Actress Rakshitha Prem Childhood Life: ಸಾಮಾನ್ಯವಾಗಿ ನೀವು ನಗುನಗುತ್ತಾ ಇರುವ ರಕ್ಷಿತಾ ಪ್ರೇಮ್ ಅವರನ್ನೇ ನೋಡಿರುತ್ತೀರಿ. ಅದು ಅವರು ಮಾಡಿರುವ ಸಿನಿಮಾಗಳಿರಲಿ ಅಥವಾ ರಿಯಾಲಿಟಿ ಷೋಗಳಿರಲಿ  ರಕ್ಷಿತಾ ಪ್ರೇಮ್ ಕ್ಯಾಮರಾ ಮುಂದೆ ಸದಾ ನಗುತ್ತಾ ಇರುತ್ತಾರೆ. ಅವರ ಸಿನಿ ಜರ್ನಿ ಖುಷಿಖುಷಿಯಾಗಿದ್ದರು ನಿಜ ಜೀವನದಲ್ಲಿ ಅಪಾರ ನೋವುಂಡು ಬೆಳೆದಿದ್ದಾರೆ.


COMMERCIAL BREAK
SCROLL TO CONTINUE READING

ಇತ್ತೀಚಿಗೆ ಸಂದರ್ಶನವೊಂದರಲ್ಲಿ ಮನ ಬಿಚ್ಚಿ ಮಾತನಾಡಿರುವ ಕ್ರೇಜಿ ಕ್ವೀನ್ ರಕ್ಷಿತಾ ಪ್ರೇಮ್ ತಮ್ಮ ವೈಯಕ್ತಿಕ ಸುಖದುಃಖಗಳ ಬಗ್ಗೆ ಹೇಳಿಕೊಂಡಿದ್ದಾರೆ. ವಿಶೇಷವಾಗಿ ತಾನು ತನ್ನ ಕಾಲ ಮೇಲೆ ನಿಲ್ಲುವಂತೆ ಮಾಡಲು ತಮ್ಮ ತಾಯಿ ಮಮತಾ ರಾವ್ ಪಟ್ಟ ಕಷ್ಟಗಳ ಸರಮಾಲೆ, ತಂದೆ ಬಿ.ಸಿ. ಗೌರಿಶಂಕರ್ ಅವರ ಎರಡನೇ ಮದುವೆ, ಆಗ ಧೈರ್ಯ ತುಂಬಿದ ಪಾರ್ವತಮ್ಮ ರಾಜಕುಮಾರ್ ಮತ್ತು ತಮ್ಮ ಜೀವನದಲ್ಲಿ ಪ್ರಮುಖ ಪಾತ್ರ ವಹಿಸಿದ ಮತ್ತೋರ್ವ ಮಹಿಳೆ ತಮ್ಮ ಅಜ್ಜಿ ಬಗ್ಗೆ ಹೇಳಿಕೊಂಡಿದ್ದಾರೆ.


ಇದನ್ನೂ ಓದಿ- ಸಲ್ಮಾನ್ ಖಾನ್ ಸಿನಿಮಾವನ್ನೇ ರಿಜೆಕ್ಟ್ ಮಾಡಿದ್ದ ಬ್ಯೂಟಿ, ಸದ್ಯ ಅತಿಹೆಚ್ಚು ಫಾಲೋವರ್ಸ್ ಹೊಂದಿರುವ ಸ್ಟಾರ್ ನಟಿ, ಈಕೆ ಯಾರ್ ಗೊತ್ತಾ!


ನಮ್ಮ ತಾಯಿ ಮನೆ ಇದ್ದದ್ದು ಬೆಂಗಳೂರಿನ ದಕ್ಷಿಣ ಭಾಗದಲ್ಲಿ ಇರುವ ಬನಶಂಕರಿ 2ನೇ ಸ್ಟೇಜ್ ನಲ್ಲಿ. ತಂದೆಯ ಮನೆ ಇದ್ದದ್ದು ಬಸವನಗುಡಿಯಲ್ಲಿ. ಬಳಿಕ ಜೆಪಿ ನಗರಕ್ಕೆ ಶಿಫ್ಟ್ ಆಗಿದ್ದೆವು ಎನ್ನುತ್ತಾ ತಾವು ಬೆಂಗಳೂರಿನ ಮತ್ತೊಂದು ಭಾಗವನ್ನು ನೋಡಿದ್ದೆ ಮದುವೆಯ ಬಳಿಕ ಎಂಬ ವಿಷಯವನ್ನೂ ಕೂಡ ರಕ್ಷಿತಾ ಪ್ರೇಮ್ ಹೇಳಿಕೊಂಡಿದ್ದಾರೆ. 


ತಾಯಿಯೊಂದಿಗೆ ಇಡೀ ರಾತ್ರಿ ರಸ್ತೆಯಲ್ಲಿ ಕಳೆದಿದ್ದ ರಕ್ಷಿತಾ! 
ಇಂಥ  ರಕ್ಷಿತಾ ಪ್ರೇಮ್ ಸ್ವತಂತ್ರವಾಗಿ ಬೆಳೆಯಬೇಕು, ತನ್ನ ಕಾಲ ಮೇಲೆ ತಾನು ನಿಂತುಕೊಳ್ಳುವಂತಾಗಬೇಕು ಎನ್ನುವ ಕಾರಣಕ್ಕೆ ಮುಂಬೈಗೆ ಕಳುಹಿಸಲಾಯಿತು. ಇದಕ್ಕಾಗಿ ತಾಯಿ ಮಮತಾ ರಾವ್ ತಮ್ಮ ಚಿನ್ನದ ಬಳೆಗಳನ್ನು ಮಾರಿದ್ದರು ಎಂದು ನೊಂದುಕೊಂಡಿರುವ ನಟಿ ರಕ್ಷಿತಾ, ಇದೇ ಸಂದರ್ಭದಲ್ಲಿ ತಂದೆ ಮನೆಯವರು ತಮ್ಮನ್ನು ಮನೆಯಿಂದ ಹೊರಹಾಕಿದ ದಿನ ಇಡೀ ರಾತ್ರಿ ತಾಯಿಯೊಂದಿಗೆ ರಸ್ತೆಯಲ್ಲಿ ಕಾಲಕಳೆದಿರುವ ಬಗ್ಗೆಯೂ ನೆನೆದಿದ್ದಾರೆ. 


ಇದನ್ನೂ ಓದಿ- ಐಶ್ವರ್ಯ ರೈಗೆ ಅಭಿಷೇಕ್ ಬಚ್ಚನ್ ಕೈ ಕೊಡಲು ಈ ನಟಿ ಕಾರಣನಾ?


ಚಿಕ್ಕಂದಿನಿಂದ ಕಷ್ಟಗಳನ್ನು ನೋಡಿರುವ ರಕ್ಷಿತಾ ಪ್ರತಿಯೊಬ್ಬರೂ ಹಣದ ವಿಚಾರದಲ್ಲಿ ಸ್ವಂತತ್ರರಾಗಿರಬೇಕು. ವ್ಯಕ್ತಿಗೆ ಯಾವಾಗ ಸಂದರ್ಭ ಹೇಗಿರುತ್ತೆ ಎಂಬುದನ್ನೂ ಊಹಿಸಲು ಸಾಧ್ಯವಿಲ್ಲ. ಹಾಗಾಗಿ ಪ್ರತಿಯೊಬ್ಬರೂ ತಮ್ಮ ಕಾಲಿನ ಮೇಲೆ ತಾವು ನಿಲ್ಲಬೇಕು ಎಂಬುದು ನಟಿ ರಕ್ಷಿತಾ ಅವರ ಸಲಹೆಯಾಗಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.