ನಾನು ರಾಜ್ಯ ಕಟ್ಟೋದು ಕತ್ತಿಗಳಿಂದಲ್ಲ ಕಣ್ರೋ.. ಅದನ್ನು ಹಿಡಿಯೋ ಕೈಗಳಿಂದ ಅಂತ ಉಪೇಂದ್ರ ಕೂಗಿದ್ದು ಯಾಕೆ...?

ಆರ್ ಚಂದ್ರು ಆಕ್ಷನ್ ಕಟ್ ಹೇಳಿರೋ ಕಬ್ಜ ಸಿನಿಮಾ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬ ಮಾರ್ಚ್ 17ರಂದು ರಿಲೀಸ್ ಆಗುತ್ತಿದೆ. ಪ್ಯಾನ್ ಇಂಡಿಯಾ ಕಬ್ಜ ಸಿನಿಮಾಗೆ ಇಡೀ ಎಲ್ಲಾ ಇಂಡಸ್ಟ್ರಿ ಮತ್ತು ಸ್ಟಾರ್  ನಟನಟಿಯರು ಕೂಡ ಕಾದುಕುಳಿತಿದ್ದಾರೆ.

Written by - YASHODHA POOJARI | Edited by - Yashaswini V | Last Updated : Feb 27, 2023, 09:41 AM IST
  • ಉಪೇಂದ್ರ ನಟನೆಯ ‘ಕಬ್ಜ’ ಸಿನಿಮಾ ರಿಲೀಸ್​ಗೆ ರೆಡಿ ಇದೆ.
  • ಮಾರ್ಚ್ 17ರಂದು ಸಿನಿಮಾ ಅದ್ದೂರಿಯಾಗಿ ತೆರೆಗೆ ಬರುತ್ತಿದೆ.
  • ಈ ಚಿತ್ರದಲ್ಲಿ ಉಪೇಂದ್ರ, ಸುದೀಪ್ ಶ್ರೀಯಾ ಶರಣ್ ಮೊದಲಾದವರು ನಟಿಸಿದ್ದಾರೆ.
ನಾನು ರಾಜ್ಯ ಕಟ್ಟೋದು ಕತ್ತಿಗಳಿಂದಲ್ಲ ಕಣ್ರೋ.. ಅದನ್ನು ಹಿಡಿಯೋ ಕೈಗಳಿಂದ ಅಂತ ಉಪೇಂದ್ರ ಕೂಗಿದ್ದು ಯಾಕೆ...? title=
Kabzaa Audio Launch

ಬೆಂಗಳೂರು: ನಾನು ರಾಜ್ಯದ ಕಟ್ಟೋದು ಕತ್ತಿಗಳಿಂದಲ್ಲ ಕಣ್ರೋ.. ಅದನ್ನು ಹಿಡಿಯೋ ಕೈಗಳಿಂದ ಅಂತ ಕೂಗಿ ಕೂಗಿ ಹೇಳಿದ್ಯಾಕೆ ರಿಯಲ್ ಸ್ಟಾರ್ ಉಪೇಂದ್ರ.. ಯೆಸ್, ಕಬ್ಜ ಸಿನಿಮಾನದ ಮತ್ತೊಂದು ಹಾಡು ಇದೀಗ ಭರ್ಜರಿಯಾಗಿ ರಿಲೀಸ್ ಆಗಿದೆ. ಸಾಂಗ್ ರಿಲೀಸ್ ಕಾರ್ಯಕ್ರಮದಲ್ಲಿ ಉಪ್ಪಿ ಡೈಲಾಗ್ ಕೇಳಿ ಇಡೀ ಶಿಡ್ಲಘಟ್ಟ ನಡುಗಿದೆ.

ಉಪೇಂದ್ರ ನಟನೆಯ ‘ಕಬ್ಜ’ ಸಿನಿಮಾ ರಿಲೀಸ್​ಗೆ ರೆಡಿ ಇದೆ. ಮಾರ್ಚ್ 17ರಂದು ಸಿನಿಮಾ ಅದ್ದೂರಿಯಾಗಿ ತೆರೆಗೆ ಬರುತ್ತಿದೆ. ಈ ಚಿತ್ರದಲ್ಲಿ ಉಪೇಂದ್ರ, ಸುದೀಪ್ ಶ್ರೀಯಾ ಶರಣ್ ಮೊದಲಾದವರು ನಟಿಸಿದ್ದಾರೆ. ಶಿಡ್ಲಘಟ್ಟದಲ್ಲಿ ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮ ನಡೆಯಿತು.

ಇದನ್ನೂ ಓದಿ- ʼಜೋಳದ ರೊಟ್ಟಿ, ಬ್ಯಾಳಿ ಪಲ್ಯ, ಹಸಿ ಉಳ್ಳಾಗಡ್ಡಿ..ʼ ಇದ್ರಲ್ಲೇ ಐತ್ರೀ ಪ್ರೋಟೀನ್..!

ಆರ್ ಚಂದ್ರು ಆಕ್ಷನ್ ಕಟ್ ಹೇಳಿರೋ ಕಬ್ಜ ಸಿನಿಮಾ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬ ಮಾರ್ಚ್ 17ರಂದು ರಿಲೀಸ್ ಆಗುತ್ತಿದೆ. ಪ್ಯಾನ್ ಇಂಡಿಯಾ ಕಬ್ಜ ಸಿನಿಮಾಗೆ ಇಡೀ ಎಲ್ಲಾ ಇಂಡಸ್ಟ್ರಿ ಮತ್ತು ಸ್ಟಾರ್  ನಟನಟಿಯರು ಕೂಡ ಕಾದುಕುಳಿತಿದ್ದಾರೆ. ರವಿ ಬಸ್ರೂರ್ ಸಂಗೀತದ ಮೂಲಕ ದೊಡ್ಡ ಮಟ್ಟದಲ್ಲಿ  ಕಮಾಲ್ ಮಾಡ್ತಿದೆ ಕಬ್ಜ ಹಾಡು.

ಇದನ್ನೂ ಓದಿ- ʼಅದನ್ನಾದ್ರೂ ಯಾಕ್‌ ಹಾಕ್ಕೊಂಡಿʼ... ಇದ್ಯಾವ ಫ್ಯಾಶನ್‌..! ಉರ್ಫಿ ಲುಕ್‌ಗೆ ನೆಟ್ಟಿಗರು ಗರಂ

ಕಬ್ಜದಲ್ಲಿ ಉಪೇಂದ್ರಗೆ ನಾಯಕಿಯಾಗಿ ಶ್ರೀಯಾ ಶರಣ್ ಕಾಣಿಸಿಕೊಂಡಿದ್ದು, ನವಾಬ್ ಷಾ, ಕಬೀರ್ ಸಿಂಗ್ ದುಹಾನ್, ಪ್ರಮೋದ್ ಶೆಟ್ಟಿ, ಮುರಳಿ ಶರ್ಮ ಮುಂತಾದವರು ಅಭಿನಯಿಸಿದ್ದಾರೆ. 'ಕೆಜಿಎಫ್' ಖ್ಯಾತಿಯ ಸಂಗೀತ ನಿರ್ದೇಶಕ ರವಿ ಬಸ್ರೂರು ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಎಜೆ ಶೆಟ್ಟಿ ಅವರು ಛಾಯಾಗ್ರಹಣ ಮಾಡಿದ್ದು, 'ಕೆಜಿಎಫ್' ಖ್ಯಾತಿಯ ಶಿವಕುಮಾರ್ ಕಲಾ ನಿರ್ದೇಶನ ಮಾಡಿದ್ದಾರೆ. ಇದು ಸ್ವಾತಂತ್ರ್ಯಪೂರ್ವದ ಭೂಗತ ಲೋಕದ ಕಥೆಯಾಗಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News