Actress Prema: ಕೊಡಗಿನ ಬೆಡಗಿ, ಸಖತ್ ಸುಂದರಿ ಅಂದ್ರೆ ಪ್ರೇಮ.. ಯಾವುದೇ ಪಾತ್ರವಾದರೂ ಅದಕ್ಕೆ ಜೀವ ತುಂಬೋ ಅದ್ಭುತ ನಟಿ ಅಂದ್ರೆ ಅದು ಪ್ರೇಮ. ಸಾಲು ಸಾಲು ಹಿಟ್ ಸಿನಿಮಾಗಳನ್ನ ಕೊಟ್ಟ ಪ್ರೇಮ ಈಗ ಸ್ವಲ್ಪ ವಿರಾಮದಲ್ಲಿ ಇದ್ದಾರೆ. ಆದ್ರೆ ಅವರ ಅಭಿಮಾನಿಗಳು ಮಾತ್ರ ಮೇಡಂ ಯಾವಾಗ ನೆಕ್ಸ್ಟ್ ಸಿನಿಮಾ ಅಂತ ಕೇಳುತ್ತಿದ್ದಾರೆ. ಆದ್ರೆ ಇದ್ಯಾವುದಕ್ಕೂ ಹೆಚ್ಚು ತಲೆಕೆಡಿಸಿಕೊಳ್ಳದ ಪ್ರೇಮ ಅತೀ ಶೀಘ್ರದಲ್ಲಿ ಗುಡ್ ನ್ಯೂಸ್ ಕೊಡಲು ಸಜ್ಜಾಗಿದ್ದಾರೆ ಅನ್ನೋ ಮಾಹಿತಿ ಸಿಕ್ಕಿದೆ. 


COMMERCIAL BREAK
SCROLL TO CONTINUE READING

ಪ್ರೇಮಾ ಕನ್ನಡ ಮತ್ತು ತೆಲಗು ಚಿತ್ರರಂಗದಲ್ಲಿ ತಮ್ಮ ಅಭಿನಯದಿಂದ ಹೆಸರು ಮಾಡಿರುವ ಪ್ರಮುಖ ನಟಿ. ಎಲ್ಲಾ ಘಟಾನುಘಟಿ ನಾಯಕರೊಂದಿಗೆ ತೆರೆ ಹಂಚಿಕೊಂಡಿರೋ ಪ್ರೇಮ ಅವರಿಗೆ ಇವತ್ತಿಗೂ ಸಾಕಷ್ಟು ಆಫರ್ ಗಳು ಬರುತ್ತಿವೆ. ಆದ್ರೆ ಅವರೇ ನೋಡಿ ಮಾಡಿ ಸ್ಟೋರಿ ಆಯ್ಕೆ ಮಾಡಿಕೊಳ್ಳೋ ಚಿಂತನೆಯಲ್ಲಿ ಇದ್ದಾರೆ. ಅದರ ಜೊತೆಗೆ ಅವರ ಬ್ಯೂಟಿ ಮಾತ್ರ ಸ್ವಲ್ಪವೂ ಏರುಪೇರು ಆಗಿಲ್ಲ.


ಇದನ್ನೂ ಓದಿ- ಕಬ್ಜ ಸಾಂಗ್ ರಿಲೀಸ್ ವೇದಿಕೆಯಲ್ಲಿ 'ಓಂ' ಸಿನಿಮಾದ ಡೈಲಾಗ್ ಹೇಳಿದ ಶಿವಣ್ಣ..!


1995 ರಲ್ಲಿ ಶಿವರಾಜಕುಮಾರ್ ರವರ `ಸವ್ಯಸಾಚಿ' ಮತ್ತು ರಾಘವೇಂದ್ರ ರಾಜಕುಮಾರ್ ರವರ `ಆಟ ಹುಡುಗಾಟ' ಚಿತ್ರದಿಂದ ಸಿನಿಪಯಣ ಆರಂಭಿಸಿದರು. ನಂತರ ಶಿವಣ್ಣರವರ `ಓಂ' ಚಿತ್ರದಲ್ಲಿನ ನಟನೆಗೆ ರಾಜ್ಯ ಪ್ರಶಸ್ತಿ ಪಡೆದರು. 1996 ರಲ್ಲಿ ತೆರೆಕಂಡ `ನಮ್ಮೂರ ಮಂದಾರ ಹೂವೇ' ಚಿತ್ರದಲ್ಲಿ ಅದ್ಭುತ ನಟನೆ ನೀಡಿದರು.


ಇದನ್ನೂ ಓದಿ- Martin Film Teaser: ಧ್ರುವ ಸರ್ಜಾ ಹಿಂದೆ ನಿಂತಿದ್ದ  ವಿದೇಶಿ ಬೆಡಗಿಯರು ಯಾರು?


ನಂತರ ತೆಲಗು ಮತ್ತು ಮಲಯಾಳಂ ಚಿತ್ರದಲ್ಲಿ ನಟಿಸಿ ಅಲ್ಲಿಯೂ ತಮ್ಮ ಅಭಿನಯ ಪ್ರತಿಭೆ ಸಾಬೀತು ಪಡಿಸಿದರು. `ನಾನು ನನ್ನ ಹೆಂಡ್ತೀರು', ಯಜಮಾನ', `ಕನಸುಗಾರ', `ಆಪ್ತಮಿತ್ರ' ಮುಂತಾದ ಹಿಟ್ ಚಿತ್ರಗಳಲ್ಲಿ ನಟಿಸಿರುವ ಪ್ರೇಮಾ `ಸಿಂಗಾರವ್ವ' ಎಂಬ ಕಲಾತ್ಮಕ ಚಿತ್ರಗಳಲ್ಲಿಯೂ ನಟಿಸಿದ್ದಾರೆ. ಸಾಹಸಸಿಂಹ ವಿಷ್ಣುವರ್ಧನ್ ಜೊತೆ ಸುಮಾರು ಏಳು ಚಿತ್ರಗಳಲ್ಲಿ ನಟಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.