Malaika Arora Spotted With Mystery man: ಬಾಲಿವುಡ್ ಜನಪ್ರಿಯ ನಟಿ ಮಲೈಕಾ ಅರೋರಾ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಯಾವಾಗಲೂ ಸುದ್ದಿಯಲ್ಲಿರುತ್ತಾರೆ. ನಟ ಅರ್ಜುನ್ ಕಪೂರ್ ಜೊತೆಗಿನ ವಿಘಟನೆಯ ನಂತರ, ಸೌಂದರ್ಯ ತಾರೆ 'ಮಿಸ್ಟರಿ ಮ್ಯಾನ್' ಜೊತೆ ಸುತ್ತುತ್ತಿದ್ದಾರೆ. ಇವರಿಬ್ಬರು ಇತ್ತೀಚೆಗೆ ರೆಸ್ಟೊರೆಂಟ್‌ನಿಂದ ಕೈ ಹಿಡಿದುಕೊಂಡು ಹೊರನಡೆಯುತ್ತಿರುವುದು ಕಂಡುಬಂದಿದೆ. ಅದರ ನಂತರ, ಮಲೈಕಾ ಇತ್ತೀಚೆಗೆ ಸಿಂಗರ್ ಎ. ಪಿ. ಧಿಲ್ಲೋನ್ ಮ್ಯೂಸಿಕ್‌ ಶೋನಲ್ಲಿ ಭಾಗವಹಿಸಿದ್ದರು.. ಅಲ್ಲಿ ಮಲೈಕಾ ಮತ್ತೆ ಅದೇ ನಿಗೂಢ ವ್ಯಕ್ತಿಯೊಂದಿಗೆ ಕಾಣಿಸಿಕೊಂಡರು. ಆ ನಿಗೂಢ ವ್ಯಕ್ತಿಯ ಹೆಸರು ರಾಹುಲ್ ವಿಜಯ್... 


COMMERCIAL BREAK
SCROLL TO CONTINUE READING

ಈ ಕಾರ್ಯಕ್ರಮದಲ್ಲಿ ಮಲೈಕಾ ಅವರನ್ನು ವೇದಿಕೆಗೆ ಆಹ್ವಾನಿಸಲಾಗಿತ್ತು. ಎ. ಪಿ. ಧಿಲ್ಲೋನ್ ಅವರಿಗಾಗಿ ವಿಶೇಷ ಹಾಡನ್ನು ಹಾಡಿದ ಮೇಲೆ ಮಲೈಕಾ ಈತ ತನ್ನ ಬಾಲ್ಯದ ಪ್ರೀತಿ ಎಂದು ಧಿಲ್ಲೋನ್ ಅವರಿಗೆ ಹೇಳಿದರು.. ನಂತರ ಇಬ್ಬರೂ ವೇದಿಕೆಯಲ್ಲಿ ಪರಸ್ಪರ ಅಪ್ಪಿಕೊಂಡರು. ಸದ್ಯ ಬಾಯ್ ಫ್ರೆಂಡ್ ರಾಹುಲ್ ವಿಜಯ್ ಜೊತೆಗಿನ ಸೆಲ್ಫಿಯನ್ನು ಮಲೈಕಾ ಹಂಚಿಕೊಂಡಿದ್ದಾರೆ. ಇದರಿಂದಾಗಿ ಇವರಿಬ್ಬರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರೊಂದಿಗೆ ಮಲೈಕಾ ಮತ್ತೆ ಪ್ರೀತಿಯಲ್ಲಿ ಬಿದ್ದಿದ್ದಾಳೆ ಎಂದು ಬಾಲಿವುಡ್ ಮಾಧ್ಯಮಗಳು ವರದಿ ಮಾಡಿವೆ.. 


ಕೂದಲು ಕತ್ತರಿಸಲು ವಾರದ ಯಾವ ದಿನಗಳು ಶುಭ ಮತ್ತು ಅಶುಭ ಅಂತ ನಿಮ್ಗೆ ಗೊತ್ತೆ..? ತಪ್ಪದೇ ತಿಳಿಯಿರಿ


ಇತ್ತೀಚೆಗಷ್ಟೇ ಅರ್ಜುನ್ ಕಪೂರ್ ಅವರು ತಮ್ಮ ಸಿನಿಮಾದ ಪ್ರಚಾರದಲ್ಲಿ ಒಂಟಿಯಾಗಿರುವುದನ್ನು ಬಹಿರಂಗಪಡಿಸಿದ್ದಾರೆ. ಆದರೆ ಮಲೈಕಾಗೆ ಅರ್ಜುನ್ ಯಾಕೆ ದೂರವಾಗಿದ್ದಾರೆ ಎಂಬುದು ಇನ್ನೂ ತಿಳಿದಿಲ್ಲ. ಮತ್ತೊಂದೆಡೆ, ಮಲೈಕಾ ತನ್ನ Instagram ಸ್ಟೋರಿಯಲ್ಲಿ ಕೆಲವು ತಮಾಷೆಯ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅರ್ಬಾಜ್ ಖಾನ್ ವಿಚ್ಛೇದನದ ನಂತರ 2018 ರಲ್ಲಿ ಮಲೈಕಾ ಅರ್ಜುನ್ ಜೊತೆ ಡೇಟಿಂಗ್ ಪ್ರಾರಂಭಿಸಿದರು. ಇವರಿಬ್ಬರು ಆಗಾಗ ಒಟ್ಟಿಗೆ ಕಾಣಸಿಗುತ್ತಿದ್ದರು. 


ಆದರೆ 2019 ರಲ್ಲಿ, ಅವರು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಸಂಬಂಧವನ್ನು ಬಹಿರಂಗವಾಗಿ ಒಪ್ಪಿಕೊಂಡರು.. ಬಳಿಕ ವಯಸ್ಸಿನ ಅಂತರದಿಂದಾಗಿ ಜೋಡಿಯನ್ನು ಹಲವು ಬಾರಿ ಟ್ರೋಲ್ ಮಾಡಲಾಯಿತು. ಆದರೆ ಈ ಟ್ರೋಲಿಂಗ್ ಹೊರತಾಗಿಯೂ, ಅವರು ಪರಸ್ಪರ ಪ್ರೀತಿಸುತ್ತಿದ್ದರು. ಬ್ರೇಕಪ್ ನಂತರವೂ.. ಕಷ್ಟದ ಸಮಯದಲ್ಲಿ ಮಲೈಕಾ ಬೆಂಬಲವಾಗಿ ಅರ್ಜುನ್ ನಿಂತಿದ್ದರು. ಸೆಪ್ಟೆಂಬರ್‌ನಲ್ಲಿ ಮಲೈಕಾ ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಆ ವೇಳೆ ಅರ್ಜುನ್ ಮಲೈಕಾಗೆ ಸಾಂತ್ವನ ಹೇಳಲು ಬಂದಿದ್ದರು.


ಇದನ್ನೂ ಓದಿ-ಊಟಕ್ಕೆ 10 ನಿಮಿಷ ಮುನ್ನ ಈ ಒಣಹಣ್ಣು ತಿಂದರೆ ಮುಂದಿನ 45 ದಿನ ನಾರ್ಮಲ್‌ ಆಗಿರುತ್ತದೆ ಬ್ಲಡ್‌ ಶುಗರ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.