ಸಾರಥಿಗೆ ಸರ್ಕಾರದಿಂದ ಮತ್ತೊಂದು ಗೌರವ : ವನ್ಯಜೀವಿ ಮಂಡಳಿ ಸದಸ್ಯ ಸ್ಥಾನಕ್ಕೆ DBoss ನೇಮಕ

ನಟ ದರ್ಶನ್‌ ಅವರು ಬರೀ ಸಿನಿಮಾಗಳಿಗಳಿಷ್ಟೇ ಮೀಸಲಾಗಿಲ್ಲ. ಬದಲಿಗೆ ಕೃಷಿ ಚಟುವಟಿಕೆ, ಪ್ರಾಣಿ, ಪಕ್ಷಿಗಳ ಸಾಕಾಣಿಕೆ ಮಾಡುತ್ತಿದ್ದಾರೆ. ನಟನೆ ವೃತ್ತಿಯಾದರೂ ಡಿ ಬಾಸ್‌ ಕೃಷಿ ಕಾಯಕ ಬಿಟ್ಟಿಲ್ಲ. ಇದಕ್ಕೆ ಸಾಕ್ಷಿ ಅವರ ಫಾರ್ಮ್ ಹೌಸ್. ಇನ್ನು ಪ್ರಾಣಿ ಪ್ರಿಯರಾಗಿರುವ ಛಾಲೆಂಜಿಂಗ್ ಸ್ಟಾರ್‌, ವನ್ಯಜೀವಿ ಛಾಯಾಗ್ರಹಕರು ಕೂಡ ಹೌದು.

Written by - Krishna N K | Last Updated : Nov 20, 2022, 11:39 AM IST
  • ಸಾರಥಿಗೆ ಸರ್ಕಾರದಿಂದ ಮತ್ತೊಂದು ಗೌರವ
  • ವನ್ಯಜೀವಿ ಮಂಡಳಿ ಸದಸ್ಯ ಸ್ಥಾನಕ್ಕೆ DBoss ನೇಮಕ
  • ಪ್ರಾಣಿ ಪ್ರಿಯ ದರ್ಶನ್‌ ಅವರ ಕಾರ್ಯಗಳನ್ನು ಗಮನಿಸಿ ಈ ಗೌರವ ನೀಡಲಾಗಿದೆ
ಸಾರಥಿಗೆ ಸರ್ಕಾರದಿಂದ ಮತ್ತೊಂದು ಗೌರವ : ವನ್ಯಜೀವಿ ಮಂಡಳಿ ಸದಸ್ಯ ಸ್ಥಾನಕ್ಕೆ DBoss ನೇಮಕ title=

ಬೆಂಗಳೂರು : ನಟ ದರ್ಶನ್‌ ಅವರು ಬರೀ ಸಿನಿಮಾಗಳಿಗಳಿಷ್ಟೇ ಮೀಸಲಾಗಿಲ್ಲ. ಬದಲಿಗೆ ಕೃಷಿ ಚಟುವಟಿಕೆ, ಪ್ರಾಣಿ, ಪಕ್ಷಿಗಳ ಸಾಕಾಣಿಕೆ ಮಾಡುತ್ತಿದ್ದಾರೆ. ನಟನೆ ವೃತ್ತಿಯಾದರೂ ಡಿ ಬಾಸ್‌ ಕೃಷಿ ಕಾಯಕ ಬಿಟ್ಟಿಲ್ಲ. ಇದಕ್ಕೆ ಸಾಕ್ಷಿ ಅವರ ಫಾರ್ಮ್ ಹೌಸ್. ಇನ್ನು ಪ್ರಾಣಿ ಪ್ರಿಯರಾಗಿರುವ ಛಾಲೆಂಜಿಂಗ್ ಸ್ಟಾರ್‌, ವನ್ಯಜೀವಿ ಛಾಯಾಗ್ರಹಕರು ಕೂಡ ಹೌದು.

ಸದ್ಯ ಇದೆಲ್ಲವನ್ನು ಗಮನಿಸಿದ ರಾಜ್ಯ ಸರ್ಕಾರ, ಛಾಲೆಜಿಂಗ್‌ ಸ್ಟಾರ್‌ ದರ್ಶನ್‌ ಅವರನ್ನು ವನ್ಯಜೀವಿ ಮಂಡಳಿಗೆ ಸದಸ್ಯರನ್ನಾಗಿ ನೇಮಕ ಮಾಡಿದೆ. ಅರಣ್ಯ ಇಲಾಖೆ ನವೆಂಬರ್ 19 ರಂದು ಈ ಕುರಿತು ಆದೇಶ ಹೊರಡಿಸಿದೆ. ಜೊತೆಗೆ ಕಾನೂನು ಮತ್ತು ಸಂಸದೀಯ ಸಚಿವ ಮಾಧುಸ್ವಾಮಿ ಅವರನ್ನೂ ಸಹ ಇದೇ ಮಂಡಳಿಯ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.

ಇದನ್ನೂ ಓದಿ: ಬಾಂಡ್ ರವಿ' ಚಿತ್ರದ ಮೊದಲ ಸಾಂಗ್ ರಿಲೀಸ್

ಪ್ರಾಣಿ ಪಕ್ಷಿಗಳ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ದರ್ಶನ್‌ ಅವರು ತಮ್ಮ ಪಾರ್ಮ್‌ಹೌಸ್‌ನಲ್ಲಿ ಕುದುರೆ, ಹಸು, ಸೇರಿದಂತೆ ವಿವಿಧ ತಳಿಯ ಎತ್ತುಗಳನ್ನೂ ಸಹ ಸಾಕಿದ್ದಾರೆ. ಅಲ್ಲದೆ, ಅನ್ಯ ದೇಶಿಯ ಪಕ್ಷಿಗಳನ್ನೂ ಸಹ ದಚ್ಚು ತೋಟದ ಮನೆಯಲ್ಲಿ ಕಾಣಬಹುದು. ವನ್ಯಜೀವಿಗಳ ಬಗ್ಗೆಯೂ ಅಕ್ಕರೆ ಹೊಂದಿರುವ ಯಜಮಾನ ಆಗಾಗ ಅರಣ್ಯಕ್ಕೆ ತೆರಳಿ ವನ್ಯಜೀವಿಗಳ ಛಾಯಾಗ್ರಹಣದಲ್ಲಿ ತೊಡಗುತ್ತಾರೆ. ಅಲ್ಲದೆ, ತಾವು ತೆಗೆದ ಚಿತ್ರಗಳನ್ನು ಮಾರಾಟ ಮಾರಿ ಬಂದ ಹಣವನ್ನೂ ಸಹ ಅರಣ್ಯ ಇಲಾಖೆಗೆ ನೀಡುತ್ತಾರೆ.

ಸದ್ಯ ದರ್ಶನ್‌ ಅವರ ಇಂತಹ ಸಮಾಜಮುಖಿ ಕಾರ್ಯಗಳನ್ನು ಗುರುತಿಸಿರುವ ರಾಜ್ಯ ಸರ್ಕಾರ ಮತ್ತು ಅರಣ್ಯ ಇಲಾಖೆ ಅವರನ್ನು ವನ್ಯಜೀವಿ ಮಂಡಳಿಗೆ ಸದಸ್ಯರನ್ನಾಗಿ ನೇಮಕ ಮಾಡಿದೆ. ಈ ವಿಚಾರ ದರ್ಶನ್‌ ಅಭಿಮಾನಿಗಳ ಖುಷಿಯನ್ನು ಹೆಚ್ಚಿಸಿದೆ. ಈಗಾಗಲೇ ದಚ್ಚು ವನ್ಯಜೀವಿ ಛಾಯಾಗ್ರಾಹಕ ಹಾಗೂ ಪ್ರಾಣಿಶಾಸ್ತ್ರ ಪ್ರಾಧಿಕಾರದ ಬ್ರ್ಯಾಂಡ್ ಅಂಬಾಸಿಡರ್ ಸ್ಥಾನವನ್ನು ಸಹ ತುಂಬಿದ್ದಾರೆ. 

ಇದನ್ನೂ ಓದಿ: Nawazuddin Haddi Look : "ಮಂಗಳಮುಖಿಯರದ್ದು ವಿಚಿತ್ರ ಲೋಕ.." ತಮ್ಮ ಅನುಭವ ಹಂಚಿಕೊಂಡ ನವಾಜುದ್ದೀನ್!

ಇನ್ನು ವನ್ಯಜೀವಿ ಮಂಡಳಿ ನೀಡಿರುವ ಈ ಗೌರವದ ಜೊತೆ ದರ್ಶನ ಈಗಾಗಲೇ ರಾಜ್ಯ ಸರ್ಕಾರದ ಕೃಷಿ ಇಲಾಖೆಯ ರಾಯಭಾರಿ ಸಹ ಆಗಿದ್ದಾರೆ. ಕೃಷಿ ಸಚಿವರಾಗಿರುವ ಬಿ.ಸಿ.ಪಾಟೀಲ್ ಅವರ ಮನವಿಯಂತೆ ಕೃಷಿ ಇಲಾಖೆಯ ರಾಯಭಾರಿ ಸ್ಥಾನವನ್ನು ದರ್ಶನ್ ಅಲಂಕರಿಸಿದ್ದಾರೆ. ಬಿ.ಸಿ.ಪಾಟೀಲ್ ಅವರೊಟ್ಟಿಗೆ ಕೆಲವು ಕೃಷಿ ಸಂಬಂಧಿ ಕಾರ್ಯಕ್ರಮಗಳಲ್ಲಿಯೂ ದರ್ಶನ್ ಭಾಗಿಯಾಗಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News