Viral Song : ಈ ಸುಂದರನ ಸನ್ಯಾಸಿ ಮಾಡಬಹುದೇ; ಮಳವಳ್ಳಿಯವರ ಹಾಡಿಗೆ ಪಡ್ಡೆ ಹೈಕ್ಳು ಫುಲ್‌ ಫಿದಾ

E sundarana Sanyasi Madabhude : ಈ ಸುಂದರನ ಸನ್ಯಾಸಿ ಮಾಡಬಹುದೇ ಹಾಡನ್ನು ಖ್ಯಾತ ಜನಪದ ಗಾಯಕ ಡಾ. ಮಳವಳ್ಳಿ ಮಹದೇವಸ್ವಾಮಿ ಹಾಡಿದ್ದಾರೆ. ಅರ್ಜುನನ ಜೋಗಿ ಸರಣಿ ಹೆಸರಿನಲ್ಲಿ 2019 ಝೇಂಕಾರ ಯೂಟ್ಯೂಬ್‌ ಚಾನೆಲ್‌ನಲ್ಲಿ  ಬಿಡುಗಡೆ ಆಗಿದ್ದು, ಸದ್ಯ ಈ ಹಾಡು ಸೋಷಿಯಲ್‌ ಮಿಡಿಯಾಲ್ಲಿ ಸಖತ್‌ ಸೌಂಡ್‌ ಮಾಡುತ್ತಿದೆ.   

Written by - Savita M B | Last Updated : Jun 7, 2023, 12:43 PM IST
  • ಈ ಸುಂದರನ ಸನ್ಯಾಸಿ ಮಾಡಬಹುದೇ ಹಾಡು ಸಿಂಗಲ್‌ ಸುಂದರರ ಗಮನ ಸೆಳೆದಿದೆ
  • ಇದರಿಂದ ಸರಣಿ ರೀಲ್ಸ್‌ಗಳು ಸೋಷಿಯಲ್‌ ಮಿಡಿಯಾದಲ್ಲಿ ಹರಿದಾಡುತ್ತಿವೆ.
  • ಹಾಗಾದರೆ ಈ ಹಾಡಿನ ವಿಶೇಷತೆ ಏನು ಅನ್ನೊದು ಇಲ್ಲಿದೆ ನೋಡಿ.
Viral Song : ಈ ಸುಂದರನ ಸನ್ಯಾಸಿ ಮಾಡಬಹುದೇ; ಮಳವಳ್ಳಿಯವರ ಹಾಡಿಗೆ ಪಡ್ಡೆ ಹೈಕ್ಳು ಫುಲ್‌ ಫಿದಾ  title=

ಸಖತ್‌ ಟ್ರೆಂಡ್‌ ಆಯ್ತು ಸನ್ಯಾಸಿ ಸಾಂಗ್‌ : ಈ ಸುಂದರನ ಸನ್ಯಾಸಿ ಮಾಡಬಹುದೇ ಹಾಡು ಸಿಂಗಲ್‌ ಸುಂದರರ ಗಮನ ಸೆಳೆದಿದ್ದು, ಇದರಿಂದ ಸರಣಿ ರೀಲ್ಸ್‌ಗಳು ಸೋಷಿಯಲ್‌ ಮಿಡಿಯಾದಲ್ಲಿ ಹರಿದಾಡುತ್ತಿವೆ. ಹಾಗಾದರೆ ಈ ಹಾಡಿನ ವಿಶೇಷತೆ ಏನು ಅನ್ನೊದು ಇಲ್ಲಿದೆ ನೋಡಿ.

ಸೋಷಿಯಲ್‌ ಮಿಡಿಯಾಗಳಲ್ಲಿ ದಿನನಿತ್ಯ ಒಂದಲ್ಲ ಒಂದು ಟ್ರೆಂಡ್‌ ಸೃಷ್ಟಿಯಾಗುತ್ತಲೆ ಇರುತ್ತೆ. ಆಡಿಯೋ, ವಿಡಿಯೋ, ಪೋಟೋ ಸೇರಿದಂತೆ ಇತ್ಯಾದಿಗಳು ವೈರಲ್‌ ಆಗುತ್ತಲೇ ಇರುತ್ತವೆ. ಅರಲ್ಲೂ ಇನ್‌ಸ್ಟಾಗ್ರಂನಲ್ಲಿ ವಿವಿಧ ಹಾಡಿನ ರೀಲ್ಸ್‌ಗಳು ಸಖತ್‌ ಸೌಂಡ್‌ ಮಾಡುತ್ತಿರುತ್ತವೆ. ಇದೀಗ ಅಂತಹದ್ದೆ ಹಾಡೊಂದು ಮಸ್ತ್‌ ವೈರಲ್‌ ಆಗಿದ್ದು, ಅದೇ ಅನ್ಯಾಯಕಾರಿ ಬ್ರಹ್ಮ ಈ ಸುಂದರನ ಸನ್ಯಾಸಿ ಮಾಡಬಹುದೇ ಹಾಡು.

ಇದನ್ನೂ ಓದಿ-Sandalwood Actor: ಈ ಫೋಟೋದಲ್ಲಿ ಇರುವವರು ಸ್ಯಾಂಡಲ್​​ವುಡ್ ನಟರು ಹಾಗಿದ್ದರೆ ಯಾರೆಂದು ಗುರುತಿಸಬಲ್ಲಿರಾ....

ಕರ್ನಾಟಕದಲ್ಲಿ ಸದ್ಯ ಜಾನಪದ ಶೈಲಿಗೆ ಸೋಷಿಯಲ್‌ ಮಿಡಿಯಾಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದ್ದು,  ಕಡಿಮೆ ಅವಧಿಯಲ್ಲಿ ಸಖತ್‌ ವೃರಲ್‌ ಆಗಿದೆ. ಹಾಗದರೆ ಈ ಸಾಂಗ್‌ ಯಾವುದು? ಹಾಡಿದವರು ಯಾರು? ಅನ್ನೋದು ಇಲ್ಲಿದೆ .

ಈ ಸುಂದರನ ಸನ್ಯಾಸಿ ಮಾಡಬಹುದೇ ಹಾಡು ಸಿನಿಮಾದ ಹಾಡಲ್ಲ, ಇದೊಂದು ಅಪ್ಪಟ ಜಾನಪದ ಗೀತೆ. ಈ ಹಾಡನ್ನು ಹಾಡಿದವರು ಖ್ಯಾತ ಜಾನಪದ ಹಾಡುಗಾರ ಡಾ. ಮಳವಳ್ಳಿ ಮಹಾದೇವಸ್ವಾಮಿ. ಇವರು ಮೂಲತಃ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಕೃಷ್ಣಾಪುರ ಗ್ರಾಮದವರು. ಇವರು ಬರೋಬ್ಬರಿ 1000ಕ್ಕೂ ಅಧಿಕ ಹಾಡುಗಳನ್ನು ಹಾಡಿದ್ದಾರೆ. ಇವರ ತಂದೆ ತಾಯಿ ಇಬ್ಬರು ಸಂಗೀತ ಕಲಾವಿದರೆ. 

ಇದನ್ನೂ ಓದಿ-Sandalwood Actor: ಈ ಫೋಟೋದಲ್ಲಿ ಇರುವವರು ಸ್ಯಾಂಡಲ್​​ವುಡ್ ನಟರು ಹಾಗಿದ್ದರೆ ಯಾರೆಂದು ಗುರುತಿಸಬಲ್ಲಿರಾ....

ಹೀಗೆ ಸಾವಿರಕ್ಕೂ ಅಧಿಕ ಹಾಡುಗಳಿಗೆ ಧ್ವನಿಯಾಗಿರುವ ಮಳವಳ್ಳಿಯವರ ಸರಣಿ ಹಾಡುಗಳಲ್ಲಿ 2019ರಲ್ಲಿ ಬಿಡುಗಡೆಯಾದ ಸರಣಿಯಲ್ಲಿ ಈ ಸುಂದರನ ಸನ್ಯಾಸಿ ಮಾಡಬಹುದೇ ಎಂಬ ಹಾಡು ಒಂದಾಗಿದೆ. ಇಲ್ಲಿಯವರೆಗೂ ಈ ಹಾಡು 5 ಲಕ್ಷ ವೀಕ್ಷಣೆಯನ್ನು ಪಡೆದುಕೊಂಡಿದ್ದು, ಇದೀಗ ಸೋಷಿಯಲ್‌ ಮಿಡಿಯಾಗಲಲ್ಲಿ ಟ್ರೆಂಡ್‌ ಸೃಷ್ಟಿಸುತ್ತಿದೆ. ಹೀಗೆ ಜನಪದ ಹಾಡುಗಳು ಜನಪ್ರಿಯವಾದರೆ ನಮ್ಮ ಜನಪದ ಕಲೆ ಇನ್ನು ಬೆಳೆಯುತ್ತದೆ. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News