ಕೊಲೆ ಬಳಿಕ ಮೃತದೇಹವನ್ನು 300 ತುಂಡು ಮಾಡಿ ಕ್ರೌರ್ಯ! ಬೆಚ್ಚಿ ಬೀಳಿಸುತ್ತದೆ ಕನ್ನಡದ ಈ ನಟಿಯ ಕ್ರೈಂ ಹಿಸ್ಟರಿ
ಕ್ರೈಂ ಸ್ಟೋರಿ, ಕ್ರೈಂ ದೃಶ್ಯಗಳನ್ನು ಸಿನಿಮಾದಲ್ಲಿ ನೋಡಿರುತ್ತೇವೆ. ಆದರೆ ನಿಜ ಜೀವನದಲ್ಲಿ ನಡೆಯುವ ಕೆಲವೊಂದು ಘಟನೆಗಳು ಸಿನಿಮಾಕ್ಕಿಂತ ಕಡಿಮೆ ಇರುವುದಿಲ್ಲ.
ಬೆಂಗಳೂರು : ಸಿನಿಮಾಗಳಲ್ಲಿ ಭಯಾನಕ ಕೊಲೆಯಾ ದೃಶ್ಯಗಳನ್ನು ತೋರಿಸಲಾಗುತ್ತದೆ. ಆದರೆ ಅದು ಸಿನಿಮಾ ಎನ್ನುವ ಕಲ್ಪನೆ ನಮಗಿರುತ್ತದೆ. ಆದರೆ ನಿಜ ಜೀವನದಲ್ಲೂ ಜನರು ಇಂಥಹ ಕ್ರೌರ್ಯಕ್ಕೆ ಇಳಿದಾಗ ಬೆಚ್ಚಿ ಬೀಳುವಂತಾಗುತ್ತದೆ.ಹೌದು,2008ರಲ್ಲಿ ಮುಂಬೈನಲ್ಲಿ ನಡೆದ ಅತ್ಯಂತ ಭಯಾನಕ ಘಟನೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು.ಬಾಲಿವುಡ್‌ನಲ್ಲಿ ಹೆಸರು ಮಾಡಲು ಬಂದಿದ್ದ ಕನ್ನಡದ ನಟಿ ಯಾವ ರೀತಿ ಕ್ರೈಂ ಸ್ಟೋರಿಯ ಭಾಗವಾದರು ಎನ್ನುವ ಕತೆ ಇದು.
ಯಾರು ಈ ನಟಿ?
ಇದು 2008ರಲ್ಲಿ ನಡೆದ ಕೊಲೆ ಪ್ರಕರಣ. ಇಡೀ ಚಿತ್ರ ಜಗತ್ತನ್ನೇ ಬೆಚ್ಚಿ ಬಿಳಿಸಿದ್ದ ಘನ ಘೋರ ಘಟನೆ. ಇಡೀ ಮುಂಬಯಿ ಈ ಒಂದು ಘಟನೆಯಿಂದ ತಲ್ಲಣಿಸಿ ಹೋಗಿತ್ತು. ಈ ಮರ್ಡರ್ ಕಥೆಯಲ್ಲಿ ಬರುವವರು ಮೂವರು. ನೀರಜ್ ಗ್ರೋವರ್, ಮರಿಯಾ ಮೋನಿಕಾ ಸುಸೈರಾಜ್ ಮತ್ತು ಲೆಫ್ಟಿನೆಂಟ್ ಜೆರೋಮ್ ಮ್ಯಾಥ್ಯೂ.
ಇದನ್ನೂ ಓದಿ : ರಾಧೆಯ ಅವತಾರ ತಾಳಿದ ತಮನ್ನಾ..ಮಿಲ್ಕಿ ಬ್ಯೂಟಿಯ ಸೌಂದರ್ಯಕ್ಕೆ ಮನಸೋತ ಯುವಕರು!ಇಲ್ಲಿವೆ ನೋಡಿ ಕ್ಯೂಟ್ ಫೋಟೋಸ್
ಬಾಲಿವುಡ್‌ನಲ್ಲಿ ಅದೃಷ್ಟ ಪರೀಕ್ಷೆಗೆ ಬಂದಿದ್ದ ನಟಿ :
ಮರಿಯಾ ಮೋನಿಕಾ ಸುಸೈರಾಜ್ ಕನ್ನಡದ ನಟಿ. ಬಾಲಿವುಡ್ ನಲ್ಲಿ ತನ್ನ ಅದೃಷ್ಟ ಪರೀಕ್ಷೆ ಮಾಡುವ ಸಲುವಾಗಿ ಮುಂಬಯಿಗೆ ಕಾಲಿಡುತ್ತಾರೆ. ಮೈಸೂರಿನ ಕ್ರಿಶ್ಚಿಯನ್ ಕುಟುಂಬದಲ್ಲಿ ಜನಿಸಿದ ಮರಿಯಾಗೆ ಬಾಲ್ಯದಿಂದಲೂ ನಾಯಕಿಯಾಗುವ ಕನಸು.
ಮುಂಬಯಿಗೆ ಕಾಲಿಡುತ್ತಿದ್ದ ಹಾಗೆ ಬಾಲಾಜಿ ಪ್ರೊಡಕ್ಷನ್ ಹೌಸ್‌ನಲ್ಲಿ ಕಾಸ್ಟಿಂಗ್‌ನಲ್ಲಿ ಕೆಲಸ ಮಾಡುತ್ತಿದ್ದ ನೀರಜ್ ಗ್ರೋವರ್ ಪರಿಚಯವಾಗುತ್ತದೆ. ಇಬ್ಬರ ನಡುವೆ ಒಳ್ಳೆಯ ಸ್ನೇಹ ಬೆಳೆಯುತ್ತದೆ.ಆದರೆ ಒಂದು ದಿನ 26 ವರ್ಷದ ನೀರಜ್ ಗ್ರೋವರ್ ಇದ್ದಕ್ಕಿದ್ದಂತೆ ನಾಪತ್ತೆಯಾಗುತ್ತಾರೆ. ಇದಕ್ಕೂ ಮೊದಲು ನೀರಜ್ ಮರಿಯಾಗೆ ಮನೆ ಶಿಫ್ಟ್ ಮಾಡಲು ನೆರವಾಗಲು ಹೋಗಿದ್ದ ಎನ್ನುವುದಷ್ಟೇ ಎಲ್ಲರಿಗೂ ತಿಳಿದಿದ್ದ ಮಾಹಿತಿ.ನಂತರ ನೀರಜ್ ಪತ್ತೆ ಇರಲಿಲ್ಲ.
ಇದಾದ ನಂತರ ಎಲ್ಲಾ ಕಡೆ ತನಿಖೆ ನಡೆಸಿದ ಪೊಲೀಸರಿಗೆ ಮೊಬೈಲ್ ಟವರ್ ಮೂಲಕ ನೀರಜ್ ಸುಳಿವು ಸಿಗುತ್ತದೆ.ಈ ಸುಳಿವು ಆಧರಿಸಿ ಹೋದ ಪೊಲೀಸರು ಮರಿಯಾಳನ್ನು ಬಂಧಿಸುತ್ತಾರೆ.ಅಲ್ಲಿಂದ ನೀರಜ್ ನನ್ನು 300 ತುಂಡುಗಳಾಗಿ ಮಾಡಿರುವ ಬಗ್ಗೆ ಸತ್ಯ ಹೊರ ಬರುತ್ತದೆ.
ಇದನ್ನೂ ಓದಿ : ತನಗೆ ತಾನೇ ಬೆಂಕಿ ಹಚ್ಚಿಕೊಂಡ ಉರ್ಫಿ ಜಾವೇದ್... ವಿಡಿಯೋ ವೈರಲ್
ಕೊಲೆಗೆ ಕಾರಣ :
ಮಾರಿಯಾಳ ಬಾಯ್ ಫ್ರೆಂಡ್ ಜೆರೋಮ್ ಮ್ಯಾಥ್ಯೂ.ಜೆರೋಮ್ ಮ್ಯಾಥ್ಯೂಗೆ ನೀರಜ್ ವಿಚಾರ ತಿಳಿದಿರಲಿಲ್ಲ.ಜೆರೋಮ್ ಮಾರಿಯಾ ಬಗ್ಗೆ ತುಂಬಾ ಪೊಸೆಸಿವ್ ಆಗಿದ್ದ. ಒಂದು ದಿನ ಮಾರಿಯಾಗೆ ಕರೆ ಮಾಡಿದಾಗ,ಮರಿಯಾ ಮುಂಬೈನಲ್ಲಿ ಮನೆಯೊಂದನ್ನು ಬಾಡಿಗೆಗೆ ಪಡೆದಿರುವ ವಿಚಾರ ತಿಳಿಯುತ್ತದೆ.ಈ ಮನೆಗೆ ಶಿಫ್ಟ್ ಆಗುವುದಕ್ಕೆ ನೀರಜ್ ಸಹಾಯ ಮಾಡಿರುವ ಬಗ್ಗೆಯೂ ಗೊತ್ತಾಗುತ್ತದೆ.ಆದರೆ ಈ ವಿಚಾರ ತಿಳಿಯುತ್ತಿದ್ದ ಹಾಗೆ ಜೆರೋಮ್ ಮುಂಬಯಿಗೆ ಧಾವಿಸಿ ಬರುತ್ತಾನೆ.ಅಲ್ಲಿ ನೀರಜ್ ಮತ್ತು ಮರಿಯಳನ್ನು ಜೊತೆಯಾಗಿ ನೋಡಿದ ಜೆರೋಮ್ ಕೋಪ ನೆತ್ತಿಗೇರಿ ಬಿಡುತ್ತದೆ. ಅಲ್ಲಿಗೆ ನೀರಜ್ ಕೊಲೆಯಾಗುತ್ತದೆ.
ಮೃತದೇಹದ ಮುಂದೆ ಲೈಂಗಿಕ ಕ್ರಿಯೆ :
ಇದಾದ ನಂತರ ಕೊಲೆಯನ್ನು ಮುಚ್ಚಿ ಹಾಕುವ ಸಲುವಾಗಿ ನೀರಜ್ ಮೃತ ದೇಹವನ್ನು 300 ತುಂಡುಗಳಾಗಿ ಕತ್ತರಿಸುತ್ತಾರೆ. ಅಷ್ಟೇ ಅಲ್ಲ,ನೀರಜ್ ಮೃತದೇಹದ ಮುಂದೆ ತಾನು ಮತ್ತು ಜೆರೋಮ್ ಲೈಂಗಿಕ ಕ್ರಿಯೆ ನಡೆಸಿದ್ದಾಗಿ ಮರಿಯಾ ಪೊಲೀಸರೆದುರು ಒಪ್ಪಿಕೊಳ್ಳುತ್ತಾಳೆ. ಇದಾದ ನಂತರ ಇಬ್ಬರೂ ಆ ತುಂಡುಗಳನ್ನು ವಿಲೇವಾರಿ ಮಾಡುವುದಕ್ಕೆ ತಯಾರಿ ನಡೆಸುತ್ತಾರೆ. ಈ ಸಂದರ್ಭದಲ್ಲಿ ನೀರಜ್ ಫೋನ್ ಮಾರಿಯಾ ಬಳಿ ಇರುತ್ತದೆ. ದಾರಿ ಮಧ್ಯೆ ನೀರಜ್ ಫೋನ್ ರಿಂಗ್ ಆದಾಗ , ಮರಿಯಾ ತನ್ನ ಜೇಬಿನಿಂದ ಫೋನ್ ಹೊರ ತೆಗೆಯುತ್ತಾಳೆ. ಅಷ್ಟರಲ್ಲಿ ತಪ್ಪಿ ಫೋನ್ ರಿಸೀವ್ ಆಗುತ್ತದೆ. ಅಲ್ಲಿಗೆ ಮೊಬೈಲ್ ಟವರ್ ಪತ್ತೆ ಹಚ್ಚುವುದು ಪೊಲೀಸರಿಗೆ ಸಾಧ್ಯವಾಗುತ್ತದೆ. ಕೊಲೆ ಪ್ರಕರಣವು ಬಯಲಾಗುತ್ತದೆ. ಈ ಪ್ರಕರಣದಲ್ಲಿ ಮರಿಯಾಗೆ 3 ವರ್ಷ ಹಾಗೂ ಜೆರೋಮ್ ಗೆ 10 ವರ್ಷ ಶಿಕ್ಷೆ ವಿಧಿಸಲಾಗಿದೆ.
ಇದನ್ನೂ ಓದಿ : ಸಿಲ್ಕ್ ಸ್ಮಿತಾ ಅರ್ಧ ಕಚ್ಚಿದ ಸೇಬು ಹರಾಜು... ದಾಖಲೆಯ ಬೆಲೆಗೆ ಮಾರಾಟವಾಗಿತ್ತಂತೆ ಆ ಆ್ಯಪಲ್!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.