“ನನ್ನ ತಾಯಿಯನ್ನು ಕೊಂದಿದ್ದು ನೀನೇ..!”
ಮುಂಬೈ : ನನ್ನ ತಾಯಿ ಆದಿಲ್ ದುರಾನಿಯಿಂದಲೇ ಸಾವನ್ನಪ್ಪಿದ್ದು ಎಂದು ನಟಿ ರಾಖಿ ಸಾವಂತ್ ಪತಿಯ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ರಾಖಿ, ಆದಿಲ್ ತಾಯಿ ಜಯ ಭೇದಳ ಚಿಕಿತ್ಸೆಗೆ ಹಣ ನೀಡಲಿಲ್ಲ ಇದರಿಂದಾಗಿಯೇ ತನ್ನ ತಾಯಿ ಸಾಯಬೇಕಾಗಿ ಬಂತು ಎಂದು ಅವರು ಆರೋಪಿಸಿದ್ದಾರೆ.
ಆದಿಲ್ ತನ್ನಿಂದ ಬೇರ್ಪಟ್ಟು ಈಗ ತನ್ನ ಗೆಳತಿ ತನು ಜೊತೆ ವಾಸಿಸುತ್ತಿರುವುದಾಗಿ ಹೇಳಿದ್ದಾನೆ ಎಂದು ರಾಖಿ ಹೇಳಿಕೊಂಡಿದ್ದಾರೆ.ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ರಾಖಿ “ಅಂತಿಮವಾಗಿ ಆದಿಲ್ ತನುವಿನ ಜೊತೆಯೇ ಇರುತ್ತೇನೆ ಎಂಬ ನಿರ್ಧಾರವನ್ನು ತೆಗೆದುಕೊಂಡಿದ್ದಾನೆ. ನಿನ್ನೆ ಅವನು ನನಗೆ ' ನಿನ್ನನ್ನು ಬಿಟ್ಟು ತನು ಜೊತೆಗೆ ಹೋಗುತ್ತಿದ್ದೇನೆ. ನಾನು ಅವಳೊಂದಿಗೆ ಬದುಕುತ್ತೇನೆ ಎಂದು ಹೇಳಿದ್ದಾನೆ" ಎಂದು ರಾಖಿ ಹೇಳಿದ್ದಾಳೆ.
ಇದನ್ನೂ ಓದಿ: ಅಧಿಕಾರದಿಂದ ಕಿತ್ತು ಕೆಳಗಿಳಿಸಿದರೂ ಕಾಂಗ್ರೆಸ್ ನಾಯಕರ ಮದ ಇಳಿಯುತ್ತಿಲ್ಲ: ಬಿಜೆಪಿ ಟೀಕೆ
"ಅವನು ಬಾಲಿವುಡ್ ಗೆ ಬರಲು ನನ್ನನ್ನು ಬಳಸಿಕೊಂಡು ಸ್ಟಾರ್ ಆಗಲು ಪ್ರಯತ್ನಿಸಿದನು, ನನ್ನ ಬಳಿ ಇದ್ದ ಎಲ್ಲ ಹಣವನ್ನು ಅವರು ತೆಗೆದುಕೊಂಡು ಹೊದನು.ಇದಕ್ಕೆ ಸಂಬಂಧಿಸಿದಂತೆ ನನ್ನ ಬಳಿ ಪುರಾವೆಗಳಿವೆ.ಅವನು ನನ್ನನ್ನು ಭಾವನಾತ್ಮಕವಾಗಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಬಳಸಿಕೊಂಡಿದ್ದಾನೆ.ಮದುವೆಯಾದನಂತರ ನನಗೆ ಮೈಸೂರಿನಲ್ಲಿ ಅವನ ವಿರುದ್ಧ ಇರುವ ಪ್ರಕರಣಗಳ ಬಗ್ಗೆ ತಿಳಿದುಬಂತು” ಎಂದು ಆಕೆ ಆರೋಪಿಸಿದ್ದಾಳೆ.
ಇದನ್ನೂ ಓದಿ : ಟಿ 20 ಕ್ರಿಕೆಟ್ ಗೆ ವಿದಾಯ ಘೋಷಿಸಿದ ಆಸ್ಟ್ರೇಲಿಯಾದ ಈ ಸ್ಟಾರ್ ಆಟಗಾರ..!
ಇನ್ನೂ ಮುಂದುವರೆದು “ನೀನೇ ನನ್ನ ತಾಯಿಯನ್ನು ಕೊಂದಿದ್ದು. ನನ್ನ ತಾಯಿಗೆ ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಕ್ಕಿದ್ದರೆ ಬಹುಶಃ ಅವರು ಸಾಯುತ್ತಿರಲಿಲ್ಲ. ನೀನು ನನಗೆ ಯಾವುದೇ ಆಯ್ಕೆಗಳಿಲ್ಲದೆ ಬಿಟ್ಟಿದ್ದೀಯಾ ... ನೀನು ನನ್ನನ್ನು ಬೀದಿಗೆ ತಂದಿದ್ದೀ, ನನ್ನನ್ನು ದೋಚಿದ್ದಿಯಾ” ಎಂದು ರಾಖಿ ಸಾವಂತ್ ಆರೋಪಿಸಿದ್ದಾಳೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.