ಇಂದು ಶಕ್ತಿಧಾಮದ ಮಕ್ಕಳ ಕಣ್ಣಲ್ಲಿ ದೇವರ ಕಂಡೆ : ಅಪ್ಪು ಸ್ಮರಿಸಿದ ತಮಿಳು ನಟ ವಿಶಾಲ್
ಖ್ಯಾತ ತಮಿಳು ಚಿತ್ರ ನಟ ವಿಶಾಲ್ ಇಂದು ಶಕ್ತಿಧಾಮಕ್ಕೆ ಭೇಟಿ ನೀಡಿ ಮಕ್ಕಳ ಜೊತೆ ಕಾಲ ಕಳೆದರು. ಈ ವೇಳೆ ತಮ್ಮನ್ನು ಒಬ್ಬ ಸ್ವಯಂ ಸೇವಕನಾಗಿ ಸ್ವೀಕರಿಸುವಂತೆ ದೊಡ್ಮನೆ ಕುಟುಂಬಕ್ಕೆ ಮನವಿ ಮಾಡಿದರು.
ಮೈಸೂರು : ಖ್ಯಾತ ತಮಿಳು ಚಿತ್ರ ನಟ ವಿಶಾಲ್ ಇಂದು ಶಕ್ತಿಧಾಮಕ್ಕೆ ಭೇಟಿ ನೀಡಿ ಮಕ್ಕಳ ಜೊತೆ ಕೆಲ ಕಾಲ ಕಳೆದರು. ಈ ವೇಳೆ ತಮ್ಮನ್ನು ಒಬ್ಬ ಸ್ವಯಂ ಸೇವಕನನ್ನಾಗಿ ಸ್ವೀಕರಿಸುವಂತೆ ದೊಡ್ಮನೆ ಕುಟುಂಬಕ್ಕೆ ಮನವಿ ಮಾಡಿದರು.
ಭೇಟಿ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ವಿಶಾಲ್, ನನಗೆ ಸ್ವಲ್ಪ ಸ್ವಲ್ಪ ಕನ್ನಡ ಗೊತ್ತು. ನಾನು ಪುನೀತ್ ಅಣ್ಣನಿಗಾಗಿ ಶಕ್ತಿಧಾಮಕ್ಕೆ ಬಂದಿದ್ದೇನೆ. 40 ದಿನದಿಂದ ಗಾಯಗೊಂಡು ಆಸ್ಪತ್ರೆಯಲ್ಲಿದ್ದೆ. ಒಂದು ದೇಗುಲದಲ್ಲಿ ಒಂದೇ ದೇವರು ಇರುತ್ತಾರೆ. ಆದರೆ, ಇವತ್ತು ಶಕ್ತಿಧಾಮದ ಮಕ್ಕಳೆಲ್ಲರ ಕಣ್ಣಲ್ಲಿ ದೇವರು ನೋಡಿದ್ದೇನೆ ಎಂದು ಭಾವುಕರಾದರು.
ಇದನ್ನೂ ಓದಿ: ಮೊಹಮ್ಮದ್ ಶಮಿ ಟಿ20 ವಿಶ್ವಕಪ್‌ನಲ್ಲಿ ಆಡುವುದು ಕಷ್ಟ!
ಶಕ್ತಿಧಾಮದ ಮಕ್ಕಳನ್ನ ನೋಡಿದ್ರೆ ನನಗೆ ಒಂದು ಸ್ಪೂರ್ತಿ. ಪುನೀತ್ ಅಣ್ಣ ಹಾಗೂ ಗೀತಮ್ಮ ಅವರಿಗೆ ಹಾಟ್ಸ್ ಆಫ್ ಹೇಳ್ತೀನಿ. ನನ್ನನ್ನು ಒಬ್ಬ ಸ್ವಯಂ ಸೇವಕನಾಗಿ ಸ್ವೀಕಾರ ಮಾಡುವಂತೆ ರಾಜಕುಮಾರ್ ಅವರ ಕುಟುಂಬಕ್ಕೆ ನಾನು ಮನವಿ ಮಾಡುತ್ತೇನೆ ಎಂದರು.
ಇವತ್ತಿನ ಭೇಟಿಯ ವಿಶೇಷತೆ ಏನಿಲ್ಲ, ಈ ಮಕ್ಕಳನ್ನ ನಾನು ಕಣ್ಣಾರೆ ನೋಡಬೇಕೆಂದು ಇಲ್ಲಿಗೆ ಬಂದಿದ್ದೇನೆ. ನನಗೆ ತುಂಬಾನೇ ಸಂತೋಷ ಆಗಿದೆ. ನಾನೊಬ್ಬ ಸ್ವಯಂ ಸೇವಕ, ಒಂದು ಕರೆ ಮಾಡಿದ್ರೆ ಸಾಕು ನಾನು ಬರುತ್ತೇನೆ. ಸ್ವಾತಂತ್ರ್ಯ ದಿನಾಚರಣೆ ದಿನ ಮಕ್ಕಳ ಜಿಮ್ನಾಸ್ಟಿಕ್ಸ್ ನೋಡಿ ಖುಷಿ ಪಟ್ಟಿದ್ದೆ. ಶಕ್ತಿಧಾಮದ ಶಿಕ್ಷಕರು ಮಕ್ಕಳಿಗೆ ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ ಎಂದು ಶಕ್ತಿಧಾಮದ ಶಿಕ್ಷಕರ, ಆಡಳಿತಾಧಿಕಾರಿಗಳ ಕಾರ್ಯವೈಖರಿಯನ್ನು ವಿಶಾಲ್ ಶ್ಲಾಘಿಸಿದರು.
ಈ ಹಿಂದೆ ವಿಶಾಲ್ ಶಕ್ತಿಧಾಮಕ್ಕೆ ಭೇಟಿ ನೀಡಿದಾಗ ಶಕ್ತಿಧಾಮದ ಉಸ್ತುವಾರಿಯನ್ನು ತಮಗೆ ಬಿಟ್ಟುಕೊಡಿ ಎಂದು ಶಿವರಾಜ್‌ಕುಮಾರ್ ಅವರಿಗೆ ಮನವಿ ಮಾಡಿದ್ದರು. ಆದರೆ, ಆ ಮನವಿಯನ್ನು ಅವರು ನಯವಾಗಿ ತಿರಸ್ಕರಿಸಿದ್ದರು. ಸದ್ಯ ನಟ ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ಅವರು ಶಕ್ತಿಧಾಮವನ್ನು ನೋಡಿಕೊಳ್ಳುತ್ತಿದ್ದಾರೆ. ಅಲ್ಲದೆ, ಪುನೀತ್ ರಾಜ್‌ಕುಮಾರ್ ಅವರ ಆಸೆಯಂತೆ ಶಾಲೆ ನಿರ್ಮಾಣಕ್ಕೂ ಕೂಡಾ ಕೈ ಹಾಕಿದ್ದಾರೆ. ಕರ್ನಾಟಕ ಸರ್ಕಾರವು ಕೂಡಾ ಸಹಾಯ ಮಾಡುವುದಾಗಿ ಹೇಳಿದೆ. ನಟ ವಿಶಾಲ್ ಕೂಡ ಶಾಲೆ ನಿರ್ಮಾಣಕ್ಕೆ ನೆರವು ನೀಡುವ ಭರವಸೆ ನೀಡಿದ್ದಾರೆ. ಕಟ್ಟಡ ನಿರ್ಮಾಣ ಕಾರ್ಯ ಇನ್ನಷ್ಟೆ ಆರಂಭವಾಗಬೇಕಿದೆ.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.