ಕುತೂಹಲ ಹೆಚ್ಚಿಸಿದೆ ʼಆದಿಪುರುಷ್ʼ 2ನೇ ಟ್ರೈಲರ್; ಒಂದೂವರೆ ಕೋಟಿ ವೀಕ್ಷಣೆ
Adipurush : ತೆಲುಗಿನ ಖ್ಯಾತ ನಟ ಪ್ರಭಾಸ್ ಅಭಿನಯದ ʼಆದಿಪುರುಷ್ʼ ಚಿತ್ರದಲ್ಲಿ ಸಿನಿಮಾ ತೆರೆ ಕಾಣಲು ಸಜ್ಜಾಗಿದೆ. ಈಗಾಗಲೇ ಪ್ರಚಾರ ಕಾರ್ಯ ಶುರುವಿಟ್ಟುಕೊಂಡಿರುವ ಚಿತ್ರತಂಡ ಮಂಗಳವಾರ ತಿರುಪತಿಯಲ್ಲಿ 2ನೇ ಟ್ರೈಲರ್ನ್ನು ಬಿಡುಗಡೆ ಮಾಡಿದೆ. ಇದು ಚಿತ್ರದ ಮೇಲಿನ ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿದೆ.
Adipurush Trailer 2 : ರಾಮಾಯಣವನ್ನು ಆಧರಿಸಿದ ಕಥಾಹಂದರವನ್ನು ಹೊಂದಿರುವ ಈ ಆದಿಪುರುಷ್ ಚಿತ್ರದಲ್ಲಿ ಪ್ರಭಾಸ್ ರಾಮನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಾಲಿವುಡ್‌ನ ಖ್ಯಾತ ನಟಿ ಕೃತಿ ಸಾನೋನ್ ಸೀತೆಯ ಪಾತ್ರದಲ್ಲಿ ಕಂಡಿದ್ದು, ಸೈಫ್ ಅಲಿಖಾನ್ ರಾವಣನ ಪಾತ್ರದಲ್ಲಿ ಮಿಂಚಿದ್ದಾರೆ. ಸೀತೆಯ ಅಪಹರಣ ಮತ್ತು ರಾವಣನ ಸಂಹಾರದ ಕಥೆಯನ್ನು ಇಲ್ಲಿ ಹೇಳಲಾಗಿದ್ದು, ಇದು ಟ್ರೈಲರ್‌ನಲ್ಲಿ ಅದ್ಭುತವಾಗಿ ಮೂಡಿಬಂದಿದೆ.
ಟ್ರೈಲರ್‌ನಲ್ಲಿರುವ ದೃಶ್ಯಗಳು, ಎಫೆಕ್ಟ್‌ಗಳು ಎಲ್ಲರ ಗಮನಸೆಳೆಯುವಂತಿದ್ದು, ಅನಿಮೇಷನ್‌ನ್ನು ಒಳಗೊಂಡಿದೆ. ಕಳೆದ ಅಕ್ಟೋಬರ್‌ನಲ್ಲಿ ಬಿಡುಗಡೆಯಾಗಿದ್ದ ಆದಿಪುರುಷ್ ಟೀಸರ್ ಸರಣಿ ಟೀಕೆಗಳಿಗೆ ಒಳಗಾಗಿತ್ತು. ಅನಿಮೇಷನ್ ಎಫೆಕ್ಟ್‌ಗಳನ್ನು ನೋಡಿ ಜನ ಕಾರ್ಟೂನ್‌ಗಿಂದ ಕಳಪೆಯಾಗಿ ಎಂದು ಟೀಕಿಸಿದ್ದರು. ನಿರ್ದೇಶಕ ಓಂ ರಾವುತ್ ಅವರನ್ನು ಸಹ ನೆಟ್ಟಿಗರು 700 ಕೋಟಿ ಮೊತ್ತದಲ್ಲಿ ಕಾರ್ಟೂನ್ ಸಿನಿಮಾ ಮಾಡುತ್ತಿದ್ದೀರಾ ಎಂದು ಪ್ರಶ್ನೆ ಮಾಡಿದ್ದರು.
Sandalwood Actor: ಈ ಫೋಟೋದಲ್ಲಿ ಇರುವವರು ಸ್ಯಾಂಡಲ್ವುಡ್ ನಟರು ಹಾಗಿದ್ದರೆ ಯಾರೆಂದು ಗುರುತಿಸಬಲ್ಲಿರಾ....
ಈ ರೀತಿಯ ಟೀಕೆ ಹಾಗೂ ಖಂಡನೆ ವ್ಯಕ್ತವಾದ ಬಳಿಕ ಚಿತ್ರತಂಡ ಚಿತ್ರದ ಬಿಡುಗಡೆ ದಿನಾಂಕವನ್ನು ಮುಂದೂಡಿತ್ತು. ಇದೀಗ ಮತ್ತೆ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ನಡೆಸಿ ಗುಣಮಟ್ಟವನ್ನು ಸುಧಾರಿಸಿದೆ. ಹಳೆಯ ಟೀಸರ್‌ಗೆ ಹೋಲಿಸಿದರೆ ಟ್ರೈಲರ್ ಗಳು ಬಹುಪಾಲು ಉತ್ತಮ ಎಂಬ ಮೆಚ್ಚುಗೆಯ ಮಾತುಗಳು ಕೇಳಿಬಂದಿದ್ದು, ಸಾಕಷ್ಟು ನಿರೀಕ್ಷೆಗಳನ್ನು ಕೆರಳಿಸಿರುವ ಚಿತ್ರ ಜೂನ್ 16ಕ್ಕೆ ಕನ್ನಡ, ತೆಲುಗು, ಹಿಂದಿ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ತೆರೆ ಕಾಣಲಿದೆ.
ಇದನ್ನೂ ಓದಿ-Viral Song : ಈ ಸುಂದರನ ಸನ್ಯಾಸಿ ಮಾಡಬಹುದೇ; ಮಳವಳ್ಳಿಯವರ ಹಾಡಿಗೆ ಪಡ್ಡೆ ಹೈಕ್ಳು ಫುಲ್ ಫಿದಾ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.