ಮಾಜಿ ಪತಿ ಕುರಿತು ಸ್ಟೋರಿ ಪೋಸ್ಟ್ ಮಾಡಿದ ನಟಿ.. 3 ವರ್ಷದ ಹಿಂದಿನ ಘಟನೆ ನೆನೆದು ಖುಷಿಪಟ್ಟ ಸಮಂತಾ!
ವಿಚ್ಛೇದನದ ಬಳಿಕ ಮಾಜಿ ಪತಿ ನಾಗ ಚೈತನ್ಯಗೆ ಸಂಬಂಧಿಸಿದ ಎಲ್ಲ ಹಳೆಯ ಪೋಸ್ಟ್ಗಳನ್ನು ತಮ್ಮ ಸಾಮಾಜಿ ಮಾದ್ಯಮ ಖಾತೆಯಿಂದ ಸಮಂತಾ ಡಿಲೀಟ್ ಮಾಡಿದ್ದರು. ಆದರೆ ಈಗ ಮತ್ತೆ ಅವರು ನಾಗ ಚೈತನ್ಯ ಕುರಿತು ಇನ್ಸ್ಟಾಗ್ರಾಮ್ನಲ್ಲಿ ಸ್ಟೋರಿ ಪೋಸ್ಟ್ ಮಾಡಿದ್ದಾರೆ.
ನಟಿ ಸಮಂತಾ (samantha) ಹಾಗೂ ನಾಗ ಚೈತನ್ಯ ವಿಚ್ಛೇದನ ಆದಾಗಿನಿಂದಲೂ ಅವರಿಬ್ಬರ ಬಗ್ಗೆ ಅನೇಕ ಗಾಸಿಪ್ಗಳು ಹರಿದಾಡುತ್ತಿವೆ. ಅವರಿಬ್ಬರ ನಡುವಿನ ಈ ಮನಸ್ತಾಪ ಅಭಿಮಾನಿಗಳಲ್ಲಿ ಬೇಸರ ಉಂಟು ಮಾಡಿದೆ.
ಇದನ್ನೂ ಓದಿ:KGF 2: ತೂಫಾನ್ ಬಳಿಕ ಮತ್ತೊಂದು ಲಿರಿಕಲ್ ಸಾಂಗ್ ರಿಲೀಸ್ ಮಾಡಿದ ಕೆಜಿಎಫ್2 ತಂಡ
ವಿಚ್ಛೇದನದ ಬಳಿಕ ಮಾಜಿ ಪತಿ ನಾಗ ಚೈತನ್ಯಗೆ (Naga Chaitanya) ಸಂಬಂಧಿಸಿದ ಎಲ್ಲ ಹಳೆಯ ಪೋಸ್ಟ್ಗಳನ್ನು ತಮ್ಮ ಸಾಮಾಜಿ ಮಾದ್ಯಮ ಖಾತೆಯಿಂದ ಸಮಂತಾ ಡಿಲೀಟ್ ಮಾಡಿದ್ದರು. ಆದರೆ ಈಗ ಮತ್ತೆ ಅವರು ನಾಗ ಚೈತನ್ಯ ಕುರಿತು ಇನ್ಸ್ಟಾಗ್ರಾಮ್ನಲ್ಲಿ ಸ್ಟೋರಿ ಪೋಸ್ಟ್ ಮಾಡಿದ್ದಾರೆ.
ಆದರೆ ಇದು ಅವರಿಬ್ಬರ ಖಾಸಗಿ ವಿಚಾರ ಅಲ್ಲ. ನಾಗಚೈತನ್ಯ ಮತ್ತು ಸಮಂತಾ ಜೋಡಿಯಾಗಿ ನಟಿಸಿದ್ದ ‘ಮಜಿಲಿ’ (Majili) ಚಿತ್ರ ಬಿಡುಗಡೆಯಾಗಿ ಇಂದಿಗೆ ಮೂರು ವರ್ಷ. ಈ ಕುರಿತಾಗಿ ಸ್ಟೋರಿಯೊಂದನ್ನು ಸಮಂತಾ ಪೋಸ್ಟ್ ಮಾಡಿದ್ದಾರೆ. ಪೋಸ್ಟರ್ ಅನ್ನು ಅವರು ಹಂಚಿಕೊಂಡಿದ್ದಾರೆ. ಮೂರು ವರ್ಷಗಳ ಹಿಂದೆ ಬಿಡುಗಡೆ ಆಗಿದ್ದ ಆ ಸಿನಿಮಾದ ಬಗ್ಗೆ ಸಮಂತಾ ನೆನಪು ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: Love Mocktail 2: ಈ ದಿನದಂದು ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗಲಿದೆ ‘ಲವ್ ಮಾಕ್ಟೇಲ್ 2’
ಮೂರು ವರ್ಷ ಪೂರ್ಣಗೊಂಡಿರುವ ಖುಷಿಯಲ್ಲಿ ಮಜಿಲಿ ಚಿತ್ರದ ಪೋಸ್ಟರ್ ಅನ್ನು ಸಮಂತಾ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಆ ಪೋಸ್ಟರ್ನಲ್ಲಿ ನಾಗ ಚೈನತ್ಯ ಅವರ ಫೋಟೋ ಹೈಲೈಟ್ ಆಗಿದೆ. ‘ಯೇ ಮಾಯ ಚೇಸಾವೆ’, ‘ಮನಂ’, ‘ಆಟೋನಗರ್ ಸೂರ್ಯ’ ಮತ್ತು ‘ಮಜಿಲಿ’ ಸಿನಿಮಾಗಳಲ್ಲಿ ಸಮಂತಾ ಮತ್ತು ನಾಗ ಚೈತನ್ಯ ಜೊತೆಯಾಗಿ ನಟಿಸಿದ್ದಾರೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.