಡ ಈ ಮಾಹಿತಿಗೆ ಪೂರಕ ಆಗುವಂತಿದೆ. ಖುಷಿ ರವಿ ಮತ್ತು ದೀಕ್ಷಿತ್‌ ಶೆಟ್ಟಿ ಮಾಡಿದ್ದ ಪಾತ್ರಗಳನ್ನು ಹಿಂದಿಯಲ್ಲಿ ಯಾರು ಮಾಡುತ್ತಾರೆ ಎಂಬ ಕೌತುಕ ಈಗ ನಿರ್ಮಾಣ ಆಗಿದೆ.

Sonu Sood ಹೆಸರಿನಲ್ಲಿ ಉಚಿತ ಆಂಬುಲೆನ್ಸ್ ಸೇವೆ ಆರಂಭ

ಸ್ಯಾಂಡಲ್‌ವುಡ್‌ನಲ್ಲಿ ಮಿಂಚುವುದಕ್ಕೂ ಮುನ್ನ ಕಿರುತೆರೆಯಲ್ಲಿ ಪೃಥ್ವಿ ಅಂಬರ್‌ ಸಕ್ರಿಯರಾಗಿದ್ದರು. ಅಲ್ಲದೆ, ತುಳು ಸಿನಿಮಾಗಳಲ್ಲಿಯೂ ಅವರು ಬ್ಯುಸಿ ಆಗಿದ್ದರು. 'ದಿಯಾ' ಸಿನಿಮಾದ ಯಶಸ್ಸಿನ ಬಳಿಕ ಅವರಿಗೆ ಚಂದನವನದಲ್ಲಿ ಬೇಡಿಕೆ ಹೆಚ್ಚಿದೆ. ಶಿವರಾಜ್‌ಕುಮಾರ್‌ ಜೊತೆಗೆ 'ಶಿವಪ್ಪ' ಚಿತ್ರದಲ್ಲಿ ನಟಿಸುವ ಅವಕಾಶ ಅವರಿಗೆ ಸಿಕ್ಕಿದೆ. ಲೋಹಿತ್‌ ಎಚ್‌. ನಿರ್ಮಾಣದ 'ಲೈಫ್‌ ಈಸ್‌ ಬ್ಯೂಟಿಫುಲ್‌' ಸಿನಿಮಾದಲ್ಲಿ ಅವರು ಅಭಿನಯಿಸುತ್ತಿದ್ದಾರೆ. 'ಫಾರ್‌ ರಿಜಿಸ್ಟ್ರೇಷನ್‌' ಮತ್ತು 'ಶುಗರ್‌ಲೆಸ್‌' ಚಿತ್ರಗಳೂ ಅವರ ಕೈಯಲ್ಲಿವೆ.

'ಮಹಾಭಾರತ' ಚಿತ್ರದಲ್ಲಿ 'ದ್ರೌಪದಿ'ಯಾಗಲಿದ್ದಾರೆ ದೀಪಿಕಾ ಪಡುಕೋಣೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3hDyh4G

Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News