ಶಾ ಭೇಟಿಗೆ ತೆರಳಿದ್ದ ಸಿಎಂಗೆ ಸಿಕ್ಕಿದ್ದು ರಾಜ್ಯ ಉಸ್ತುವಾರಿ: ಕರ್ನಾಟಕ ರಾಜಕೀಯ ಸ್ಥಿತಿ ಮುಂದೇನು?

ದೆಹಲಿಯ ಜಿಆರ್‌ಜಿ ರಸ್ತೆಯಲ್ಲಿರುವ ಅರುಣ್‌ ಸಿಂಗ್‌ ನಿವಾಸದಲ್ಲಿ ಉಭಯ ನಾಯಕರು ಸುಮಾರು ಒಂದೂವರೆ ಗಂಟೆಗಳ ಕಾಲ ಮಾತುಕತೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ವಿಧಾನ ಪರಿಷತ್ ‌ಹಾಗೂ ರಾಜ್ಯಸಭೆ‌ ಚುನಾವಣೆಯಲ್ಲಿ ಸ್ಪರ್ಧಿಸಲಿರುವ‌ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸುವ ಕುರಿತು ಚರ್ಚಿಸಲಾಗಿದೆ ಎಂದು ತಿಳಿದುಬಂದಿದೆ.   

Written by - Bhavishya Shetty | Last Updated : May 21, 2022, 12:37 PM IST
  • ಕರ್ನಾಟಕ ರಾಜಕೀಯದಲ್ಲಿ ಭಾರೀ ಬೆಳವಣಿಗೆ
  • ರಾಜ್ಯ ಉಸ್ತುವಾರಿ ಜೊತೆ ಮಾತುಕತೆ ನಡೆಸಿದ ಸಿಎಂ
  • ಒಂದೂವರೆ ಗಂಟೆ ಮಾತುಕತೆ ನಡೆಸಿದ ಉಭಯ ನಾಯಕರು
ಶಾ ಭೇಟಿಗೆ ತೆರಳಿದ್ದ ಸಿಎಂಗೆ ಸಿಕ್ಕಿದ್ದು ರಾಜ್ಯ ಉಸ್ತುವಾರಿ: ಕರ್ನಾಟಕ ರಾಜಕೀಯ ಸ್ಥಿತಿ ಮುಂದೇನು?  title=
Basavaraja Bommai

ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆಯುತ್ತಿದ್ದು, ಕೇಂದ್ರ ಸಚಿವ ಅಮಿತ್‌ ಶಾರನ್ನು ಭೇಟಿ ಮಾಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ನವದೆಹಲಿಗೆ ತೆರಳಿದ್ದರು. ಆದರೆ ಶಾ ಭೇಟಿಗೆ ಅವಕಾಶ ನೀಡದ ಹಿನ್ನೆಲೆಯಲ್ಲಿ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಅವರ ಜೊತೆ ಮಾತುಕತೆ ನಡೆಸಿ ಬೆಂಗಳೂರಿಗೆ ಹಿಂತಿರುಗಿದ್ದಾರೆ. 

ಇದನ್ನು ಓದಿ: Rashmika Mandanna: ವರ್ಕೌಟ್​ ಮಾಡಿದ ಬಳಿಕ ಫೋಟೋ ಹಂಚಿಕೊಂಡ ರಶ್ಮಿಕಾ

ದೆಹಲಿಯ ಜಿಆರ್‌ಜಿ ರಸ್ತೆಯಲ್ಲಿರುವ ಅರುಣ್‌ ಸಿಂಗ್‌ ನಿವಾಸದಲ್ಲಿ ಉಭಯ ನಾಯಕರು ಸುಮಾರು ಒಂದೂವರೆ ಗಂಟೆಗಳ ಕಾಲ ಮಾತುಕತೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ವಿಧಾನ ಪರಿಷತ್ ‌ಹಾಗೂ ರಾಜ್ಯಸಭೆ‌ ಚುನಾವಣೆಯಲ್ಲಿ ಸ್ಪರ್ಧಿಸಲಿರುವ‌ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸುವ ಕುರಿತು ಚರ್ಚಿಸಲಾಗಿದೆ ಎಂದು ತಿಳಿದುಬಂದಿದೆ. ಗೃಹ ಸಚಿವರ ಜೊತೆ ದೂರವಾಣಿ ಮೂಲಕ ಸುದೀರ್ಘ ಚರ್ಚೆ ನಡೆಸಿ ಆ ಬಳಿಕ ರಾಜ್ಯ ಉಸ್ತುವಾರಿ ಜೊತೆ ಮಾತುಕತೆ ನಡೆಸಿದ್ದೇವೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ. 

"ವಿಧಾನ ಪರಿಷತ್ ಮತ್ತು ರಾಜ್ಯಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಉಸ್ತುವಾರಿ ಜೊತೆ ಚರ್ಚಿಸಿದ್ದೇನೆ. ಆದಷ್ಟು ಬೇಗ ಟಿಕೆಟ್ ಹಂಚಿಕೆಯಾಗಲಿದೆ. ಆದರೆ ಸಚಿವ ಸಂಪುಟದ ವಿಚಾರ ಎಲ್ಲಿಯೂ ಚರ್ಚೆ ಮಾಡಿಲ್ಲ. ನಾಳೆ ಸಂಜೆಯೊಳಗೆ ರಾಜ್ಯಸಭಾ ಮತ್ತು ಪರಿಷತ್ ಅಭ್ಯರ್ಥಿಗಳ ಟಿಕೆಟ್ ಫೈನಲ್ ಆಗಲಿದೆ" ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ. ಇನ್ನು ಈ ಹಿಂದೆ ರಮೇಶ್ ಜಾರಕಿಹೊಳಿ ಸಿಎಂ ಬೊಮ್ಮಾಯಿಯವರನ್ನು ಭೇಟಿ ಮಾಡಿ ಸಂಪುಟಕ್ಕೆ ಮರುಸೇರ್ಪಡೆಗೊಳಿಸುವ ಬಗ್ಗೆ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. 

ಇದನ್ನು ಓದಿ: PV Sindhu: ವಿಶ್ವ ಬ್ಯಾಡ್ಮಿಂಟನ್‌ ತಾರೆಯ ಅಪರೂಪದ ಫೋಟೋಗಳು ಇಲ್ಲಿವೆ

ಸದ್ಯ ದೆಹಲಿಯಿಂದ ಬೆಂಗಳೂರಿನತ್ತ ಸಿಎಂ ಬೊಮ್ಮಾಯಿ ಪ್ರಯಾಣ ಬೆಳೆಸಿದ್ದಾರೆ. ರಾಜಧಾನಿಗೆ ಆಗಮಿಸುತ್ತಿದ್ದಂತೆ ಸಿಇಓ ಮತ್ತು ಜಿಲ್ಲಾಧಿಕಾರಿಗಳ ಸಿಎಂ ಸಭೆ ನಡೆಸಲಿದ್ದು, ದೆಹಲಿಯಲ್ಲಿ ನಡೆದ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಯಲಿದೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News