Martin Film Teaser: ಧ್ರುವ ಸರ್ಜಾ ಹಿಂದೆ ನಿಂತಿದ್ದ  ವಿದೇಶಿ ಬೆಡಗಿಯರು ಯಾರು?

Martin Film Teaser: ಮಾರ್ಟಿನ್ ಗೆ ಟೀಸರ್ ಲಾಂಚ್ ಕಾರ್ಯಕ್ರಮದಲ್ಲಿ ಸೆಕ್ಯೂರಿಟಿ ಕೊಡುವ ಮೂಲಕ ಧ್ರುವ ಅಭಿಮಾನಿಗಳ ಗಮನ ಸೆಳದಿದ್ದಾರೆ ಚೆಂದುಳ್ಳಿ ಚೆಲುವೆಯರು.ಸ್ಟೇಜ್ ಮೇಲೆ ಕೆಂಪ್ಪು ಬಣ್ಣದ ಬಟ್ಡೆ ಧರಿಸಿ ಕೈಯಲ್ಲಿ ಗನ್ ಹಿಡಿದು ಮಾರ್ಟಿಬ್ ಮಾತನ್ನಚಾಚು ತಪ್ಪ್ಪದೆ ಪಾಲಿಸ್ತಿದ್ದ ವಿದೇಶಿ ಸುಂದರಿಯರು.

Written by - YASHODHA POOJARI | Last Updated : Feb 27, 2023, 11:02 AM IST
  • ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಮೊದಲ ಪ್ಯಾನ್ ಇಂಡಿಯಾ ಚಿತ್ರ ಮಾರ್ಟಿನ್
  • ಮಾರ್ಟಿನ್ ಟೀಸರ್ ಇವೆಂಟ್ ನಲ್ಲಿ ಮಾರ್ಟಿನ್ ಗೆ ಸೆಕ್ಯೂರಿಟಿಗೆ ನಿಂತಿದ್ದ ವಿದೇಶಿ ಬೆಡಗಿಯರು
  • ಪ್ರಿನ್ಸ್ ಧ್ರುವ ಸರ್ಜಾ ಸೆಕ್ಯೂರಿಟಿಯಾಗಿ ರಷ್ಯಾದ ಬೆಡಗಿಯರು
Martin Film Teaser: ಧ್ರುವ ಸರ್ಜಾ ಹಿಂದೆ ನಿಂತಿದ್ದ  ವಿದೇಶಿ ಬೆಡಗಿಯರು ಯಾರು? title=

Martin Film Teaser: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಮೊದಲ ಪ್ಯಾನ್ ಇಂಡಿಯಾ ಚಿತ್ರ ಮಾರ್ಟಿನ್ ಟೀಸರ್ ಸೋಷಿಯಲ್ ಮೀಡಿಯಾದಲ್ಲಿ ಸುಂಟರಗಾಳಿ ಎಬ್ಬಿಸಿದೆ.. ಟೀಸರ್ ನೋಡಿದವ್ರು ಅಬ್ಬಬ್ಬಾ ಇದು ಕನ್ನಡ ಸಿನಿಮಾನ‌ ಇಲ್ಲ ಹಾಲಿವುಡ್ ಸಿನಿಮಾನ ಅಂತ ಕನ್ಪ್ಯೂಸ್ ಆಗಿದ್ದಾರೆ.‌‌ಇದರ ಜೊತೆಗೆ ಟೀಸರ್ ಲಾಂಚ್ ಇವೆಂಟ್ ನಲ್ಲಿ ಮಾರ್ಟಿನ್ ಗೆ ಸೆಕ್ಯೂರಿಟಿಗೆ ನಿಂತಿದ್ದ ಬೆಡಗಿಯರು ಟೀಸರ್ ನಷ್ಟೇ ಗಮನ ಸೆಳೆದಿದ್ದಾರೆ..ಹಾಗಾದ್ರೆ ಮಾರ್ಟಿನ್ ಗೆ ಬಾಡಿಗಾರ್ಡ್ ಆಗಿ ಬಂದಿದ್ದೆ ಆ ಬೆಡಿಗಿಯರು ಯಾರು..? ಎಲ್ಲಿಂದ ಬಂದಿದ್ರು..? ಅವರನ್ನ ಕರೆಸಿದ್ದು ಯಾರು?  ಅಂತ ತಿಳ್ಕೋಬೇಕಾ..?

ಪೊಗರು ಪೋರ ಧ್ರುವ ಸರ್ಜಾ ಅವರನ್ನ ಆಕ್ಷನ್ ಪ್ರಿನ್ಸ್ ಅಂತ ಯಾಕ್ ಕರಿತಾರೆ ಅಂತ ಮಾರ್ಟಿನ್ ಟೀಸರ್ ಸಾಕ್ಷಿಯಾಗಿದೆ...ಕನ್ನಡ ಚಿತ್ರರಂಗದಲ್ಲಿ ಹಿಂದೆದು ಕಾಣಿಸದ ಧೈತ್ಯಕಾರದಲ್ಲಿ ಧ್ರುವ ಸರ್ಜಾ ಮಾರ್ಟಿನ್ ಚಿತ್ರದಲ್ಲಿ ಕಾಣಿಸಿದ್ದು, ಅಬ್ಬಬ್ಬಾ ಧ್ರುವ ಸರ್ಜಾ ಕನ್ನಡ ಅರ್ನಾಲ್ಡ್ ಅಂತಿದ್ದಾರೆ ಸಿನಿ ಪ್ರೇಮಿಗಳು..ಆದರೆ ಬಾಹುಬಲಿ ಮಾರ್ಟಿನ್ ಗೆ ಟೀಸರ್ ಲಾಂಚ್ ಕಾರ್ಯಕ್ರಮದಲ್ಲಿ ಸೆಕ್ಯೂರಿಟಿ ಕೊಡುವ ಮೂಲಕ ಧ್ರುವ ಅಭಿಮಾನಿಗಳ ಗಮನ ಸೆಳದಿದ್ದಾರೆ ಚೆಂದುಳ್ಳಿ ಚೆಲುವೆಯರು.ಸ್ಟೇಜ್ ಮೇಲೆ ಕೆಂಪ್ಪು ಬಣ್ಣದ ಬಟ್ಡೆ ಧರಿಸಿ ಕೈಯಲ್ಲಿ ಗನ್ ಹಿಡಿದು ಮಾರ್ಟಿಬ್ ಮಾತನ್ನಚಾಚು ತಪ್ಪ್ಪದೆ ಪಾಲಿಸ್ತಿದ್ದ ವಿದೇಶಿ ಸುಂದರಿಯರು..

ಇದನ್ನೂ ಓದಿ: ಕಬ್ಜ ಸಾಂಗ್ ರಿಲೀಸ್ ವೇದಿಕೆಯಲ್ಲಿ 'ಓಂ' ಸಿನಿಮಾದ ಡೈಲಾಗ್ ಹೇಳಿದ ಶಿವಣ್ಣ..!

ಮಾರ್ಟಿನ್ ಚಿತ್ರವನ್ನು ಎಷ್ಟು ಶಿಸ್ತಿನಿಂದ‌ ಮಾಡಿದ್ದಾರೋ ಅಷ್ಟೇ ಶಿಸ್ತಿನಲ್ಲಿ ಟೀಸರ್ ಲಾಂಚ್ ಇವೆಂಟ್ ಮಾಡಿ ಗೆದ್ದಿದ್ದಾರೆ ಮಾರ್ಟಿನ್ ಬಳಗ..ಇದಕ್ಕೆ ಸಾಕ್ಷಿ ಮಾರ್ಟಿನ್ ಟೀಸರ್ ಇವೆಂಟ್ ಧ್ರುವ ಸರ್ಜಾ ಕಲ್ಪನೆಯಂತೆ ಸ್ಪೆಷಲ್ ಆಗಿ ನೇರವೇರಿದೆ.ಕಾರ್ಯಕ್ರಮ ಆರಂಭವಾಗ್ತಿದಂತೆ ಕೆಂಪು ಬಣ್ಣದ ಬಟ್ಟೆ ಧರಿಸಿ ಶಿಸ್ತಿನಿಂದ‌ ಇರುವೆಗಳಂತೆ ಸಾಲಾಗಿ ಬಂದು ಸ್ಟೇಜ್ ಹತ್ತಿದ್ದ ವಿದೇಶಿ ಬೆಡಗಿಯರು ಗನ್ ಹಿಡಿದು ಮಾರ್ಟಿನ್ ಗೆ  ಸೆಕ್ಯೂರಿಟಿ ಕೆಲಸ ಮಾಡಿದ್ರು. ಅದರೆ ಅವರು ಮಾರ್ಟಿನ್ ಮಾತನ್ನ ಬಿಟ್ಟು ಬೇರೆಯಾರ ಮಾತನ್ನು ಕೇಳ್ತಿರಿಲ್ಲ..ಇದು ಕಾರ್ಯಕ್ರಮದ ಹೈಲೇಟ್ ಆಗಿತ್ತು..ಅದ್ರೆ ಅವರು ಯಾರು..? ಎಲ್ಲಿಂದ ಬಂದ್ರು? ಅವರು ಯಾಕೇ ಬೇರೆಯವ್ರ ಮಾತನ್ನ ಕೇಳ್ತಿರ್ಲಿಲ್ಲ ಅನ್ನೋ ಇದುವರೆಗೂ ಯಾರಿಗೂ ಅರ್ಥವಾಗಿಲ್ಲ..ಅಷ್ಟಕ್ಕೂ ಮಾರ್ಟಿನ್ ಬಳಗ ಅವರನ್ನ ಕರಿಸಿದ್ದು ಯಾಕೆ ಅನ್ನೋದು ಇದಯವರೆಗೂ ಕೆಲವರಿಗೆ ಅರ್ಥ ಆಗಿಲ್ಲ..

ಇದನ್ನೂ ಓದಿ:  Yuva Rajkumar : ಯುವ ರಾಜಕುಮಾರ ಮೊದಲ ಸಿನಿಮಾಗೆ ನಾಯಕಿ ಫೈನಲ್ : ಯಾರು ಈ ಲಕ್ಕಿ ಗರ್ಲ್?

ಯಾಕಂದ್ರೆ ಚಿತ್ರತಂಡ ಕಾರ್ಯಕ್ರಮದ ಸಿಕ್ರೇಟ್ ಅನ್ನು ಎಲ್ಲೂ ಬಿಟ್ಟು ಕೊಟ್ಟಿಲ್ಲ..ಅದ್ರೆ ಈಗ ಈ ಸಿಕ್ರೇಟ್ ಸಿನಿಮಾ‌ಟೆಂಟ್ ಬಳಗಕ್ಕೆ ಸಿಕ್ಕಿದೆ‌.. ಟೀಸರ್ ಇವೆಂಟ್ ನಲ್ಲಿ ಗಮನ ಸೆಳೆದ ಆ ಸುಂದರಿಯರು ಮೂಲತಃ ರಷ್ಯಾದವರು..ಮುಂಬೈನಲ್ಲಿ ನೆಲೆಸಿದ್ದ ರಷ್ಯಾದ ಬೆಡಗಿಯರನ್ನ ಮಾರ್ಟಿನ್ ಸೆಕ್ಯೂರಿಟಿಗಾಗಿಯೇ ಕರೆಸಲಾಗಿತ್ತು..ಅಷ್ಟಕ್ಕೂ ಅವರನ್ನೆ ಕರೆಸಿದ್ದು ಯಾಕೆ ಅಂತ ಅದಕ್ಕೆ ಉತ್ತರ ಮಾರ್ಟಿನ್ ಅನ್ನಬಹುದು..ಹೌದು ಮಾರ್ಟಿನ್ ಚಿತ್ರದಲ್ಲೂ ಇದೇ ತರಹದ ಸನ್ನಿವೇಶ ಇದ್ದು, ಅದೇ ಕಾನ್ಸೆಪ್ಟ್ ನಲ್ಲಿ ಮಾರ್ಟಿನ್ ಟೀಸರ್ ಲಾಂಚ್ ಮಾಡಲಾಗಿದೆ..‌ಅದ್ರೆ ಚಿತ್ರದಲ್ಲಿ ಈ ಬೆಡಗಿಯರು ಅರ್ಜುನ್ ಮಾತು ಕೇಳ್ತಾರ ಇಲ್ಲ ಮಾರ್ಟಿನ್ ಮಾತು ಪಾಲಿಸ್ತಾರ ಅನ್ನೋ ಗುಟ್ಟು ಬಿಟ್ಟು ಕೊಟ್ಟಿಲ್ಲ ಚಿತ್ರತಂಡ..

ಇನ್ನೂ ರಷ್ಯಾದ 20 ಬೆಡಗಿರನ್ನು ಕರೆಸಿ ಇದೇ ಕಾನ್ಸೆಪ್ಟ್ ನಲ್ಲಿ ಟೀಸರ್ ಲಾಂಚ್ ಮಾಡಲು ಧ್ರುವ ಸರ್ಜಾ ಬರೀ ಬರಿ ಮೂರು ತಿಂಗಳಿನಿಂದ ಪ್ಲಾನ್ ಮಾಡಿದ್ರು ಅನ್ನೋದು ವಿಶೇಷ..ಅಲ್ಲದೆ ಇವೆಂಟ್ ಗಾಗಿ 50 ಲಕ್ಷ ಕ್ಕೂ ಹೆಚ್ಚು ಖರ್ಚ್ ಮಾಡುವ ಮೂಲಕ ಮಾರ್ಟಿನ್ ಬಳಗ ಅದ್ದೂರಿಯಾಗಿ ಟೀಸರ್ ಲಾಂಚ್ ಮಾಡಿದ್ದು, ಇದನ್ನು ಮೀರಿಸುವಂತೆ ಪ್ರೀ ರಿಲೀಸ್ ಇವೆಂಟ್ ಮಾಡೊಕೆ ಭರ್ಜರಿಯಾಗಿ ತಯಾರಿ ಮಾಡ್ತಿದ್ದಾರೆ.

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

 

Trending News