ಬೆಂಗಳೂರು: ಬೆಲೆ ಏರಿಕೆ ಬಗ್ಗೆ ಬೊಂಬಡಾ ಬಾರಿಸುತ್ತಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ 41,257 ರೂ.ಗಳ ಶರ್ಟ್ ಧರಿಸಿ ಭಾರತ್ ಜೋಡೋ ಯಾತ್ರೆ ಮಾಡುತ್ತಿದ್ದಾರೆ ಎಂದು ರಾಜ್ಯ ಬಿಜೆಪಿ ಆರೋಪಿಸಿದೆ.
ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ ಆರಂಭಿಸುತ್ತಿದ್ದಂತೆ ಕಮಲಪಾಳಯದ ವಾಗ್ವಾದಕ್ಕೆ ಗುರಿಯಾಗಿದೆ. ಕೈ ನಾಯಕ ರಾಹುಲ್ ಗಾಂಧಿ ಧರಿಸಿದ ಶರ್ಟ್ ಹಾಗೂ ವಾಸ್ತವ್ಯಕ್ಕೆಂದು ಸಿದ್ಧಪಡಿಸಲಾಗಿರುವ ವಾಹನ ಭಾರಿ ಚರ್ಚೆಗೆ ಗ್ರಾಸವಾಗಿದೆ. ರಾಹುಲ್ ಗಾಂಧಿ 41,257 ರೂ.ಗಳ ಶರ್ಟ್ ಧರಿಸಿ, ಕೋಟಿ ಕೋಟಿ ಬೆಲೆ ಬಾಳುವ ಐಷಾರಾಮಿ ಸಂಚಾರಿ ಬಸ್ನಲ್ಲಿ ಭಾರತ್ ಜೋಡೋ ಯಾತ್ರೆ ಮಾಡುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ಬಿಜೆಪಿ ವ್ಯಂಗ್ಯವಾಡಿದೆ.
ಇದನ್ನೂ ಓದಿ: Kiccha Sudeep : ಬೆಂಗಳೂರು ನೆರೆ ಸಂತ್ರಸ್ತರಿಗೆ ಕಿಚ್ಚ ಸುದೀಪ್ ಸಹಾಯ ಹಸ್ತ
ರಾಹುಲ್ ಧರಿಸಿರುವ ಶರ್ಟ್ನ ಬೆಲೆಯನ್ನು ಅಮೆಜಾನ್ ಶಾಪಿಂಗ್ ಆಪ್ನಲ್ಲಿ ಸರ್ಚ್ ಮಾಡಿ ಅದರ ಬೆಲೆಯನ್ನು ಫೋಟೋವನ್ನು ಬಿಜೆಪಿ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಅಲ್ಲದೆ, ಕೋಟಿ ಕೋಟಿ ಬೆಲೆ ಬಾಳುವ ಐಷಾರಾಮಿ ಸಂಚಾರಿ ಬಸ್ನಲ್ಲಿ ಭಾರತ್ ಜೋಡೋ ಯಾತ್ರೆ ಮಾಡುತ್ತಿದ್ದಾರೆ ಎಂದು ಹಾಸ್ಯಮಾಡಿದೆ.
ದೇಶದಲ್ಲಿನ ಬೆಲೆ ಏರಿಕೆ ಜನರ ಜೀವನ ತತ್ತರಿಸುವಂತೆ ಮಾಡುತ್ತಿದೆ, ಎಂದೆಲ್ಲಾ ಬೊಂಬಡಾ ಬಾರಿಸುವ ಕಾಂಗ್ರೆಸ್ ನಾಯಕ @RahulGandhi 41,257 ರೂ.ಗಳ ಶರ್ಟ್ ಧರಿಸಿ, ಕೋಟಿ ಕೋಟಿ ಬೆಲೆ ಬಾಳುವ ಐಷಾರಾಮಿ ಸಂಚಾರಿ ಬಸ್ನಲ್ಲಿ ಭಾರತ್ ಜೋಡೋ ಯಾತ್ರೆ ಮಾಡುತ್ತಿರುವುದು ಹಾಸ್ಯಾಸ್ಪದವಾಗಿದೆ. #ParivarJodoYatra pic.twitter.com/dh4iqJVeVE
— BJP Karnataka (@BJP4Karnataka) September 9, 2022
ಅಲ್ಲದೆ, ನಕಲಿ ಗಾಂಧಿ ಪರಿವಾರದ ಹೆಸರಿನಲ್ಲಿ ಮೂರು ತಲೆಮಾರುಗಳಿಗೆ ಸಂಪಾದಿಸಿದ್ದೇವೆ, ಅವರ ಋಣ ನಾವು ತೀರಿಸಬೇಕು ಎಂದು ಇತ್ತೀಚೆಗೆ ಮಾಜಿ ಸಚಿವರೊಬ್ಬರು ಹೇಳಿದ್ದರು. ಆ ಋಣವನ್ನು ಈ ಮೂಲಕ ತೀರಿಸಲಾಗುತ್ತಿದೆಯೇ? ಎಂದು ಕಾಂಗ್ರೆಸ್ಗೆ ಬಿಜೆಪಿ ಪ್ರಶ್ನೆ ಮಾಡಿದೆ.
ಕಾಂಗ್ರೆಸ್ ನ 'ಭಾರತ್ ಜೋಡೋ ಯಾತ್ರೆ' ಆರಂಭವಾಗಿ ಇಂದಿಗೆ ಮೂರುದಿನಗಳಾಗಿವೆ. ತಮಿಳುನಾಡಿನಿಂದ ಪ್ರಾರಂಭವಾದ ಯಾತ್ರೆ ಸದ್ಯ ಕೇರಳದತ್ತ ಸಾಗಿದೆ. ಸುಮಾರು 150 ದಿನಗಳ ಕಾಲ ನಡೆಯುವ ಯಾತ್ರೆಯಲ್ಲಿ ಕಂಟೈನರ್ನಲ್ಲಿಯೇ ರಾಹುಲ್ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.