ಜೈಲರ್ ನಲ್ಲಿ ಶಿವರಾಜ್ ಕುಮಾರ್ ಜಬರ್ದಸ್ತ್ ರೋಲ್ ! ರಜನಿಯನ್ನೇ ಮಂಕಾಗಿಸಿದರೆ ಹ್ಯಾಟ್ರಿಕ್ ಹಿರೋ ...

Shivaraj Kumar in Jailer :ಜೈಲರ್ ನಲ್ಲಿ ನರಸಿಂಹನ್ ಪಾತ್ರದ ಮೂಲಕ ಹ್ಯಾಟ್ರಿಕ್ ಹಿರೋ ಅಬ್ಬರಿಸಿದ್ದಾರೆ.  ಚಿತ್ರದಲ್ಲಿನ ಶಿವರಾಜ್ ಕುಮಾರ್ ಅಭಿನಯಕ್ಕೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. 

Written by - Ranjitha R K | Last Updated : Aug 11, 2023, 11:16 AM IST
  • ಜೈಲರ್ ನಲ್ಲಿ ಗೆದ್ದ ಹ್ಯಾಟ್ರಿಕ್ ಹಿರೋ
  • ಹೊಸ ಅಭಿಮಾನಿ ಬಳಗವೇ ಸೃಷ್ಟಿ
  • ಸಾಮಾಜಿಕ ಮಾಧ್ಯಮದಲ್ಲಿ ಶಿವಣ್ಣನದ್ದೇ ಮಾತು
ಜೈಲರ್ ನಲ್ಲಿ ಶಿವರಾಜ್ ಕುಮಾರ್ ಜಬರ್ದಸ್ತ್ ರೋಲ್ ! ರಜನಿಯನ್ನೇ ಮಂಕಾಗಿಸಿದರೆ ಹ್ಯಾಟ್ರಿಕ್ ಹಿರೋ ... title=

 Shivaraj Kumar in Jailer : ಕನ್ನಡದ ಸ್ಟಾರ್ ನಟ ಶಿವರಾಜ್ ಕುಮಾರ್ ಹೊಸ ಅಭಿಮಾನಿ ಬಳಗವನ್ನೇ ಸೃಷ್ಟಿಸಿಕೊಂಡಿದ್ದಾರೆ. ಸೂಪರ್‌ಸ್ಟಾರ್ ರಜನಿಕಾಂತ್ ಅವರ ಜೈಲರ್ ಚಿತ್ರವನ್ನು ವೀಕ್ಷಿಸಿದ ಪ್ರೇಕ್ಷಕರು  ಶಿವಣ್ಣನ ಪಾತ್ರವನ್ನು ಹಾಡಿ ಹೊಗಳುತ್ತಿದ್ದಾರೆ. ಚಿಕ್ಕ ಪಾತ್ರವಾದರೂ ಪರಿಣಾಮಕಾರಿಯಾಗಿ ಮೂಡಿ ಬಂದ ಹ್ಯಾಟ್ರಿಕ್ ಹಿರೋ ಸಾಮಾಜಿಕ ಮಾಧ್ಯಮದಲ್ಲಿ ರಾರಾಜಿಸುತ್ತಿದ್ದಾರೆ. ಶಿವರಾಜ್ ಕುಮಾರ್ ಅಭಿನಯದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. 

ನೆಟ್ಟಿಗರಂತೂ ಚಿತ್ರದಲ್ಲಿನ ಶಿವರಾಜ್ ಕುಮಾರ್ ಎಂಟ್ರಿ ರಜನಿಕಾಂತ್ ಅಭಿನಯವನ್ನೇ ಮಂಕಾಗಿಸಬಹುದು ಎಂದು ಕೊಂಡಿರಲಿಲ್ಲ. ಆದರೆ  ಪ್ರೀ ಕ್ಲೈಮ್ಯಾಕ್ಸ್‌ನಲ್ಲಿ ಶಿವಣ್ಣನ ಅಭಿನಯ ಸೂಪರ್‌ಸ್ಟಾರ್ ಅನ್ನು ಮೀರಿಸಿತ್ತು ಎಂದು ಬರೆದು ಹೊಗಳಿದ್ದಾರೆ. ಅಲ್ಲದೆ ನಾನು ಇನ್ನು ಶಿವಣ್ಣನ ಅಭಿಮಾನಿ ಎಂದು ಕೂಡಾ ಹೇಳಿಕೊಂಡಿದ್ದಾರೆ. 

 

ಇದನ್ನೂ ಓದಿ : ಉಪ್ಪಿ 'UI' ಚಿತ್ರದ ಐಟಂ ಸಾಂಗ್‌ನಲ್ಲಿ ನಿಧಿ ಅಥವಾ ಸನ್ನಿ? ನಿರ್ಮಾಪಕರು ಏನಂದ್ರು..?

ಈ ಚಿತ್ರದ ಮೂಲಕ ಶಿವರಾಜ್ ಕುಮಾರ್ ಕೇರಳ ಮತ್ತು ತಮಿಳು ನಾಡಿನಲ್ಲಿ ತನ್ನ ಅಭಿಮಾನಿ ಬಳಗವನ್ನು ಹೆಚ್ಚಿಸಿಕೊಂಡಿದ್ದಾರೆ ಎನ್ನುವುದಂತೂ ಪಕ್ಕಾ. ಕೇವಲ 10 ನಿಮಿಷಗಳ ದೃಶ್ಯವಾದರೂ ಶಿವರಾಜ್ ಕುಮಾರ್ ಜನಮನ ಗೆದ್ದಿದ್ದಾರೆ. ಇದು ನೆಕ್ಸ್ಟ್ ಲೆವೆಲ್ ಅಭಿನಯ ಎನ್ನುವುದು ಪ್ರೇಕ್ಷಕರ ಮಾತು. ಅಲ್ಲದೆ  ಶಿವರಾಜ್ ಕುಮಾರ್ ಅವರನ್ನು ಈ ರೀತಿ ಪ್ರಸ್ತುತ ಪಡಿಸಿರುವುದಕ್ಕೆ ನಿರ್ಮಾಪಕರಿಗೆ ಕೃತಜ್ಞತೆ ಹೇಳುತ್ತಿದ್ದಾರೆ. 

 

ಇದನ್ನೂ ಓದಿ : ಬಿಪಾಶಾ ಬಸು 3 ತಿಂಗಳ ಮಗಳಿಗೆ ಹಾರ್ಟ್‌ ಸರ್ಜರಿ, ದೇವಿಯ ಹೃದಯದಲ್ಲಿವೆ ರಂಧ್ರ!

ಇದೊಂದು ಸಣ್ಣ ಪಾತ್ರ, ಚಿತ್ರದಲ್ಲಿ ಸುಮಾರು 10-11 ನಿಮಿಷಗಳ ಕಾಲ ಕಾಣಿಸಿಕೊಳ್ಳುತ್ತೇನೆ. ಆದರೆ ಆ 11 ನಿಮಿಷಗಳಲ್ಲಿಯೇ ನಾನು ಅಕ್ಷರಶಃ ಸ್ವರ್ಗದಲ್ಲಿದ್ದಂತೆ ಭಾಸವಾಯಿತು ಎಂದು  ಚಿತ್ರದಲ್ಲಿನ ಪಾತ್ರದ ಬಗ್ಗೆ ಶಿವರಾಜಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

 

ಜೈಲರ್ ನಂತರ ಶಿವಣ್ಣ ಅಭಿನಯದ  ಘೋಸ್ಟ್, ದಸರಾ ಹಬ್ಬದ ಸಮಯದಲ್ಲಿ ಅಕ್ಟೋಬರ್‌ನಲ್ಲಿ ಬಿಡುಗಡೆಯಾಗಲಿದೆ. ನಿರ್ಮಾಪಕರು ಘೋಸ್ಟ್ ಅನ್ನು ತಮಿಳು, ತೆಲುಗು, ಹಿಂದಿ ಭಾಷೆಗಳಲ್ಲಿ ಹೊರತರುವ ಚಿಂತನೆಯಲ್ಲಿದ್ದಾರೆ.  ಇನ್ನು ಬೇಡಿಕೆಯನ್ನು ಆಧರಿಸಿ ಮಲಯಾಳಂನಲ್ಲಿಯೂ ಬಿಡುಗಡೆ ಮಾಡಲಾಗುವುದು ಎನ್ನಲಾಗಿದೆ. 

ಇನ್ನು ಧನುಷ್ ಜೊತೆಗಿನ ಕ್ಯಾಪ್ಟನ್ ಮಿಲ್ಲರ್ ಕೂಡಾ ಸದ್ಯದಲ್ಲಿಯೇ ತೆರೆ ಕಾಣಲಿದೆ. ಇದರಲ್ಲಿ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್  ಸಹೋದರನಾಗಿ ಕಾಣಿಸಿಕೊಳ್ಳಲಿದ್ದಾರೆ. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

 Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News