Puneeth Rajkumar : ಹುಬ್ಬಳ್ಳಿಗೆ ಬಂದಾಗ ಅಪ್ಪು ಈ ಊಟ ಮಾಡದೇ ಹೋಗುತ್ತಿರಲಿಲ್ಲ..!
Puneeth rajkumar : ಡಾ. ರಾಜ್ಕುಮಾರ್ ಅವರು ಹುಬ್ಬಳ್ಳಿ ಸಿದ್ಧಾರೂಢ ಮಠಕ್ಕೆ ಭೇಟಿ ನೀಡಿ ಅಜ್ಜನ ದರ್ಶನ ಪಡೆಯುತ್ತಿದ್ದರು. ಹುಬ್ಬಳ್ಳಿಗೂ ರಾಜ್ ಕುಟುಂಬಕ್ಕು ಅವಿನಾಭಾವ ಸಂಬಂಧ ಇದೆ. ಅದರಂತೆ ಪುನೀತ್ ರಾಜ್ಕುಮಾರ್ ಅವರು ಸಹ ಈ ನಗರದ ಜೊತೆ ನಂಟು ಹೊಂದಿದ್ದಾರೆ.
Puneeth rajkumar favorite food : ಸ್ಯಾಂಡಲ್ವುಡ್ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅತೀ ಹೆಚ್ಚು ಇಷ್ಟ ಪಡುವ ಊರುಗಳಲ್ಲಿ ಹುಬ್ಬಳ್ಳಿಯೂ ಸಹ ಒಂದು. ಉತ್ತರ ಕರ್ನಾಟಕ ಅಂದ್ರೆ ಅಪ್ಪುಗೆ ವಿಶೇಷ ಪ್ರೀತಿ. ಅಲ್ಲಿಯ ಜನರೂ ಸಹ ರಾಜ್ ಕುಟುಂಬ ಅಂದ್ರೆ ತುಂಬಾ ಗೌರವಯುತವಾಗಿ ಕಾಣುತ್ತಿದ್ದರು.
ಹೌದು.. ಡಾ. ರಾಜ್ಕುಮಾರ್ ಅವರು ಹುಬ್ಬಳ್ಳಿ ಸಿದ್ಧಾರೂಢ ಮಠಕ್ಕೆ ಭೇಟಿ ನೀಡಿ ಅಜ್ಜನ ದರ್ಶನ ಪಡೆಯುತ್ತಿದ್ದರು. ಕೆಲವೊಂದಿಷ್ಟು ಬಾರಿ ಮಠಕ್ಕೆ ಭೇಟಿ ನೀಡುವ ಸಲುವಾಗಿಯೇ ಹುಬ್ಬಳ್ಳಿಗೆ ಅಣ್ಣಾವ್ರು ಬರುತ್ತಿದ್ದರು. ಅದರಂತೆ ಹುಬ್ಬಳ್ಳಿಗೂ ರಾಜ್ ಕುಟುಂಬಕ್ಕು ಅವಿನಾಭಾವ ಸಂಬಂಧ ಬೆಳೆಯಿತು.
ಇದನ್ನೂ ಓದಿ: ತೇಜಸ್ವಿ ಸೂರ್ಯಗೆ ಮತ್ತೊಮ್ಮೆ ಒಲಿದ ‘ಟಿಕೆಟ್’- ಬಿಜೆಪಿ ಹೈಕಮಾಂಡ್’ಗೆ ಧನ್ಯವಾದ ಸಲ್ಲಿಕೆ
ಇನ್ನು ಹುಬ್ಬಳ್ಳಿಗೆ ಬರುತ್ತಿದ್ದ ಪುನೀತ್ ರಾಜ್ಕುಮಾರ್ ಅವರು, ತಮ್ಮ ಫೇವರೆಟ್ ಫುಡ್ ಸವಿಯದೆ ಹೋಗುತ್ತಿರಲಿಲ್ಲ. ಹೆಚ್ಚಾಗಿ ಅಪ್ಪು ಸಾವಜಿ ಖಾನಾವಳಿ ಊಟ ಇಷ್ಟಪಡುತ್ತಿದ್ದರು. ನಗರದ ದುರ್ಗದ ಬೈಲ್ನಲ್ಲಿರೋ ನಾಕೋಡ್ ಖಾನಾವಳಿಯಿಂದ ತಾವು ತಂಗಿದ್ದ ಹೋಟೆಲ್ಗೆ ಊಟ ತರಿಸಿಕೊಳ್ಳುತ್ತಿದ್ದರಂತೆ.
ಅಲ್ಲದೆ, ಪ್ರಸಿದ್ಧ ಧಾರವಾಡ ಪೇಡ ಅಂದ್ರೆ ಅಪ್ಪು ತುಂಬಾ ಇಷ್ಟವಂತೆ. ಹುಬ್ಬಳಿಗೆ ಬಂದಾಗ ಅದನ್ನು ತರಿಸಿಕೊಂಡು ತಿನ್ನುತ್ತಿದ್ದರು. ಅಪ್ಪು ಇಲ್ಲ ಅಂದ್ರು ಅವರ ನೆನೆಪು ಮರುಕಳಿಸುತ್ತಿದೆ. ಅವರು ಭೇಟಿ ಕೊಟ್ಟ ಸ್ಥಳ, ಮಾತನಾಡಿಸಿದ್ದ ಜನ ಇಂದಿಗೂ ಅವುಗಳನ್ನು ನೆನೆಯುತ್ತಿದ್ದಾರೆ. ಆದರೆ ಪರಮಾತ್ಮ ಬಹುಬೇಗ ನಮ್ಮನ್ನ ಅಗಲಿದ್ದು ಇಂದಿಗೂ ನುಂಗಲಾರದ ತುತ್ತಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.