ಬೆಂಗಳೂರು: ಇತ್ತೀಚೆಗೆಯಷ್ಟೇ ಹಿಂದಿ ರಾಷ್ಟ್ರ ಭಾಷೆ ಹೌದೋ ಅಲ್ಲವೋ ಎಂಬ ಹೇಳಿಕೆಗೆ ಸಂಬಂಧಿಸಿದಂತೆ ದೇಶಾದ್ಯಂತ ಭಾರೀ ಚರ್ಚೆ ನಡೆದಿತ್ತು. ಅಷ್ಟೇ ಅಲ್ಲದೆ ಈ ವಿಚಾರಕ್ಕೆ ಸಂಬಂಧಿಸಿ ಕಿಚ್ಚ ಸುದೀಪ್‌ ಮತ್ತು ಬಾಲಿವುಡ್‌ ನಟ ಅಜಯ್‌ ದೇವಗನ್‌ ಮಧ್ಯೆ ಟ್ವೀಟ್‌ವಾರ್‌ ನಡೆದಿತ್ತು. ಇದೀಗ ಪ್ರಧಾನಿ ಮೋದಿಯವರು ಪ್ರಾದೇಶಿಕ ಭಾಷೆಗಳ ಕುರಿತಾಗಿ ನೀಡಿರುವ ಹೇಳಿಕೆ ಕಿಚ್ಚನಿಗೆ ಸಂತೋಷ ತಂದಿದೆ. ಈ ಬಗ್ಗೆ ಮಾಧ್ಯಮಗಳಿಗೆ ನೀಡಿದ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ. 


COMMERCIAL BREAK
SCROLL TO CONTINUE READING

ಇದನ್ನು ಓದಿ: ಇನ್ಮುಂದೆ ಮನೆಯಲ್ಲಿ ಬಿಂದಾಸ್ ಎಸಿ ಚಲಾಯಿಸಿ, ಈ ಡಿವೈಸ್ ಬಳಸಿ ವಿದ್ಯುತ್ ಬಿಲ್ ಉಳಿತಾಯ ಮಾಡಿ


ಪ್ರಧಾನಿ ಹೇಳಿದ್ದೇನು ಗೊತ್ತಾ? 
"ಬಿಜೆಪಿಯು ಪ್ರತಿಯೊಂದು ಭಾರತೀಯ ಭಾಷೆಯಲ್ಲಿ ಭಾರತೀಯ ಸಂಸ್ಕೃತಿಯ ಪ್ರತಿಬಿಂಬವನ್ನು ನೋಡುತ್ತದೆ. ಪ್ರತಿಯೊಂದು ಭಾರತೀಯ ಭಾಷೆಯನ್ನು ಪೂಜ್ಯನೀಯವೆಂದು ಪರಿಗಣಿಸುತ್ತದೆ. ಅಷ್ಟೇ ಅಲ್ಲದೆ, ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಸ್ಥಳೀಯ ಭಾಷೆಗಳಿಗೆ ಆದ್ಯತೆ ನೀಡುವುದು ಎಲ್ಲಾ ಪ್ರಾದೇಶಿಕ ಭಾಷೆಗಳಿಗೆ ನಾವು ತೋರುವ ಬದ್ಧತೆಯನ್ನು ತೋರಿಸುತ್ತದೆ. ಬಿಜೆಪಿಯು ಭಾರತೀಯ ಭಾಷೆಗಳನ್ನು ಭಾರತೀಯತೆಯ ಆತ್ಮ ಮತ್ತು ದೇಶಕ್ಕೆ ಉತ್ತಮ ಭವಿಷ್ಯದ ಕೊಂಡಿ ಎಂದು ಪರಿಗಣಿಸುತ್ತದೆ" ಎಂದಿದ್ದಾರೆ. ಕಳೆದ ದಿನ ರಾಜಸ್ಥಾನದ ಜೈಪುರದಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಪದಾಧಿಕಾರಿಗಳ ಸಭೆಯಲ್ಲಿ ಈ ಬಗ್ಗೆ ಮಾತನಾಡಿದ್ದರು. 


ಕಿಚ್ಚನಿಗೆ ಸಂತೋಷ ನೀಡಿದ ಹೇಳಿಕೆ: 
"ನಾನು ಯಾವುದೇ ಗಲಭೆ ಅಥವಾ ಯಾವುದೇ ರೀತಿಯ ಚರ್ಚೆಯನ್ನು ಪ್ರಾರಂಭಿಸುವ ಉದ್ದೇಶ ಹೊಂದಿರಲಿಲ್ಲ. ಇದು ಯಾವುದೇ ಅಜೆಂಡಾ ಇಲ್ಲದೆ ಉಂಟಾಟ ವಾದ. ಇದು ನನ್ನ ವೈಯಕ್ತಿಕ ಅಭಿಪ್ರಾಯವಾಗಿತ್ತು. ಇದೀಗ ಪ್ರಧಾನಿಯವರು ಆಡಿರುವ ಕೆಲವು ಸಾಲುಗಳು ಗೌರವ ಸೂಚಕವಾಗಿದೆ" ಎಂದು ಕಿಚ್ಚ ಸುದೀಪ್‌ ಹೇಳಿದ್ದಾರೆ.  


ಇದನ್ನು ಓದಿ: Kiccha Sudeep : ಅಜಯ್ ದೇವಗನ್ ಗೆ ಬೆವರಿಳಿಸಿದ ಕಿಚ್ಚ ಸುದೀಪ್


"ನಾನು ಕೇವಲ ಕನ್ನಡವನ್ನು ಪ್ರತಿನಿಧಿಸುತ್ತಿಲ್ಲ. ಪ್ರಧಾನಿಯವರ ಈ ಕೆಲವು ಹೇಳಿಕೆಗಳಿಂದ ಇಂದು ಪ್ರತಿಯೊಬ್ಬರ ಮಾತೃಭಾಷೆಯನ್ನು ಗೌರವಿಸಲಾಗಿದೆ. ನಾವು ನರೇಂದ್ರ ಮೋದಿ ಅವರನ್ನು ಕೇವಲ ರಾಜಕಾರಣಿಯಾಗಿ ನೋಡುವುದಿಲ್ಲ, ನಾಯಕರಾಗಿಯೂ ನೋಡುತ್ತೇವೆ. ಇನ್ನು ನಾನು ಯಾರೊಂದಿಗೂ ವೈಶಮ್ಯ ಕಟ್ಟಿಕೊಳ್ಳಲು ಇಷ್ಟಪಡುವುದಿಲ್ಲ. ಕೆಲವು ವಿಷಯಗಳು ಬಂದಾಗ ನನ್ನ ಅಭಿಪ್ರಾಯಗಳನ್ನು ಹೇಳುವ ಹಕ್ಕು ನನಗಿದೆ" ಎಂದು ಕಿಚ್ಚ ಸ್ಪಷ್ಟವಾಗಿ ಹೇಳಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.