ಬೆಂಗಳೂರು : ರಮೇಶ್ ಅರವಿಂದ್ ಪ್ರತಿಭಾನ್ವಿತ ಕಲಾವಿದ ಮಾತ್ರವಲ್ಲದೆ ನಿರ್ದೇಶಕ, ನಿರ್ಮಾಪಕ, ನಿರೂಪಕ, ವ್ಯಕ್ತಿತ್ವ ವಿಕಸನ ಉಪನ್ಯಾಸಕ ಹೀಗೆ ಹೇಳುತ್ತಾ ಹೋದರೆ ಅವರೊಬ್ಬ ಬಹುಮುಖ ಪ್ರತಿಭೆ.ಪ್ರತಿಭಾನ್ವಿತ ಸಜ್ಜನ ನಟ ಎನಿಸಿಕೊಂಡಿರುವ ಮಿಸ್ಟರ್ ಫರ್ಪೆಕ್ಟ್ ರಮೇಶ್ ಅರವಿಂದ್‍ ಜನುಮದಿನದ ಸಂಭ್ರಮದಲ್ಲಿದ್ದಾರೆ.ರಮೇಶ್ ಅರವಿಂದ್ ಅಂದ ತಕ್ಷಣ ಎಲ್ಲರಿಗೂ ನೆನಪಾಗುವುದು ಅವರ ಭಾವಪೂರ್ಣ ನಟನೆ. ತ್ಯಾಗಮಯಿ ಪಾತ್ರಗಳಿಂದಲೇ ಜನಪ್ರಿಯರಾದ ಅವರು ಇಂದಿಗೂ ಬಹು ಬೇಡಿಕೆಯ ನಟ.ರಮೇಶ್ ಹುಟ್ಟುಹಬ್ಬದ ಸ್ಪೆಷಲ್ ಆಗಿ ಸಖತ್ ಸ್ಟೈಲೀಶ್ ಆಗಿ ಕಾಣಿಸಿಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ರಮೇಶ್ ಅರವಿಂದ್ ನಾಳೆ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ.ಬರ್ತಡೇ ಮುನ್ನ ದಿನವಾದ ಇಂದು ರೆಟ್ರೋ ಲುಕ್ ನಲ್ಲಿ ಕ್ಯಾಮೆರಾಗೆ  ಪೋಸ್ ಕೊಟ್ಟಿದ್ದಾರೆ. ಖ್ಯಾತ ಕಾಸ್ಟ್ಯೂಮ್ ಡಿಸೈನರ್ ಭರತ್ ರಾಮದಾಸ್ ವಿನ್ಯಾಸಗೊಳಿಸಿದ ಧಿರಿಸಿನಲ್ಲಿ ರಮೇಶ್ ಚಿರಯುವಕನಂತೆ ಕಂಗೊಳಿಸಿದ್ದಾರೆ. 


ಇದನ್ನೂ ಓದಿ : ಮೊದಲ ಬಾರಿಗೆ ಮಗುವಿನ ಫೋಟೋ ಶೇರ್ ಮಾಡಿದ ದೀಪಿಕಾ ಪಡುಕೋಣೆ !ಇಲ್ಲಿದೆ ನೋಡಿ ಗಾಢ ನಿದ್ದೆಯಲ್ಲಿರುವ ಮುದ್ದಾದ ಮಗು!


ಯಾರು ಈ ಭರತ್?
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬಿಗ್ ಬಾಸ್ ನಲ್ಲಿ ತೊಡುವ ಸ್ಟೈಲೀಶ್ ಕಾಸ್ಟ್ಯೂಮ್ ಗಳನ್ನು ನೀವೆಲ್ಲಾ ನೋಡಿರುತ್ತೀರಿ.  ಆ ವಿನ್ಯಾಸಗಳನ್ನು ಖಂಡಿತವಾಗಿಯೂ ಮೆಚ್ಚಿರುತ್ತೀರಿ. ವೀಕೆಂಡ್ ನಲ್ಲಿ ಸಖತ್ ಡಿಫರೆಂಟ್ ಕಾಸ್ಟ್ಯೂಮ್ ನಲ್ಲಿ ಕಿಚ್ಚ ರತಿ ಬಾರಿ ಕಂಗೊಳಿಸುತ್ತಾರೆ. ಕಿಚ್ಚನ ಆ ಸ್ಟೈಲೀಶ್ ಅವತಾರದ ಹಿಂದಿನ ರೂವಾರಿ ಕೂಡಾ ಈ ಭರತ್. ಭರತ್ ಕಿಚ್ಚನಿಗೆ ಮಾತ್ರವಲ್ಲ  ಸಾಕಷ್ಟು ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳ ಕಾಸ್ಟ್ಯೂಮ್ ಡಿಸೈನರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 


ಇದನ್ನೂ ಓದಿ : ದೀಪಿಕಾ-ರಣವೀರ್‌ ಮನೆಯ ಮಹಾಲಕ್ಷ್ಮಿಯನ್ನು ನೋಡಲು ಆಸ್ಪತ್ರೆಗೆ ಆಗಮಿಸಿದ ಮುಖೇಶ್‌ ಅಂಬಾನಿ..! ವಿಡಿಯೋ ನೋಡಿ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.