ಬೆಂಗಳೂರು: 'ಝೀ ಕನ್ನಡ' ವಾಹಿನಿಯ ಪ್ರಸಿದ್ಧ ರಿಯಾಲಿಟಿ ಶೋ 'ಸರಿಗಮಪ ಚಾಂಪಿಯನ್ಸ್' ಮುಕ್ತಾಯವಾಗಿದ್ದು, ಫೈನಲ್ ಎಪಿಸೋಡ್ ಸಿಕ್ಕಾಪಟ್ಟೆ ಕ್ಯೂರಿಯಾಸಿಟಿ ಕ್ರಿಯೇಟ್ ಮಾಡಿದೆ. ಅಂದಹಾಗೆ 3-4 ತಿಂಗಳಿಂದ ಈ ಶೋ ಸಂಗೀತ ಪ್ರಿಯರನ್ನ ರಂಜಿಸುತ್ತಾ ಬಂದಿತ್ತು.ಕಾರ್ಯಕ್ರಮ ಕನ್ನಡದ ಪ್ರಸಿದ್ಧ ́́́́'ಝೀ ಕನ್ನಡ' ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ.
ಪ್ರತಿವರ್ಷ ಕೂಡ 'ಝೀ ಕನ್ನಡ' (Zee Kannada) ವಾಹಿನಿಯು 'ಸರಿಗಮಪ ಚಾಂಪಿಯನ್ಸ್' ಕಾರ್ಯಕ್ರಮ ನಡೆಸುತ್ತಾ ಬಂದಿದೆ. ಈ ಸೀಸನ್ ನಲ್ಲಿ ಒಟ್ಟು 6 ತಂಡಗಳು ಭಾಗವಹಿಸಿದ್ದವು. ಹಾಗೇ ಕಿರುತೆರೆ ವೀಕ್ಷಕರಿಗೆ ಈ ವೀಕೆಂಡ್‌ನಲ್ಲಿ ಸಂಗೀತದ ಜೊತೆ ಭರಪೂರ ಮನರಂಜನೆ ಕೂಡ ಸಿಕ್ಕಿತ್ತು.
ಇದನ್ನೂ ಓದಿ: 'ಉತ್ತರ ಪ್ರದೇಶದ ಜನರ ಅಭಿವೃದ್ಧಿಯು ಭಾರತದ ಅಭಿವೃದ್ಧಿಗೆ ವೇಗವನ್ನು ನೀಡುತ್ತದೆ -ಪ್ರಧಾನಿ ಮೋದಿ.
ಕೋಟಿ ಕೋಟಿ ಕನ್ನಡಿಗರ ಪಾಲಿಗೆ ಫೇವರಿಟ್ ಶೋ ಆಗಿರುವ 'ಸರಿಗಮಪ ಚಾಂಪಿಯನ್ಸ್' ಪ್ರತಿಬಾರಿ ಕೂಡ ಹೊಸತನ್ನೇ ಪ್ರಯೋಗ ಮಾಡುತ್ತಿದೆ.ಈ ಮೂಲಕ ಕನ್ನಡಿಗರ ಮನ ಗೆದ್ದಿದೆ 'ಸರಿಗಮಪ ಚಾಂಪಿಯನ್ಸ್' ರಿಯಾಲಿಟಿ ಶೋ.'ಝೀ ಕನ್ನಡ' ವಾಹಿನಿಯಲ್ಲಿ ಪ್ರಸಾರವಾಗುವ ಈ ಕಾರ್ಯಕ್ರಮ ಎಂದರೆ ಕೋಟ್ಯಂತರ ಅಭಿಮಾನಿಗಳಿಗೆ ಅಚ್ಚುಮೆಚ್ಚು.
ಗೆದ್ದಿದ್ದು ಯಾರು..?
ಅಂದಹಾಗೆ 'ಸರಿಗಮಪ ಚಾಂಪಿಯನ್ಸ್' ಗ್ರ್ಯಾಂಡ್ ಫಿನಾಲೆಯಲ್ಲಿ ಗಾಯಕಿ ನಂದಿತಾ ಟೀಂ ಗೆಲುವಿನ ನಗೆ ಬೀರಿದೆ. ನಂದಿತಾ ಟೀಮ್‌ನಲ್ಲಿ ರಜತ್, ಪೃಥ್ವಿ, ಸುಪ್ರಿಯಾ ಜೋಶಿ, ಸುಹಾನಾ, ಕೀರ್ತನ್ ಹೊಳ್ಳ, ಚೆನ್ನಪ್ಪ ಇದ್ದರು. ಹಿಂದಿನಿಂದಲೂ ಉತ್ತಮ ಪ್ರದರ್ಶನ ನೀಡುತ್ತಲೇ ಬಂದಿದ್ದ ತಂಡ ಫೈನಲ್ ಎಪಿಸೋಡ್‌ನಲ್ಲೂ ಭರ್ಜರಿ ಪ್ರದರ್ಶನ ನೀಡಿ ಗೆಲುವು ಕಂಡಿತು.
ಇದನ್ನೂ ಓದಿ: ಮಾರ್ಚ್‌ನಲ್ಲಿ ರಿಲೀಸ್ ಆಗಲಿರುವ ಬಿಗ್ ಬಜೆಟ್ ಸಿನಿಮಾಗಳಿಗೆ ಮತ್ತೊಂದು ಸಂಕಷ್ಟ!
ಇಬ್ಬರು ರನ್ನರ್ ಅಪ್
ನಂದಿತಾ ಟೀಂ ಗೆಲುವಿನ ನಗೆ ಬೀರಿದರೆ, ಇನ್ನುಳಿದ 2 ತಂಡಗಳು ರನ್ನರ್ ಅಪ್ ಅವಾರ್ಡ್ ಪಡೆದವು. ಮೊದಲನೇ ರನ್ನರ್ ಅಪ್ ಸ್ಥಾನಕ್ಕೆ ಅನುರಾಧಾ ಭಟ್ ತಂಡ ಆಯ್ಕೆಯಾಗಿತ್ತು. ಅನುರಾಧಾ ಭಟ್ ಅವರ ತಂಡದಲ್ಲಿ ಅಂಕಿತಾ ಕುಂಡು, ಶ್ರೀ ಹರ್ಷ, ವರ್ಣ, ದರ್ಶನ್, ಅಭಿಶ್ಯಂತ್, ಮೆಹಬೂಬ್ ಇದ್ದರು. 2ನೇ ರನ್ನರ್ ಅಪ್ ಪ್ರಶಸ್ತಿಯನ್ನು ನಾಗರಾಜ್ ತಂಡ ಪಡೆಯಿತು.ಈ ಟೀಂನಲ್ಲಿ ಸುನೀಲ್, ಸಾಕ್ಷಿ, ಸುಪ್ರಿತ್, ಅನ್ವಿತಾ, ಅಖಿಲಾ ಹಾಗೂ ಗಗನಾ ಅವರು ಭಾಗವಹಿಸಿದ್ದರು.
ಒಟ್ಟಾರೆ 'ಝೀ ಕನ್ನಡ' ವಾಹಿನಿಯ ಪ್ರಸಿದ್ಧ ರಿಯಾಲಿಟಿ ಶೋ 'ಸರಿಗಮಪ ಚಾಂಪಿಯನ್ಸ್'ನ ಈ ಸೀಸನ್ ಅದ್ಧೂರಿಯಾಗಿ ಸಮಾಪ್ತಿಯಾಗಿದೆ.ಗ್ರ್ಯಾಂಡ್ ಫಿನಾಲೆಯಲ್ಲಿ 6 ತಂಡಗಳಿಂದ ಸುಮಾರು 36 ಸ್ಪರ್ಧಿಗಳು ಭಾಗವಹಿಸಿದ್ದರು.ನಾದಬ್ರಹ್ಮ ಹಂಸಲೇಖ, ಗಾಯಕ ವಿಜಯ್ ಪ್ರಕಾಶ್, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ತೀರ್ಪುಗಾರರಾಗಿ ಭಾಗವಹಿಸಿದ್ದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.