Actor Suriya family : ನಟ ಸೂರ್ಯ ತಮಿಳು ಚಿತ್ರರಂಗದ ಪ್ರಮುಖ ನಟರಲ್ಲಿ ಒಬ್ಬರು. ಅವರಿಗೆ ದಿಯಾ-ದೇವ್ ಎಂಬ ಮಗಳು ಮತ್ತು ಒಬ್ಬ ಮಗನಿದ್ದಾರೆ. ಇದರಲ್ಲಿ ಮಗ ದೇವ್ ಮಾಡಿರುವ ಸಾಧನೆ ಅಪ್ಪನಿಗೆ ಹೆಮ್ಮೆ ತಂದಿದೆ. ಅಲ್ಲದೆ, ಸೂರ್ಯ ಮತ್ತು ಜ್ಯೋತಿಕಾ ಅಭಿಮಾನಿಗಳು ಫುಲ್‌ ಖುಷಿಯಾಗಿದ್ದಾರೆ.


COMMERCIAL BREAK
SCROLL TO CONTINUE READING

ನಟ ಸೂರ್ಯ ಸುಮಾರು 27 ವರ್ಷಗಳಿಂದ ತಮಿಳು ಚಿತ್ರರಂಗದಲ್ಲಿ ನಿರತರಾಗಿದ್ದಾರೆ. ಹಿರಿಯ ನಟ ಶಿವಕುಮಾರ್ ಅವರ ಪುತ್ರರಾಗಿರುವ ಅವರು 'ನೆರುಕು ನೇರ' ಚಿತ್ರದ ಮೂಲಕ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದರು. ಸಾಫ್ಟ್ ಹುಡುಗನ ಪಾತ್ರದಲ್ಲಿ ನಟಿಸುತ್ತಿದ್ದ ಅವರು ಇದೀಗ ಬಿಗ್ ಬಜೆಟ್ ಚಿತ್ರಗಳ ನಾಯಕರಾಗಿ ಹೊರಹೊಮ್ಮಿದ್ದಾರೆ. 


ಇದನ್ನೂ ಓದಿ:ʼಗೌರಿʼ ಚಿತ್ರದ ಪ್ರೀ ಟೀಸರ್‌ ಔಟ್‌..! ಲಂಕೇಶ್‌ ಪುತ್ರನ ಸಿನಿಮಾಗೆ ಕುಂಬ್ಳೆ, ಅಶ್ವಿನಿ ಪುನೀತ್‌ ಸಾಥ್‌


2006 ರಲ್ಲಿ ಜ್ಯೋತಿಕಾ ಮತ್ತು ಸೂರ್ಯ ವಿವಾಹವಾದರು. ಅವರಿಗೆ 2007 ರಲ್ಲಿ ದಿಯಾ ಎಂಬ ಮಗಳು ಮತ್ತು 2010 ರಲ್ಲಿ ದೇವ್ ಎಂಬ ಜನಿಸಿದರು. ಸಧ್ಯ ನಟ ಸೂರ್ಯ, ಪತ್ನಿ ಜ್ಯೋತಿಕಾ ತಮ್ಮ ಮಕ್ಕಳೊಂದಿಗೆ ಮುಂಬೈನಲ್ಲಿ ನೆಲೆಸಿದ್ದಾರೆ ಎನ್ನಲಾಗಿದೆ. 


ಸೂರ್ಯ-ಜ್ಯೋತಿಕಾ ಪುತ್ರಿ ಮಕಲನ್ ದೇವ್ ಗೆ ಈಗ 14 ವರ್ಷ. ಈ ನಡುವೆ ಅವರ ಕುರಿತ ವಿಡಿಯೋವೊಂದು ಅಂತರ್ಜಾಲದಲ್ಲಿ ವೈರಲ್ ಆಗಿದೆ. ದೇವ್ ಕರಾಟೆಯಲ್ಲಿ ಕಪ್ಪು ಪಟ್ಟಿಯನ್ನು ಗಳಿಸಿದ್ದು, ಮಗನ ಸಾಧನೆಗೆ ಸೂರ್ಯ ಹಸ್ತಲಾಘವ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 


ಇದನ್ನೂ ಓದಿ:ಟಾಲಿವುಡ್‌ ಸ್ಕ್ರೀನ್‌ ಮೇಲೆ ಮಾಲಾಶ್ರೀ ʼಮಾರಣಾಯಧಂʼ..! ಏಪ್ರಿಲ್‌ 26 ರಿಲೀಸ್‌


ಸದ್ಯ ಸೂರ್ಯ, 'ಕಂಗುವಾ' ಚಿತ್ರದ ಮೂಲಕ ತೆರೆಗೆ ಬರಲು ರೆಡಿಯಾಗಿದ್ದಾರೆ. ಈ ಥ್ರಿಲ್ಲರ್-ಫ್ಯಾಂಟಸಿ ಸಿನಿಮಾವನ್ನು ಸ್ಟುಡಿಯೋ ಗ್ರೀನ್ ಪ್ರಸ್ತುತಪಡಿಸಿದೆ. ಚಿತ್ರಕ್ಕೆ ದೇವಿ ಶ್ರೀ ಪ್ರಸಾದ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಬಿಡುಗಡೆಯಾದ ಟೀಸರ್ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.