Athiya Shetty Wedding: ಮಗಳು ಅಥಿಯಾ - ಕೆಎಲ್ ರಾಹುಲ್ ಮದುವೆಯ ಹೀಗೆ ಹೇಳಿದ್ರು ನಟ ಸುನೀಲ್ ಶೆಟ್ಟಿ
Athiya Shetty Wedding: ಬಾಲಿವುಡ್ ನಟ ಸುನೀಲ್ ಶೆಟ್ಟಿ ಮಗಳು ಅಥಿಯಾ ಶೆಟ್ಟಿ ಮತ್ತು ಕೆಎಲ್ ರಾಹುಲ್ ಮದುವೆಗೆ ಒಪ್ಪಿಗೆ ನೀಡಿದ್ದಾರೆ. ಅಥಿಯಾ ಮತ್ತು ಭಾರತೀಯ ಕ್ರಿಕೆಟಿಗ ಕೆಎಲ್ ರಾಹುಲ್ ಅವರ ಮದುವೆಗೆ ಸಂಬಂಧಿಸಿದಂತೆ ಸುನೀಲ್ ಶೆಟ್ಟಿ ಇತ್ತೀಚೆಗೆ ಸಾಕಷ್ಟು ಮಾಹಿತಿಯನ್ನು ನೀಡಿದ್ದಾರೆ.
Athiya Shetty Wedding: ಬಾಲಿವುಡ್ ನಟ ಸುನೀಲ್ ಶೆಟ್ಟಿ ಮಗಳು ಅಥಿಯಾ ಶೆಟ್ಟಿ ಮತ್ತು ಕೆಎಲ್ ರಾಹುಲ್ ಮದುವೆಗೆ ಒಪ್ಪಿಗೆ ನೀಡಿದ್ದಾರೆ. ಅಥಿಯಾ ಮತ್ತು ಭಾರತೀಯ ಕ್ರಿಕೆಟಿಗ ಕೆಎಲ್ ರಾಹುಲ್ ಅವರ ಮದುವೆಗೆ ಸಂಬಂಧಿಸಿದಂತೆ ಸುನೀಲ್ ಶೆಟ್ಟಿ ಇತ್ತೀಚೆಗೆ ಸಾಕಷ್ಟು ಮಾಹಿತಿಯನ್ನು ನೀಡಿದ್ದಾರೆ. ಮುಂಬರುವ ಕ್ರೈಮ್ ಥ್ರಿಲ್ಲರ್ ವೆಬ್ ಸೀರೀಸ್ 'ಧಾರಾವಿ ಬ್ಯಾಂಕ್' ಬಿಡುಗಡೆ ಸಮಾರಂಭದಲ್ಲಿ ಸುನೀಲ್ ಶೆಟ್ಟಿ ಮಗಳ ಮದುವೆಯ ಪ್ರಶ್ನೆಗೆ ಉತ್ತರಿಸಿದ್ದಾರೆ.
ಇದನ್ನೂ ಓದಿ : ರಿಯಲ್ ಸ್ಟಾರ್ ಕನಸು ಏನ್ ಗೊತ್ತಾ..! ಫ್ಯಾನ್ಸ್ ಮುಂದೆ ಉಪ್ಪಿ ಮನದ ಮಾತು
ಅಥಿಯಾಳ ಮದುವೆಯ ಬಗ್ಗೆ ಹೇಳಿದ್ದು ಹೀಗೆ :
'ಧಾರವಿ ಬ್ಯಾಂಕ್' ಬಿಡುಗಡೆ ಸಮಾರಂಭದಲ್ಲಿ ಅಥಿಯಾ ಶೆಟ್ಟಿ ಮತ್ತು ಕೆಎಲ್ ರಾಹುಲ್ ಯಾವಾಗ ಮದುವೆಯಾಗುತ್ತಿದ್ದಾರೆ ಎಂದು ಸುನೀಲ್ ಶೆಟ್ಟಿ ಅವರನ್ನು ಕೇಳಲಾಯಿತು. ಪಿಂಕ್ವಿಲ್ಲಾ ವರದಿಯ ಪ್ರಕಾರ, ಸುನೀಲ್ ಶೆಟ್ಟಿ 'ಶೀಘ್ರದಲ್ಲೇ' ಎಂದು ಹೇಳಿದ್ದಾರೆ. ಸುನೀಲ್ ಶೆಟ್ಟಿ ಮಗಳ ಮದುವೆ ಬಗ್ಗೆ ಹೇಳಿದ್ದು ಇದೇ ಮೊದಲಲ್ಲ. ಇದಕ್ಕೂ ಮುನ್ನ ಸುನೀಲ್ ಶೆಟ್ಟಿ ಇನ್‌ಸ್ಟಂಟ್ ಬಾಲಿವುಡ್‌ಗೆ ನೀಡಿದ ಸಂದರ್ಶನದಲ್ಲಿ, 'ಮಕ್ಕಳು ನಿರ್ಧರಿಸುತ್ತಾರೆ ಎಂದು ನನಗೆ ಅನಿಸುತ್ತದೆ. ರಾಹುಲ್‌ಗೆ ವೇಳಾಪಟ್ಟಿಗಳಿವೆ, ಇದೀಗ ಏಷ್ಯಾ ಕಪ್, ವಿಶ್ವಕಪ್, ದಕ್ಷಿಣ ಆಫ್ರಿಕಾ ಪ್ರವಾಸ, ಆಸ್ಟ್ರೇಲಿಯಾ ಪ್ರವಾಸವಿದೆ. ಮಕ್ಕಳಿಗೆ ಬಿಡುವು ಸಿಕ್ಕಾಗ ಮದುವೆ ಆಗುತ್ತೆ. ಒಂದು ದಿನದಲ್ಲಿ ಮದುವೆ ಆಗಲ್ಲ ಅಲ್ವಾ?' ಅಂದಿದ್ದರು.
ಭಾರತೀಯ ಕ್ರಿಕೆಟಿಗ ಕೆಎಲ್ ರಾಹುಲ್ ಮತ್ತು ಅಥಿಯಾ ಶೆಟ್ಟಿ ಬಹಳ ಸಮಯದಿಂದ ಡೇಟಿಂಗ್ ಮಾಡುತ್ತಿದ್ದಾರೆ. 2021 ರಲ್ಲಿ ಈ ಜೋಡಿ ತಮ್ಮ ಸಂಬಂಧವನ್ನು ವಿಶೇಷ ರೀತಿಯಲ್ಲಿ ಅಧಿಕೃತಗೊಳಿಸಿದರು. ಇಬ್ಬರೂ ತಮ್ಮ ಸಂಬಂಧವನ್ನು ಅಧಿಕೃತಗೊಳಿಸಿದಾಗಿನಿಂದ, ಅವರ ಮದುವೆಯ ಬಗ್ಗೆ ಗಾಸಿಪ್‌ಗಳು ಹರಿದಾಡುತ್ತಿವೆ.
ಇದನ್ನೂ ಓದಿ : ಸಾರಥಿಗೆ ಸರ್ಕಾರದಿಂದ ಮತ್ತೊಂದು ಗೌರವ : ವನ್ಯಜೀವಿ ಮಂಡಳಿ ಸದಸ್ಯ ಸ್ಥಾನಕ್ಕೆ DBoss ನೇಮಕ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.