Puneeth Parva: ‘ಪುನೀತ ಪರ್ವ’ದಲ್ಲಿ ಅಪ್ಪು ಡೈಲಾಗ್ ಹೊಡೆದ ನಟ ದೃವ ಸರ್ಜಾ ಹೇಳಿದ್ದೇನು?

ದುನಿಯಾ ವಿಜಯ್‌ ಪುನೀತ್‌ ಫೋಟೋ ಇರುವ ಬಿಳಿ ಶರ್ಚ್‌ ಹಾಕಿಕೊಂಡು ಅದರ ಮೇಲೆ ‘ನೀನೇ ರಾಜಕುಮಾರ’ ಎನ್ನುವ ಸಾಲುಗಳನ್ನು ಬರೆಸಿಕೊಂಡಿದ್ದರು.

Written by - YASHODHA POOJARI | Edited by - Puttaraj K Alur | Last Updated : Oct 22, 2022, 09:32 AM IST
  • ಪುನೀತ್‌ ಫೋಟೋ ಇರುವ ಬಿಳಿ ಶರ್ಚ್‌ ಹಾಕಿದ್ದ ನಟ ದುನಿಯಾ ವಿಜಯ್‌
  • ತಮ್ಮ ಸಿನಿಮಾ ಜೀವನವನ್ನೇ ‘ಅಪ್ಪು’ಗೆ ಅರ್ಪಿಸಿದ ನಟ-ನಿರ್ದೇಶಕ ರಾಜ್‌ ಬಿ ಶೆಟ್ಟಿ
  • ‘ಅಪ್ಪು’ ಚಿತ್ರದ ಮಾಸ್ ಡೈಲಾಗ್ ಹೊಡೆದು ಸ್ಮರಿಸಿದ ನಟ ಧ್ರುವ ಸರ್ಜಾ
Puneeth Parva: ‘ಪುನೀತ ಪರ್ವ’ದಲ್ಲಿ ಅಪ್ಪು ಡೈಲಾಗ್ ಹೊಡೆದ ನಟ ದೃವ ಸರ್ಜಾ ಹೇಳಿದ್ದೇನು? title=
‘ಅಪ್ಪು’ ಸ್ಮರಿಸಿದ ನಟ ಧ್ರುವ ಸರ್ಜಾ

ಬೆಂಗಳೂರು: ಬೆಂಗಳೂರಿನ ಅರಮನೆ ಮೈದಾನದಲ್ಲಿ ಶುಕ್ರವಾರ ‘ಪುನೀತ ಪರ್ವ’ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು. ಅರಮನೆ ಮೈದಾನದ ಕೃಷ್ಣ ವಿಹಾರ್‌ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕನ್ನಡ, ತೆಲುಗು, ತಮಿಳು, ಸೇರಿದಂತೆ ಎಲ್ಲ ಭಾಷೆಯ ಕಲಾವಿದರು, ಪುನೀತ್‌ ಅವರ ಆಪ್ತರು, ಸ್ನೇಹಿತರು ಪಾಲ್ಗೊಂಡು ‘ಅಪ್ಪು’ವನ್ನು ಸ್ಮರಿಸಿದರು. ಹಿರಿಯ ನಟ ಹಾಗೂ ನಿರ್ಮಾಪಕ ರಾಘವೇಂದ್ರ ರಾಜ್‌ಕುಮಾರ್‌ ಅವರು ‘ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ..’ ಎನ್ನುವ ಹಾಡನ್ನು ಹಾಡುವ ಮೂಲಕ ‘ಪುನೀತ ಪರ್ವ’ಕ್ಕೆ ಚಾಲನೆ ನೀಡಿದರು.

ಇದನ್ನೂ ಓದಿ: ಅಪ್ಪುವಿನ ನಗು ನನ್ನನ್ನು ಯಾವಾಗಲೂ ಆಕರ್ಷಿಸಿತ್ತು- ಅಮಿತಾಬ್ ಬಚ್ಚನ್

ಗಣ್ಯರು, ಅಭಿಮಾನಿಗಳು, ಕಲಾವಿದರು ಬಿಳಿ ಬಟ್ಟೆಯಲ್ಲಿ ಬಂದಿದ್ದು ಕಾರ್ಯಕ್ರಮದ ವಿಶೇಷವಾಗಿತ್ತು. ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್‌, ಗೀತಾ ಶಿವರಾಜ್‌ಕುಮಾರ್‌, ಯುವರಾಜ್‌ಕುಮಾರ್‌, ಧೀರನ್‌ ರಾಮ್‌ಕುಮಾರ್‌ ಸೇರಿದಂತೆ ರಾಜ್‌ ಕುಟುಂಬದ ಸದಸ್ಯರು ಹಾಗೂ ಸಂಸದೆ ಸುಮಲತಾ ಅಂಬರೀಶ್‌, ನಟ ಯಶ್‌, ರಾಧಿಕಾ ಪಂಡಿತ್‌, ಪ್ರಕಾಶ್‌ ರೈ, ಸೂರ್ಯ, ಸಿದ್ದಾರ್ಥ್, ರಾಣಾ ದಗ್ಗುಬಾಟಿ, ಅಕ್ಕಿನೇನಿ ಅಖಿಲ್‌, ಸಾಯಿ ಕುಮಾರ್‌, ರಮೇಶ್‌ ಅರವಿಂದ್‌, ಶರತ್‌ ಕುಮಾರ್‌, ಧ್ರುವ ಸರ್ಜಾ, ರಾಜ್‌ ಬಿ ಶೆಟ್ಟಿ, ಪ್ರಿಯಾ ಆನಂದ್‌, ಸುಧಾರಾಣಿ, ಶ್ರುತಿ, ಮೇಘನಾ ರಾಜ್‌, ದುನಿಯಾ ವಿಜಯ್‌, ಅಚ್ಯುತ್‌ ಕುಮಾರ್‌, ರಂಗಾಯಣ ರಘು ಸೇರಿದಂತೆ ಕನ್ನಡ ಚಿತ್ರರಂಗದ ಬಹುತೇಕ ನಟ, ನಟಿಯರು, ತಂತ್ರಜ್ಞರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಇದನ್ನೂ ಓದಿ: ರಾಜಕುಮಾರನ ‘ಗಂಧದಗುಡಿ’ಯಲ್ಲಿ ‘ಅಪ್ಪು ಎಕ್ಸ್​ಪ್ರೆಸ್​ ಆಂಬ್ಯುಲೆನ್ಸ್’ ಬಗ್ಗೆ ಪ್ರಕಾಶ್ ರೈ ಭಾವುಕ ನುಡಿ

ದುನಿಯಾ ವಿಜಯ್‌ ಪುನೀತ್‌ ಫೋಟೋ ಇರುವ ಬಿಳಿ ಶರ್ಚ್‌ ಹಾಕಿಕೊಂಡು ಅದರ ಮೇಲೆ ‘ನೀನೇ ರಾಜಕುಮಾರ’ ಎನ್ನುವ ಸಾಲುಗಳನ್ನು ಬರೆಸಿಕೊಂಡಿದ್ದರು. ಅವರು ಮಾತನಾಡುವ ಮುನ್ನ ಭಾವುಕರಾದರು. ರಾಜ್‌ ಬಿ ಶೆಟ್ಟಿ ಅವರು ತಮ್ಮ ಸಿನಿಮಾ ಜೀವನವನ್ನೇ ‘ಅಪ್ಪು’ಗೆ ಅರ್ಪಿಸಿದರು. ‘ನೀವು ಹೊಡೆದ್ರೆ ಕೇಸು ಸಾರ್‌… ಅದೇ ನಾವ್‌ ತಿರುಗಿ ಹೊಡೆದ್ರೆ ಹೆಡ್‌ ಲೈನ್‌ ನ್ಯೂಸ್‌ ಸಾರ್‌’ ಎನ್ನುವ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಟನೆಯ ಚಿತ್ರದ ಡೈಲಾಗ್‌ ಹೊಡೆದ ಧ್ರುವ ಸರ್ಜಾ ‘ಅಪ್ಪು’ ಸ್ಮರಿಸಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News