ಬೆಂಗಳೂರು : ಇಂದು ಇಲ್ಲಿ ಮಕ್ಕಳು ಭೇಟಿ ನೀಡಿದ್ದಾರೆ. ಗೀತಾ ಮಕ್ಕಳ ಜೊತೆಯಲ್ಲೇ ಇದ್ದು ಮಕ್ಕಳಾಗಿದ್ದರು. ಅವರಿಗೆ ಜಗತ್ತು ಗೊತ್ತಾಗಬೇಕು. ಫಸ್ಟ್ ಟೈಂ ಬಂದರು, ಇದನ್ನು ನೋಡಬೇಕು ಅಂದ್ರು, ವಿಧಾನಸೌಧ, ಹೀಗೆ ಅನೇಕ ಕಡೆ ಕರ್ಕೊಂಡು ಹೋಗ್ತಾ ಇದಿವಿ ಎಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹೇಳಿದ್ದಾರೆ 


COMMERCIAL BREAK
SCROLL TO CONTINUE READING

ಶಿವರಾಜ್ ಕುಮಾರ್ (Shivraj Kumar) ಅವರು ಇಂದು ಮೈಸೂರಿನ ಶಕ್ತಿದಾಮದ ಅನಾಥ ಮಕ್ಕಳನ್ನು ಕರೆದುಕೊಂಡು ಬಂದು ಬೆಂಗಳೂರಿನಲ್ಲಿರುವ ಪುನೀತ್ ರಾಜಕುಮಾರ್ ಅವರ ಸಮಾಧಿಗೆ ಭೇಟಿ ಮಾಡಿಸಿ, ಅವರನ್ನ ನಗರ ಸುತ್ತಿಸುತ್ತಿಸುತ್ತಿದ್ದಾರೆ.ಈ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಾಳೆ ನಂದಿ ಹಿಲ್ಸ್ ಗೆ ಕರ್ಕೊಂಡು ಹೋಗ್ತಾ ಇದಿವಿ. ಅವರಿಗೆ ಹೊರ ಪ್ರಪಂಚ ತಿಳಿಬೇಕು ಅಂತ ಹೀಗೆ ಮಾಡ್ತಾ ಇದ್ದೀವಿ. ಶಕ್ತಿದಾಮಕ್ಕೆ ಅಪ್ಪಾಜಿ ಬೆಳಕು ಕೊಟ್ರು, ಅಮ್ಮ ಶಕ್ತಿ‌ಕೊಟ್ಟಿದ್ದಾರೆ ಎಂದರು.


[[{"fid":"228657","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"1":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"1"}}]]


ಇದನ್ನೂ ಓದಿ : Love Mocktail 2 ಟ್ರೈಲರ್​ ರಿಲೀಸ್​, ನಿಧಿಮಾ ನೆನಪಲ್ಲೇ ಮತ್ತೊಂದು ಮದ್ವೆಗೆ ರೆಡಿಯಾಗ್ತಿದ್ದಾರೆ ಆದಿ!


ಗೀತಾ(Geeta Shivrajkumar) ಅಮ್ಮನ ಸ್ಥಾನದಲ್ಲಿ ನಿಂತು ಮಾಡ್ತಾ ಇದ್ದಾರೆ. 150 ಮಕ್ಕಳ ಮೇಲೆ ಇದ್ದಾರೆ ಇನ್ನೂ ಆಡ್ ಆಗ್ತಾ ಇದ್ದಾರೆ. ಅನೇಕರು ಹೆಲ್ಪ್ ಮಾಡ್ತಾ ಇದ್ದಾರೆ. ಈ ಮಕ್ಕಳಲ್ಲಿ ಅನೇಕ ಟ್ಯಾಲೆಟ್ಸ್ ಇದೆ. ಸಧ್ಯ, ಬೇಕಿಂಗ್ ಕೂಡ ಕಲಿತಾ ಇದ್ದಾರೆ. ಮಕ್ಕಳ ಜೊತೆ ಮಕ್ಕಳಾಗಿ ಇರಬೇಕಾಗುತ್ತದೆ ಎಂದು ಹೇಳಿದರು.


ಜೇಮ್ಸ್ ಡಬ್ಬಿಂಗ್ :


ಜೇಮ್ಸ್ ಸಿನಿಮಾದ  ಡಬ್ಬಿಂಗ್ ನಿನ್ನೆ ಮಾಡಿದ್ದೇವೆ. ಅಪ್ಪು(Puneeth Rajkumar) ಇಲ್ಲದೇ ವಾಯ್ಸ್ ಕೊಡೋದು ಅದು ಬಹಳ ಕಷ್ಟದ ಕೆಲಸ. ಏನೋ ಪ್ರಯತ್ನ ಮಾಡಿದಿನಿ. ಇನ್ನೊಬಾ ಆಕ್ಟರ್ ಒಳಗೆ ಹೋಗಿ ಡಬ್ ಮಾಡೋದು ತುಂಬಾ ಕಷ್ಟ. ಒಬ್ಬ ನಾಯಕನಾಗಿ ಅವರ ವಾಯ್ಸ್ ಇಮಿಟೇಟ್ ಮಾಡೋದು ಕಷ್ಟ. ಆದ್ರೂ ಡಬ್ಬಿಂಗ್ ಮುಗಿಸಿದಿವಿ. ಎಲ್ಲರಿಗೂ ಇಷ್ಟ ಆಗುತ್ತೆ ಅಂತ ಅನ್ಸುತ್ತೆ. ಜೆಮ್ಸ್ ಗೆ ಇಡೀ ಸಿನಿಮಾಗೆ ವಾಯ್ಸ್ ಕೊಟ್ಟಿದಿನಿ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.