ರಶ್ಮಿಕಾ ಮಂದಣ್ಣಗೆ ಅಪಘಾತ!" ಜೀವನ ಕ್ಷಣಿಕ" ಎಂದು ಭಾವುಕ ಪೋಸ್ಟ್‌ ಹಂಚಿಕೊಂಡ ನಟಿ?

Rashmika Mandanna: 'ಲೈಫ್ ಈಸ್ ಫ್ರೇಜಿಲ್ ಅಂಡ್ ಶಾರ್ಟ್...', ಅಪಘಾತದ ನಂತರ ರಶ್ಮಿಕಾ ಮಂದಣ್ಣ ಅವರ ಮೊದಲ ಪೋಸ್ಟ್ ಇಅದಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ತಮ್ಮ ನೆಚ್ಚಿನ ನಟಿಗೆ ಅಪಘಾತವಾದ ವಿಷಯ ಕೇಳಿ ಫ್ಯಾನ್ಸ್‌ ಬೆಚ್ಚಿಬಿದ್ದಿದ್ದಾರೆ.

1 /6

'ಲೈಫ್ ಈಸ್ ಫ್ರೇಜಿಲ್ ಅಂಡ್ ಶಾರ್ಟ್...', ಅಪಘಾತದ ನಂತರ ರಶ್ಮಿಕಾ ಮಂದಣ್ಣ ಅವರ ಮೊದಲ ಪೋಸ್ಟ್ ಇಅದಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ತಮ್ಮ ನೆಚ್ಚಿನ ನಟಿಗೆ ಅಪಘಾತವಾದ ವಿಷಯ ಕೇಳಿ ಫ್ಯಾನ್ಸ್‌ ಬೆಚ್ಚಿಬಿದ್ದಿದ್ದಾರೆ.

2 /6

ನಟಿ ರಶ್ಮಿಕಾ ಮಂದಣ್ಣ ಸಾಮಾಜಿಕ ಜಾಲತಣದಲ್ಲಿ ಸದಾ ಸಕ್ರಿಯರಾಗಿರುತ್ತಾರೆ.  ಆದರೆ ಕಳೆದ ಕೆಲವು ದಿನಗಳಿಂದ ನಟಿ ಸೋಷಿಯಲ್ ಮೀಡಿಯಾದಿಂದ ದೂರ ಉಳಿದಿದ್ದಾರೆ. ನಟಿ ಯಾಕೆ ಸೋಶಿಯಲ್‌ ಮಿಡಿಯಾದಿಂದ ದೂರ ಇದ್ದಾರೆ ಎಂದು ಅಭಿಮಾನಿಗಳು ಆತಂಕಗೊಂಡಿದ್ದರು. ಇದೀಗ ನಟಿ ಯಾಕೆ ಸಾಮಾಜಿಕ ಜಾಲತಾನದಿಂದ ಇಷ್ಟು ದಿನ ದೂರ ಉಳಿದಿದ್ದರು ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಅಪಘಾತದಿಂದಾಗಿ ರಶ್ಮಿಕಾ ಸಾಮಾಜಿಕ ಜಾಲತಾನದಿಂದ ದೂರವಿದ್ದುದ್ದಾಗೆ ಹೇಳಿಕೊಂಡಿದ್ದಾರೆ. ಅಪಘಾತದ ಬಗ್ಗೆ ಸ್ವತಃ ರಶ್ಮಿಕಾ ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದಾರೆ. ಸದ್ಯ ರಶ್ಮಿಕಾ ಅವರ ಪೋಸ್ಟ್ ಮಾತ್ರ ಎಲ್ಲೆಡೆ ಚರ್ಚೆಯಾಗುತ್ತಿದೆ.

3 /6

ತಮ್ಮ ಭಾವಚಿತ್ರವನ್ನು ಪೋಸ್ಟ್ ಮಾಡಿರುವ ರಶ್ಮಿಕಾ , 'ಹೇಗಿದ್ದೀರಿ? ನನಗೆ ತಿಳಿದಂತೆ ಕಳೆದ ಕೆಲವು ದಿನಗಳಿಂದ ನಾನು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರಲು ಸಾಧ್ಯವಾಗಲಿಲ್ಲ. ಏಕೆಂದರೆ ನನಗೆ ಸಣ್ಣ ಅಪಘಾತವಾಗಿತ್ತು. ಈಗ ನನ್ನ ಸ್ಥಿತಿ ಸ್ಥಿರವಾಗಿದೆ...'. 

4 /6

'ವೈದ್ಯರ ಸಲಹೆಯಂತೆ ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದೆ. ಈಗ ನನ್ನ ಸ್ಥಿತಿ ಸ್ಥಿರವಾಗಿದೆ. ಈಗ ಪುನಃ ಸಕ್ರಿಯಗೊಳಿಸಲು ಸಿದ್ಧವಾಗಿದೆ. ಯಾವಾಗಲೂ ನಿಮ್ಮ ಬಗ್ಗೆ ಕಾಳಜಿ ವಹಿಸಲು ಪ್ರಯತ್ನಿಸಿ. ಏಕೆಂದರೆ ಜೀವನವು ತುಂಬಾ ದುರ್ಬಲ ಮತ್ತು ಚಿಕ್ಕದಾಗಿದೆ ಮತ್ತು ನಾಳೆ ನಮ್ಮ ಜೀವನದಲ್ಲಿ ಏನಾಗುತ್ತದೆ ಎಂದು ನಮಗೆ ತಿಳಿದಿಲ್ಲ. ಹಾಗಾಗಿ ಪ್ರತಿ ಹೊಸ ದಿನವನ್ನು ಸಂತೋಷದಿಂದ ಸ್ವೀಕರಿಸಿ... ಸದ್ಯದ ಅಪ್ಡೇಟ್ ಏನೆಂದರೆ ನಾನು ಸಾಕಷ್ಟು ಮೋದಕವನ್ನು ತಿನ್ನುತ್ತಿದ್ದೇನೆ...' ಎಂದು ನಟಿ ಹೇಳಿದ್ದಾರೆ.

5 /6

ರಶ್ಮಿಕಾ ಅವರ ಪೋಸ್ಟ್‌ಗೆ ಅಭಿಮಾನಿಗಳು ಲೈಕ್‌ಗಳು ಮತ್ತು ಕಾಮೆಂಟ್‌ಗಳ ಸುರಿಮಳೆ ಮಾಡುತ್ತಿದ್ದಾರೆ. ಇನ್ನೂ ಈ ಸುದ್ದಿ ಕೇಳಿ ಗಾಬರಿಗೊಂಡಿರುವ ಅಭಿಮಾನಿಗಳು 'ನಿಮ್ಮ ಸ್ಥಿತಿ ಈಗ ಸ್ಥಿರವಾಗಿದೆ ಎಂದು ಕೇಳಲು ಸಂತೋಷವಾಗಿದೆ'.  'ಶೀಘ್ರವಾಗಿ ಗುಣಮುಖರಾಗಿ... ವಿಶ್ರಾಂತಿ ಪಡೆಯಿರಿ' ಎಂದು ನಟಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ.

6 /6

ನಟಿ ರಶ್ಮಿಕಾ ಮಂದಣ್ಣ ಅವರ ಸಿನಿಮಾಗಳ ಬಗ್ಗೆ ಮಾತನಾಡುವುದಾದರೆ, ಸದ್ಯ ಅನಿಮಲ್‌ ಚಿತ್ರದ ಸಕ್ಸಸ್‌ನ ನಂತರ ನಟಿ ‘ಪುಷ್ಪ 2’  ಸಿನಿಮಾದ ಮೂಲಕ ಅಭಿಮಾನಿಗಳನ್ನು ರಂಜಿಸಲು ಸಜ್ಜಾಗಿದ್ದಾರೆ. ಇದಲ್ಲದೇ ಸಲ್ಮಾನ್ ಖಾನ್ ಅಭಿನಯದ 'ಸಿಕಂದರ್' ಚಿತ್ರದಲ್ಲೂ ರಶ್ಮಿಕಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಟ ವಿಕ್ಕಿ ಕೌಶಲ್ ಅಭಿನಯದ ಛಾವಾ ಚಿತ್ರದಲ್ಲಿ ರಶ್ಮಿಕಾ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ