ಬೆಂಗಳೂರು: ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ‘ಪುನೀತ ಪರ್ವ’ ಕಾರ್ಯಕ್ರಮದಲ್ಲಿ ಸೇರಿದ ಅಷ್ಟೂ ಜನ ‘ಅಪ್ಪು’ ನೆನೆದು ಭಾವುಕರಾಗಿದ್ದರು. ಈ ಕಾರ್ಯಕ್ರಮಕ್ಕೆ ಸ್ಯಾಂಡಲ್‍ವುಡ್ ಕ್ವೀನ್ ರಮ್ಯಾ ಕೂಡ ಸಾಕ್ಷಿಯಾಗಿ ‘ಅಪ್ಪು’ ಬಗ್ಗೆ ಒಂದಷ್ಟು ಇಂಟ್ರೆಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡರು.


COMMERCIAL BREAK
SCROLL TO CONTINUE READING

ವೇದಿಕೆ ಮೇಲೆ ನಟಿ ರಮ್ಯಾ ಅವರು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಜೊತೆಗಿನ ಹಲವು ನೆನಪುಗಳನ್ನು ಬಿಚ್ಚಿಟ್ಟರು. ಇದು ನನಗೆ ತುಂಬಾ ಭಾವುಕ ಕ್ಷಣ ಅಂತಾ ಹೇಳಿದರು. ಶೂಟಿಂಗ್ ವೇಳೆ ‘ಅಪ್ಪು’ ನಡೆದುಕೊಳ್ಳುತ್ತಿದ್ದ ರೀತಿ, ವ್ಯಕ್ತಿತ್ವದ ಕುರಿತು ರಮ್ಯಾ ಮಾತನಾಡಿದರು. ಶೂಟಿಂಗ್ ಮಾಡುವಾಗ ‘ಅಪ್ಪು’ ಅವರೇ ನನಗೆ ಡಾನ್ಸ್ ಹೇಳಿಕೊಡುತ್ತಿದ್ದರು. ನನಗೆ ಡ್ಯಾನ್ಸ್ ಸ್ಟೆಪ್ಸ್ ಬರುತ್ತಿಲ್ಲ ಅಂದಾಗ ಮಾಸ್ಟರ್ ಬಳಿ ಹೋಗಿ ಕೆಲವು ಸ್ಟೆಪ್ಸ್ ಬದಲಾಯಿಸುತ್ತಿದ್ದರು. ಇವತ್ತು ಈ ವೇದಿಕೆ ಮೇಲೆ‌ ಇದ್ದೇನೆ ಅಂದ್ರೆ ಅದಕ್ಕೆ ಅಣ್ಣಾವ್ರ ಕುಟುಂಬವೇ ಕಾರಣ ಅಂತಾ ರಮ್ಯಾ ಹೇಳಿದರು.


ಇದನ್ನೂ ಓದಿ: Puneeth Parva: ‘ಪುನೀತ ಪರ್ವ’ದಲ್ಲಿ ಅಪ್ಪು ಡೈಲಾಗ್ ಹೊಡೆದ ನಟ ದೃವ ಸರ್ಜಾ ಹೇಳಿದ್ದೇನು?


ನಟಿ ಹಾಗೂ ಸಂಸದೆ ಸುಮಲತಾ ಅಂಬರೀಶ್ ಮಾತನಾಡಿ, ಅಪ್ಪು ಸಂಸ್ಕಾರ, ನಡತೆಯನ್ನು ಕೊಂಡಾಡಿದರು. 1 ವರ್ಷ ಹೇಗೆ ಕಳೆಯಿತು ಅನ್ನೋದೇ ಅರ್ಥ ಆಗಲಿಲ್ಲ. ಕನ್ನಡ ಚಿತ್ರರಂಗಕ್ಕೆ ನನ್ನ ಪರಿಚಯಿಸಿದ್ದು ಡಾ.ರಾಜ್‍ಕುಮಾರ್ ಮತ್ತು ಪಾರ್ವತಮ್ಮ‌ ಅವರು. ‘ಅಪ್ಪು’ವಿನ ತಾಯಿಯಾಗಿ ನಾನು ‘ದೊಡ್ಮನೆ ಹುಡುಗ’ ಸಿನಿಮಾದಲ್ಲಿ ನಟಿಸಿದ್ದೆ. ‘ಅಪ್ಪು’ ಅಂದರೆ ಅಂಬರೀಶ್‌ ಅವರಿಗೆ ತುಂಬಾ ಇಷ್ಟ. ‘ಅಪ್ಪು’ ಪರಿಸರ ಪ್ರೇಮಿಯಾಗಿದ್ದರು ಎಂದು ಸುಮಲತಾ ಹೇಳಿದರು.


ಅಪ್ಪು’ ಅಭಿಮಾನಿಗಳ ಪಾಲಿಗೆ ದೇವರಾಗಿದ್ದಾರೆ. ‘ಅಪ್ಪು’ಗೆ ಜನರು ನೀಡುತ್ತಿರುವ ಅಪಾರ ಪ್ರೀತಿ ಈ ಭೂಮಿ ಇರೋವರೆಗೂ, ಸೂರ್ಯ-ಚಂದ್ರ ಇರೋವರೆಗೂ ಕಮ್ಮಿಯಾಗೋದೇ ಇಲ್ಲವೆಂದರೆ ಅತಿಶಯೋಕ್ತಿಯಾಗಲಾರದು.


ಇದನ್ನೂ ಓದಿ: ರಾಜಕುಮಾರನ ‘ಗಂಧದಗುಡಿ’ಯಲ್ಲಿ ‘ಅಪ್ಪು ಎಕ್ಸ್​ಪ್ರೆಸ್​ ಆಂಬ್ಯುಲೆನ್ಸ್’ ಬಗ್ಗೆ ಪ್ರಕಾಶ್ ರೈ ಭಾವುಕ ನುಡಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ