T20 World Cup 2022, Mohammed Shami Records : ಟೀಂ ಇಂಡಿಯಾದ ಸ್ಟಾರ್ ಸ್ಪೀಡ್ ಬೌಲರ್ ಮೊಹಮ್ಮದ್ ಶಮಿ ಬಗ್ಗೆ ಅನೇಕ ಆಟಗಾರರು ತಮ್ಮ ಅಭಿಪ್ರಾಯವನ್ನು ನೀಡಿತ್ತಿದ್ದಾರೆ. ಭಾರತದ ಮಾಜಿ ವೇಗಿ ಮತ್ತು ಐಪಿಎಲ್ ತಂಡದ ಗುಜರಾತ್ ಟೈಟಾನ್ಸ್ ಮುಖ್ಯ ಕೋಚ್ ಆಶಿಶ್ ನೆಹ್ರಾ ಅವರು ಟಿ 20 ವಿಶ್ವಕಪ್‌ಗೆ ಆಯ್ಕೆಯಾದ ತಮ್ಮ ತಂಡದಲ್ಲಿ ಶಮಿಗೆ ಅವಕಾಶ ನೀಡಿರಲಿಲ್ಲ. ಆದರೆ, ಅಂಶುಮಾನ್ ಗಾಯಕ್ವಾಡ್ ಅವರಂತಹ ಮಾಜಿ ಆಟಗಾರರು ಟಿ20 ವಿಶ್ವಕಪ್‌ನಲ್ಲಿ ಶಮಿಗೆ ಅವಕಾಶ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ.
ಜುಲೈನಿಂದ ಯಾವುದೇ ಪಂದ್ಯಗಳನ್ನು ಆಡಿಲ್ಲ ಶಮಿ
ಯುಪಿಯ ಅಮ್ರೋಹದಿಂದ ಬಂದಿರುವ ಶಮಿ, ಈ ವರ್ಷದ ಜುಲೈನಲ್ಲಿ ಮ್ಯಾಂಚೆಸ್ಟರ್‌ನಲ್ಲಿ ತಮ್ಮ ಕೊನೆಯ ಏಕದಿನ ಪಂದ್ಯವನ್ನು ಆಡಿದ್ದರು. ಇಂಗ್ಲೆಂಡ್ ವಿರುದ್ಧದ ಆ ಪಂದ್ಯದಲ್ಲಿ ಅವರು 38 ರನ್ ನೀಡಿದರು ಮತ್ತು ಯಾವುದೇ ಯಶಸ್ಸು ಕಂಡಿಲ್ಲ. ಅಂದಿನಿಂದ ಅವರು ಟೀಂ ಇಂಡಿಯಾದಿಂದ ಹೊರಗುಳಿಯುತ್ತಿದ್ದಾರೆ. ಏಷ್ಯಾಕಪ್-2022ರ ಭಾರತ ತಂಡದಲ್ಲಿಯೂ ಅವರನ್ನು ಆಯ್ಕೆ ಮಾಡಲಾಗಿಲ್ಲ. 32ರ ಹರೆಯದ ಶಮಿ ಬಗ್ಗೆ ಹಲವು ಅನುಭವಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆಸ್ಟ್ರೇಲಿಯಾದಲ್ಲಿ ಅವರ ದಾಖಲೆ ನೋಡಿದರೆ ಟಿ20 ವಿಶ್ವಕಪ್‌ನಲ್ಲಿ ಆಡುವುದು ಅವರಿಗೆ ಕಷ್ಟ ಎನಿಸುತ್ತಿದೆ.
ಇದನ್ನೂ ಓದಿ : ಏಷ್ಯಾಕಪ್ ಸೋಲು: ‘ಕೋಚ್ ರಾಹುಲ್ ದ್ರಾವಿಡ್ ಹನಿಮೂನ್ ಅವಧಿ ಮುಗಿದಿದೆ’!
ಒಂದೇ ಒಂದು ಟಿ20 ಪಂದ್ಯದಲ್ಲಿ 46 ರನ್‌ಗಳು ವ್ಯರ್ಥ
ಆಸ್ಟ್ರೇಲಿಯದ ಆತಿಥ್ಯದಲ್ಲಿ ಶಮಿ ಇದುವರೆಗೆ ಕೇವಲ ಒಂದು ಟಿ20 ಪಂದ್ಯವನ್ನಾಡಿದ್ದಾರೆ. ಎರಡು ವರ್ಷಗಳ ಹಿಂದೆ ಡಿಸೆಂಬರ್ 4 ರಂದು ಕ್ಯಾನ್‌ಬೆರಾದಲ್ಲಿ ನಡೆದ ಟಿ20 ಪಂದ್ಯದಲ್ಲಿ ಶಮಿ ಹೆಚ್ಚು ಪ್ರಭಾವ ಬೀರಲು ಸಾಧ್ಯವಾಗಲಿಲ್ಲ. ಅವರು ಅತ್ಯಂತ ದುಬಾರಿ ಎಂದು ಸಾಬೀತುಪಡಿಸಿದರು ಮತ್ತು ಅವರು 4 ಓವರ್‌ಗಳಲ್ಲಿ 46 ರನ್‌ಗಳನ್ನು ಬಿಟ್ಟುಕೊಟ್ಟರು. ಅಷ್ಟೇ ಅಲ್ಲ ಯಾವುದೇ ವಿಕೆಟ್ ಕೂಡ ಪಡೆದಿರಲಿಲ್ಲ. ಈ ಪಿಚ್‌ನಲ್ಲಿ ಯುಜುವೇಂದ್ರ ಚಹಾಲ್ ಮತ್ತು ಟಿ ನಟರಾಜನ್ 3-3 ವಿಕೆಟ್ ಪಡೆದರು.
ಪಾಕಿಸ್ತಾನದ ವಿರುದ್ಧ ಟಿ20 ಪಾದಾರ್ಪಣೆ
ಶಮಿ 2014ರಲ್ಲಿ ಪಾಕಿಸ್ತಾನ ವಿರುದ್ಧ ಟಿ20ಗೆ ಪದಾರ್ಪಣೆ ಮಾಡಿದ್ದರು. ವಿಶೇಷವೆಂದರೆ ಅವರು ಟಿ20 ವಿಶ್ವಕಪ್‌ನಲ್ಲಿ ಈ ಮಾದರಿಯಲ್ಲಿ ಭಾರತಕ್ಕಾಗಿ ತಮ್ಮ ಮೊದಲ ಪಂದ್ಯವನ್ನು ಆಡಿದ್ದರು. ಆದರೆ, ನಂತರ ಅವರಿಗೆ ಹೆಚ್ಚು ಅವಕಾಶಗಳು ಸಿಗಲಿಲ್ಲ. ಟಿ20 ಅಂತರಾಷ್ಟ್ರೀಯ ವೃತ್ತಿಜೀವನದಲ್ಲಿ 8 ವರ್ಷಗಳಲ್ಲಿ ಕೇವಲ 17 ಪಂದ್ಯಗಳನ್ನು ಆಡಿರುವ ಅವರು 18 ವಿಕೆಟ್‌ಗಳನ್ನು ಹೊಂದಿದ್ದಾರೆ. ಏಕದಿನ ಮಾದರಿಯಲ್ಲಿ ಆಸ್ಟ್ರೇಲಿಯಾ ಆತಿಥ್ಯ ವಹಿಸಿರುವ 8 ಪಂದ್ಯಗಳಲ್ಲಿ 10 ವಿಕೆಟ್ ಪಡೆದಿದ್ದಾರೆ. ಅದೇ ಸಮಯದಲ್ಲಿ, ಅವರು ಈ ದೇಶದಲ್ಲಿ ಆಡಿದ 8 ಟೆಸ್ಟ್ ಪಂದ್ಯಗಳಲ್ಲಿ, ಅವರು 31 ವಿಕೆಟ್ಗಳನ್ನು ಪಡೆದರು.
ಇದನ್ನೂ ಓದಿ : Asia Cup 2022 Final: ಪಾಕ್-ಲಂಕಾ ಹಣಾಹಣಿಗೆ ಕ್ಷಣಗಣನೆ: ಹೀಗಿರಲಿದೆ ನೋಡಿ ಸಂಭಾವ್ಯ ಆಟಗಾರರ ಪಟ್ಟಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.