ಸ್ಯಾಂಡಲ್‌ವುಡ್‌ ಶಾನೆ ಟಾಪ್‌ ಆಗಿರುವ ಬೆಡಗಿ ಅದಿತಿ ಪ್ರಭುದೇವ (Aditi Prabhudeva) ಸಖತ್ ಟ್ರೆಂಡ್ ಅಲ್ಲಿರುವ ನಟಿ. ಹುಡುಗರ ಹಾರ್ಟ್‌ ಬ್ರೇಕ್ ಮಾಡುವ ಮನಮೋಹಕ ಬೆಡಗಿ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: 'ಸರಿಗಮಪ ಚಾಂಪಿಯನ್ಸ್' ಯಾರು..? 'ಝೀ ಕನ್ನಡ' ವಾಹಿನಿಯ ಹೆಮ್ಮೆ..!


ಬಾಗ್ಲು ತೆಗೆ ಮೇರಿ ಜಾನ್‌ ಎಂದು ಸೋಷಿಯಲ್ ಮೀಡಿಯಾದಲ್ಲಿ (Social Media) ಹವಾ ಕ್ರಿಯೇಟ್ ಮಾಡುದ ಈ ಚೆಲುವೆ, ಮೊದಲ ಬಾರಿ ಸ್ಟ್ಯಾಂಡಪ್ ಕಾಮಿಡಿ ಶೋ ನಲ್ಲಿ ಭಾಗಿಯಾಗಿದ್ದರು. 


ಸ್ಟ್ಯಾಂಡಪ್ ಕಾಮಿಡಿಯನ್ (Standup comedian) ಆಗಿ ವೇದಿಕೆ ಏರಿದ ನಟಿ ಅದಿತಿ, ಸಭಿಕರನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸಿದ್ದಾರೆ. ಮುದ್ದು ಮುದ್ದಾಗಿ ಕಾಮಿಡಿ ಮಾಡುವ ತಾರೆಯ ಮಾತಿಗೆ ಪ್ರೇಕ್ಷಕರು ಮರುಳಾಗಿದ್ದಾರೆ. 


ಈ ಬಗ್ಗೆ ತಮ್ಮ ಯುಟೂಬ್ ಚಾನೆಲ್ ನಲ್ಲಿ ವಿಡಿಯೋ ಹಂಚಿಕೊಂಡಿರುವ ಅದಿತಿ (Aditi), "ನಾನು ಮೊದಲ ಬಾರಿ ಸ್ಟ್ಯಾಂಡಪ್ ಕಾಮಿಡಿ (standup comedy) ಮಾಡುವ ಪ್ರಯತ್ನ ಮಾಡಿದ್ದು, ಈ ವಿಡಿಯೋದಲ್ಲಿ ನಾನು ಮಾತನಾಡಿರುವ ಎಲ್ಲಾ  ಮಾತುಗಳು ಕೇವಲ ತಮಾಷೆಗಾಗಿ ಹಾಗೂ ಯಾರದೇ ಭಾವನೆಗೆ ಧಕ್ಕೆ ಮಾಡುವ ಉದ್ದೇಶ ಇಲ್ಲ" ಎಂದು ಬರೆದಿದ್ದಾರೆ.


ಇದನ್ನೂ ಓದಿ:Radhe Shyam:ಮೆಟ್ರೋ ಮೇಲೆ‌ ರಾಧೆಶ್ಯಾಮ್! ರಿಲೀಸ್ ಗೂ ಮುಂಚೆ ಭರ್ಜರಿ ಪ್ರಮೋಷನ್


"ಎಲ್ಲ ಮಾತುಗಳು ಕಾಲ್ಪನಿಕವಾಗಿದ್ದು ನಿಮ್ಮನ್ನು ನಗಿಸುವ ಪ್ರಯತ್ನವಷ್ಟೇ . ನನ್ನ ಈ ಹೊಸ ಪ್ರಯತ್ನಕ್ಕೆ ನಿಮ್ಮ  ಹಾರೈಕೆಗಳಿರಲಿ. ಯಾಕಂದ್ರೆ ನಮ್ಮೆಲ್ರಿಗೂ ಗೊತ್ತು ನಿಮ್ಮ ಪ್ರೀತಿಯೇ ನನ್ನ ಶಕ್ತಿ . ಕೊನೆಯದಾಗಿ ಹಾಸ್ಯವನ್ನು ಹಾಸ್ಯ ದೃಷ್ಟಿಯಿಂದ ಅಷ್ಟೇ ನೋಡಬೇಕೆಂದು ವಿನಂತಿ. ಆರೋಗ್ಯವಾಗಿರಿ, ಯಾವಾಗ್ಲೂ ನಗ್ತಾ ಇರಿ . ಎಲ್ರಿಗೂ ಒಳ್ಳೆದಾಗ್ಲಿ. ನಿಮ್ಮ, ಅದಿತಿ ಪ್ರಭುದೇವ" ಎಂದು ಹೇಳಿದ್ದಾರೆ.


ಅದಿತಿ ಸ್ಟ್ಯಾಂಡಪ್ ಕಾಮಿಡಿ ಶೋ ಇಲ್ಲಿದೆ ನೋಡಿ: 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.