Adipurush : ವಿವಾದಗಳ ಮೂಲಕವೇ ಬಿಡುಗಡೆಯಾದ ಪ್ರಭಾಸ್‌ ಅಭಿನಯದ ಆದಿಪುರುಷ್‌ ಸಿನಿಮಾ ನಿರೀಕ್ಷಿಸಿದಷ್ಟು ಗೆಲುವನ್ನು ಕಾಣಲಿಲ್ಲ. ಪ್ರೇಕ್ಷಕರಿಂದ ಹೆಚ್ಚು ನೆಗೆಟಿವ್‌ ಕಾಮೆಂಟ್‌ಗಳನ್ನು ಪಡೆದುಕೊಂಡು, ಕಲೆಕ್ಷನ್‌ ವಿಚಾರದಲ್ಲಿಯೂ ಸಿನಿಮಾ ಸೋಲುಂಡಿತ್ತು. 


COMMERCIAL BREAK
SCROLL TO CONTINUE READING

ಈ ಸಿನಿಮಾ ಮೂಲಕ ಗೆಲ್ಲುವ ನಿರೀಕ್ಷೆಯಲ್ಲಿದ್ದ ಪ್ರಭಾಸ್‌ಗೂ ಆದಿಪುರುಷ್‌ ಕೈ ಹಿಡಿಯಲಿಲ್ಲ. ಅವರ ಸೋಲಿನ ಸಿನಿಮಾಗಳ ಪಟ್ಟಿಯಲ್ಲಿ ಈ ಸಿನಿಮಾ ಸಹ ಸೇರ್ಪಡೆಯಾಯಿತು. ಸದ್ಯ ಈ ಸಿನಿಮಾ ಸದ್ದಿಲ್ಲದೇ ಓಟಿಟಿಗೆ ಲಗ್ಗೆ ಇಟ್ಟಿದೆ. 


ಸಾಮಾನ್ಯವಾಗಿ ಸಿನಿಮಾಗಳು ಓಟಿಟಿಯಲ್ಲಿ ಬಿಡುಗಡೆಯಾಗುವ ಮುನ್ನವೇ ಚಿತ್ರತಂಡ ಅಥವಾ ಓಟಿಟಿ ವೇದಿಕೆಯೇ ತನ್ನ ಸ್ಟ್ರೀಮಿಂಗ್‌ ಪಟ್ಟಿಯಲ್ಲಿ ಬಿಡುಗಡೆ ಪೂರ್ವ ಮಾಹಿತಿ ನೀಡುವುದು ವಾಡಿಕೆ. ಆದರೆ ಆದಿಪುರುಷ್‌ ಸಿನಿಮಾ ವಿಚಾರದಲ್ಲಿ ಹಾಗಾಗಿಲ್ಲ. ಯಾವುದೇ ಮಾಹಿತಿ ನೀಡದೇ, ಪ್ರಚಾರವನ್ನೂ ಮಾಡದೇ ಸಿನಿಮಾ ನೇರವಾಗಿ ಓಟಿಟಿ ಅಂಗಳಕ್ಕೆ ಕಾಲಿಟ್ಟಿದೆ. 


ಇದನ್ನೂ ಓದಿ-ಸೈಫ್ ಅಲಿಖಾನ್ ಗಾಗಿಯೇ ಈ ನಿರ್ಧಾರ ತೆಗೆದುಕೊಂಡಿದ್ದರಂತೆ ಮೊದಲ ಪತ್ನಿ ಅಮೃತಾ ಸಿಂಗ್


ಎಲ್ಲರಿಗೂ ಅಚ್ಚರಿಯನ್ನು ಮೂಡಿಸಿವ ವಿಚಾರವೇನೆಂದರೆ ಸಿನಿಮಾ ವೀಕ್ಷಿಸಲು ಅಮೆಜಾನ್‌ ಪ್ರೈಂ ಮೆಂಬರ್‌ಶಿಪ್ ಜತೆಗೆ ಹೆಚ್ಚುವರಿಯಾಗಿ 279 ರೂ ಪಾವತಿಸಿ ಸಿನಿಮಾ ನೋಡುಬೇಕಿತ್ತು. ಆದರೆ, ಬೆಳಗಾಗುವುದರಷ್ಟರಲ್ಲಿ  ಅಮೆಜಾನ್‌ ಉಚಿತವಾಗಿ ಪ್ರದರ್ಶನಕ್ಕೆ ಅವಕಾಶ ಕೊಟ್ಟಿದೆ. 


ಮೇಕಿಂಗ್‌ ಹಂತದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದ ಆದಿಪುರುಷ್‌ ಸಿನಿಮಾವನ್ನು ಅತ್ಯಾಧುನಿಕ ತಂತ್ರಜ್ಞಾನ ಬಳಸಿ ನಿರ್ದೇಶಕ ಓಂ ರಾವತ್‌ ನಿರ್ಮಾಣ ಮಾಡಿದ್ದಾರೆ. ಪ್ರಭಾಸ್‌ ರಾಮನಾಗಿ ಕಾಣಿಸಿಕೊಂಡರು. ಸೀತೆಯಾಗಿ ಕೃತಿ ಸನೋನ್‌, ರಾವಣನಾಗಿ ಸೈಫ್‌ ಅಲಿಖಾನ್‌ ನಟಿಸಿದ್ದರು. ರಾಮಾಯಣವನ್ನು ತಿರುಚಿ ಕಾರ್ಟೂನ್ ನಂತೆ ಸಿನಿಮಾ ಮಾಡಿ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಈ ಸಿನಿಮಾಗೆ ಟೀಕೆಗಳೇ ಹೆಚ್ಚು. 


ಇದನ್ನೂ ಓದಿ-ಜೈಲರ್ ನಲ್ಲಿ ಶಿವರಾಜ್ ಕುಮಾರ್ ಜಬರ್ದಸ್ತ್ ರೋಲ್ ! ರಜನಿಯನ್ನೇ ಮಂಕಾಗಿಸಿದರೆ ಹ್ಯಾಟ್ರಿಕ್ ಹಿರೋ ...


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k


Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.