Tiger Prabhakar Wife Anju : ನಟಿ ಅಂಜು ಬಾಲ ಕಲಾವಿದೆಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ತೆಲುಗು, ಕನ್ನಡ, ಮಲಯಾಳಂ ಮತ್ತು ತಮಿಳು ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಅಂಜು ಹೆಚ್ಚಾಗಿ ಹೆಚ್ಚಾಗಿ ಬೋಲ್ಡ್ ಪಾತ್ರಗಳಲ್ಲಿ ನಟಿಸಿದ್ದಾರೆ. ಆದರೆ 17 ನೇ ವಯಸ್ಸಿನಲ್ಲಿ ಅವರ ಒಂದು ನಿರ್ಧಾರ ಜೀವನವನ್ನು ತಲೆಕೆಳಗಾಗಿ ಮಾಡಿತು. ತನಗಿಂತ 31 ವರ್ಷ ಹಿರಿಯ ನಟನ ಜೊತೆ ಮದುವೆಯಾದದ್ದೇ ತಪ್ಪಾಯ್ತು ಎಂದು ಅಂಜು ಹೇಳಿದ್ದಾರೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: Rambha: ನಟಿ ರಂಭಾ ಪತಿ ಯಾರು ಗೊತ್ತಾ, ಇವರ ಮಗಳಂತೂ ಚೆಂದುಳ್ಳಿ ಚೆಲುವೆ.!


ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದ ನಟಿ ಅಂಜು, ನಾನು ಒಂದೂವರೆ ವರ್ಷದವಳಿದ್ದಾಗ ನಿರ್ದೇಶಕ ಮಹೇಂದ್ರನ್ ಸರ್ ನನ್ನನ್ನು ನೋಡಿ ಚಿತ್ರದಲ್ಲಿ ಬಾಲನಟಿಯಾಗಿ ತೆಗೆದುಕೊಂಡರು. ನನ್ನ ವೃತ್ತಿಜೀವನ ಅಲ್ಲಿಂದ ಶುರುವಾಗಿದ್ದು. ಈಗ ಧಾರಾವಾಹಿ ಮಾಡುತ್ತಿದ್ದೇನೆ. ಆದರೆ ನಾನು ಚಿತ್ರರಂಗಕ್ಕೆ ಬರುವುದು ಅಮ್ಮನಿಗೆ ಇಷ್ಟವಿರಲಿಲ್ಲ. ನನ್ನ ಮದುವೆ ಆಕಸ್ಮಿಕ. ನಂತರ ಕನ್ನಡ ಚಿತ್ರ ಮಾಡಲು ಬೆಂಗಳೂರಿಗೆ ಹೋಗಿದ್ದೆ. ಆಗ ಕನ್ನಡದ ಸ್ಟಾರ್ ಹೀರೋ ಟೈಗರ್ ಪ್ರಭಾಕರ್ ನನ್ನನ್ನು ನೋಡಿ ಇಷ್ಟಪಟ್ಟರು. ನನ್ನ ಮುಂದೆ ಮದುವೆಯ ಪ್ರಸ್ತಾಪವಿಟ್ಟರು. ಅವರಿಗೆ ಈಗಾಗಲೇ ಪತ್ನಿ ಮತ್ತು ಮಕ್ಕಳಿದ್ದರು. ಆದರೆ ಅದನ್ನೆಲ್ಲ ನನ್ನಿಂದ ಮರೆಮಾಚಿದರು ಎಂದು ಹೇಳಿದ್ದಾರೆ.


ಆಗ ನನಗೆ ಕೇವಲ 17 ವರ್ಷ ವಯಸ್ಸು. ನಾನು ಮದುವೆಗೆ ಸಿದ್ಧಳಿಲ್ಲ ಎಂದು ಹೇಳಿದೆ. ಆದರೆ ಅವರು ಬಿಡಲಿಲ್ಲ. ಅದಕ್ಕೆ ನಾನು ಅಮ್ಮನನ್ನು ಕೇಳಿ ಹೇಳುತ್ತೇನೆ ಎಂದೆ. ಪ್ರಭಾಕರ್ ಅವರ ವಯಸ್ಸು ಸುಮಾರು 50 ವರ್ಷ ಆಗಿತ್ತು. ಅವರನ್ನು ನೋಡಿದ ಅಮ್ಮ ನನಗೆ ಈ ಮದುವೆ ಇಷ್ಟವಿಲ್ಲ ಎಂದಿದ್ದರು. ಆದರೆ ಅವರ ಮಾತು ಕೇಳದೆ ಮನೆಯಲ್ಲಿ ಹೇಳದೆ ಪ್ರಭಾಕರ ಬಳಿ ಹೋಗಿದ್ದೆ. ನಾನು ಅವರನ್ನು ತುಂಬಾ ನಂಬಿದ್ದೆ. ಅವರ ಮನೆಗೆ ಹೋದಾಗ ಪ್ರಭಾಕರ್ ಅವರಿಗೆ ಈಗಾಗಲೇ ಮೂರು ಮದುವೆಯಾಗಿದ್ದು, ಮಕ್ಕಳಿರುವುದು ಗೊತ್ತಾಗಿತ್ತು. ಆಗ ನನಗೆ ನಾನು ತಪ್ಪು ನಿರ್ಧಾರ ತೆಗೆದುಕೊಂಡೆ ಎಂದು ಅನಿಸಿತು ಎಂದಿದ್ದಾರೆ. 


ಇದನ್ನೂ ಓದಿ: ದಂತದ ಬೊಂಬೆ ನೀತಾ ಅಂಬಾನಿ ನಿಜವಾದ ವಯಸ್ಸೆಷ್ಟು ಗೊತ್ತೇ.. ಈ ಅಂದಕ್ಕೆ ಕಾರಣ ಪ್ರತೀ ದಿನ ಕುಡಿಯುವ ಈ ಜ್ಯೂಸ್​​ !


ಜೊತೆಗೆ ನಾನು ಗರ್ಭಿಣಿ. ಆದರೂ ಅವರ ಜೊತೆ ಇರಲು ಮನಸ್ಸಿಲ್ಲದ ಕಾರಣ ಮನೆಗೆ ಬಂದೆ. ಆ ಮನೆಯಿಂದ ಹೊರಡುವಾಗ ನಾನು ಪ್ರಭಾಕರನಿಗೆ ಒಂದೇ ಒಂದು ಮಾತು ಹೇಳಿದೆ.. ನೀನು ನನ್ನನ್ನು ತುಂಬಾ ಕೆಟ್ಟವಳನ್ನಾಗಿ ಮಾಡಿದೆ. ನಾನು ಈ ಮನೆಯಿಂದ ಹೊರಡುತ್ತಿದ್ದೇನೆ. ಇನ್ನು ಮುಂದೆ ನಾನು ಈ ಮನೆಗೆ ಕಾಲಿಡುವುದಿಲ್ಲ. ನೀನು ಸತ್ತರೂ ನಿನ್ನ ಮುಖ ನೋಡುವುದಿಲ್ಲ ಎಂದು ಕೊನೆಯ ಸಲ ಹೇಳಿದ್ದೆ. ಅದರ ನಂತರ ನಾನು ಬಹಳ ಕಾಲ ಖಿನ್ನತೆಗೆ ಒಳಗಾಗಿದ್ದೆ. ನಿಧಾನವಾಗಿ ಅದರಿಂದ ಚೇತರಿಸಿಕೊಂಡು ಮತ್ತೆ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟೆ ಎಂದು ಹೇಳಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.