Love Mocktail 2: ಈ ದಿನದಂದು ಸ್ಟಾರ್​ ಸುವರ್ಣದಲ್ಲಿ ಪ್ರಸಾರವಾಗಲಿದೆ ‘ಲವ್ ಮಾಕ್ಟೇಲ್ 2’

Love Mocktail 2: ಕೊರೊನಾ ಭಯ ಜನರಲ್ಲಿಇನ್ನೂ ಸಂಪೂರ್ಣವಾಗಿ ಹೋಗದ ಕಾರಣ ಹಲವರು ಚಿತ್ರಮಂದಿರಕ್ಕೆ ಬರಲು ಹಿಂಜರೆಯುತ್ತಿದ್ದಾರೆ. ಥಿಯೇಟರ್‌ನಲ್ಲಿ ಈ ಚಿತ್ರವನ್ನು ಮಿಸ್‌ ಮಾಡಿಕೊಂಡವರಿಗೆ ಸ್ಟಾರ್‌ ಸುವರ್ಣದಲ್ಲಿ ಈ ಚಿತ್ರವನ್ನು ನೋಡಲು ಅವಕಾಶ ಸಿಗಲಿದೆ. 

Written by - Chetana Devarmani | Last Updated : Apr 6, 2022, 11:33 AM IST
  • ಡಾರ್ಲಿಂಗ್ ಕೃಷ್ಣ ನಟಿಸಿ, ನಿರ್ದೇಶಿಸಿದ್ದ ಲವ್ ಮಾಕ್ಟೇಲ್ 1 ಮತ್ತು 2
  • ಚಿತ್ರಮಂದಿರಗಳಲ್ಲಿ, ಒಟಿಟಿಯಲ್ಲಿ ಸಾಕಷ್ಟು ಸದ್ದು ಮಾಡಿದ್ದ ಸಿನಿಮಾ
  • ಈಗ ಲವ್‌ ಮಾಕ್ಟೇಲ್‌ 2 ಚಿತ್ರ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದೆ
Love Mocktail 2: ಈ ದಿನದಂದು ಸ್ಟಾರ್​ ಸುವರ್ಣದಲ್ಲಿ ಪ್ರಸಾರವಾಗಲಿದೆ ‘ಲವ್ ಮಾಕ್ಟೇಲ್ 2’ title=
ಲವ್‌ ಮಾಕ್ಟೇಲ್‌ 2

ಡಾರ್ಲಿಂಗ್ ಕೃಷ್ಣ (Darling Krishna) ಅವರ ಲವ್ ಮಾಕ್ಟೇಲ್ (Love Mocktail) ಸಿನಿಮಾ ಸೂಪರ್ ಹಿಟ್​ ಆಗಿತ್ತು, ಅಲ್ಲದೇ ಬಾಕ್ಸ್​ ಆಫೀಸ್​ನಲ್ಲಿ ಒಳ್ಳೆಯ ಗಳಿಕೆ ಮಾಡಿತ್ತು. ಅದಾದ ಬಳಿಕ ಲವ್​ ಮಾಕ್ಟೇಲ್​ 2 ಬಂದಿತು. ಚಿತ್ರಮಂದಿರಗಳಲ್ಲಿ, ಒಟಿಟಿಯಲ್ಲಿ ಈ ಸಿನಿಮಾ ಸಾಕಷ್ಟು ಸದ್ದು ಮಾಡಿತ್ತು. 

ಇದನ್ನೂ ಓದಿ: ಕನ್ನಡ ಸಿನಿಮಾ ಹವಾ: ರಿಲೀಸ್‌ಗೂ ಮೊದಲೇ 500 ಕೋಟಿ ವಸೂಲಿ ಮಾಡಿದ 'ಕೆಜಿಎಫ್‌-2'..!

ಈ ಚಿತ್ರವನ್ನು ಪ್ರೇಕ್ಷಕರು ಚಿತ್ರಮಂದಿರದಲ್ಲಿ ಮೆಚ್ಚಿಕೊಂಡಿದ್ದರು. ಆ ಬಳಿಕ ಅಮೆಜಾನ್​ ಪ್ರೈಮ್ (Amazon Prime)​ ವಿಡಿಯೋದಲ್ಲಿ ರಿಲೀಸ್​ ಆಗಿತ್ತು. ಈಗ ಲವ್‌ ಮಾಕ್ಟೇಲ್‌ 2 ಚಿತ್ರ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದೆ. ಸ್ಟಾರ್​ ಸುವರ್ಣದಲ್ಲಿ  ಇಂದು (ಏಪ್ರಿಲ್​ 6) ಸಂಜೆ ಆರು ಗಂಟೆಗೆ ಲವ್​ ಮಾಕ್ಟೇಲ್​ 2 (Love Mocktail 2) ಪ್ರಸಾರವಾಗಲಿದೆ.

ಕೊರೊನಾ (Corona) ಭಯ ಜನರಲ್ಲಿಇನ್ನೂ ಸಂಪೂರ್ಣವಾಗಿ ಹೋಗದ ಕಾರಣ ಹಲವರು ಚಿತ್ರಮಂದಿರಕ್ಕೆ ಬರಲು ಹಿಂಜರೆಯುತ್ತಿದ್ದಾರೆ. ಥಿಯೇಟರ್‌ನಲ್ಲಿ ಈ ಚಿತ್ರವನ್ನು ಮಿಸ್‌ ಮಾಡಿಕೊಂಡವರಿಗೆ ಸ್ಟಾರ್‌ ಸುವರ್ಣದಲ್ಲಿ (Star Suvarna) ಈ ಚಿತ್ರವನ್ನು ನೋಡಲು ಅವಕಾಶ ಸಿಗಲಿದೆ. 

ಇದನ್ನೂ ಓದಿ: KGF 2: ತೂಫಾನ್ ಬಳಿಕ ರಿಲೀಸ್‌ ಆಗ್ತಿದೆ ಮತ್ತೊಂದು ಲಿರಿಕಲ್‌ ಸಾಂಗ್‌! ಇದು ಎಲ್ಲಾ ಅಮ್ಮಂದಿರ ಧ್ವನಿ ಎಂದ ಕೆಜಿಎಫ್‌2 ತಂಡ!

ಲವ್ ಮಾಕ್ಟೇಲ್ 2ನಲ್ಲಿ ಡಾರ್ಲಿಂಗ್ ಕೃಷ್ಣ ನಾಯಕನಾಗಿ ಕಾಣಿಸಿಕೊಂಡಿರುವುದಲ್ಲದೇ ಚಿತ್ರವನ್ನು ನಿರ್ದೇಶಿಸಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News