Sara Ali Khan On Political Career: ಬಾಲಿವುಡ್‌ನನಲ್ಲಿ (Bollywood News In Kannada) ನೇರ, ದಿಟ್ಟ ಮತ್ತು ಬಹಿರಂಗ ಹೇಳಿಕೆಗಳನ್ನು ನೀಡುವ ಸೆಳೆಬ್ರಿಟಿಗಳಲ್ಲಿ ಒರ್ವಳಾದ ಕಂಗನಾ ರಣಾವತ್ (Kangana Ranaut) ಅವರು ಚಲನಚಿತ್ರರಂಗದ ಜೊತೆಗೆ ರಾಜಕೀಯ ಜಗತ್ತಿಗೆ ಪ್ರವೇಶಿಸಿದ್ದಾಳೆ. ಅಷ್ಟೇ ಅಲ್ಲ ನಟಿ ಹಿಮಾಚಲ ಪ್ರದೇಶದ ತನ್ನ ಜನ್ಮಸ್ಥಳವಾದ ಮಂಡಿಯಿಂದ ಬಿಜೆಪಿ ಟಿಕೆಟ್ ಮೇಲೆ ಚುನಾವಣೆಗೆ (Lok Sabha Election 2024) ಸ್ಪರ್ಧಿಸಲಿದ್ದಾರೆ. ಇದಲ್ಲದೆ, ರಾಮಾನಂದ್ ಸಾಗರ್ ಅವರ 'ರಾಮಾಯಣ' ಸೀರಿಯಲ್ ನಲ್ಲಿ ಶ್ರೀ ರಾಮನ ಪಾತ್ರವನ್ನು ನಿರ್ವಹಿಸಿದ ನಟ ಅರುಣ್ ಗೋವಿಲ್ ಕೂಡ ಮೀರತ್ ನಿಂದ ಬಿಜೆಪಿ ಪರವಾಗಿ ಚುನಾವಣೆಗೆ ಸ್ಪರ್ಧಿಸಲಿದ್ದಾರೆ (Entertainment News In Kannada).


COMMERCIAL BREAK
SCROLL TO CONTINUE READING

ಎಂತನ್ಮಧ್ಯೆ ಬಾಲಿವುಡ್ ನಲ್ಲಿ ಇತ್ತೀಚೆಗೆ ಬಿಡುಗಡೆಯಾಗಿರುವ 'ಮರ್ಡರ್ ಮುಬಾರಕ್' ಮತ್ತು 'ಏ ವತನ್ ಮೇರೆ ವತನ್' ಚಿತ್ರಗಳ ಯಶಸ್ಸಿನ ಬಳಿಕ ನವಾಬ್ ಪುತ್ರಿ ಸಾರಾ ಅಲಿ ಖಾನ್ ಕೂಡ ತಮ್ಮ ರಾಜಕೀಯ ಜೀವನದ ಬಗ್ಗೆ ಮಾತನಾಡುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದ್ದಾಳೆ. ತಾನು ಕೂಡ ರಾಜಕೀಯಕ್ಕೆ ಬರಲು ಮುಂದಾಗಿದ್ದೇನೆ ಎಂದು ಸಾರಾ ಬಹಿರಂಗಪಡಿಸಿದ್ದಾಳೆ. ವಾಸ್ತವವಾಗಿ, ಸ್ಟ್ಯಾಂಡ್-ಅಪ್ ಕಾಮಿಡಿಯನ್ ಅನುಭವ್ ಸಿಂಗ್ ಬಸ್ಸಿ ಅವರೊಂದಿಗಿನ ಸಂಭಾಷಣೆಯ ವೇಳೆ, ಸಾರಾ ರಾಜಕೀಯಕ್ಕೆ ಸೇರುವ ಸುಳಿವು ನೀಡಿದ್ದಾಳೆ.


ಇದನ್ನೂ ಓದಿ-Is Allu Arjun Arrested? Pushpa 2 ಚಿತ್ರೀಕರಣದ ಮಧ್ಯೆಯೇ ಅಲ್ಲು ಅರ್ಜುನ್ ಅರೆಸ್ಟ್! ನಿಜಾನಾ?


ರಾಜಕೀಯಕ್ಕೆ ಬರಲು ಮುಂದಾದ ಸಾರಾ! (sara ali khan expressed her desire to enter politics)
ಬಸ್ಸಿಯೊಂದಿಗಿನ ಸಂಭಾಷಣೆಯ ಸಮಯದಲ್ಲಿ, ಸಾರಾ ಅಲಿ ಖಾನ್ ಅವರು ರಾಜಕೀಯದ ಭಾಗವಾಗಲು ತನ್ನ ಯೋಜನೆಯನ್ನು ಬಹಿರಂಗಪಡಿಸಿದ್ದಾಳೆ , ಅದನ್ನು ಕೇಳಿ ಎಲ್ಲರೂ ಆಶ್ಚರ್ಯಚಕಿತರಾಗಿದ್ದಾರೆ. ‘ನೀವು ರಾಜಕೀಯಕ್ಕೆ ಬರಬೇಕೋ ಬೇಡವೋ’ ಎಂದು ಸಾರಾ ಅವರನ್ನು ಪ್ರಶ್ನಿಸಿದಾಗ. ಈ ಪ್ರಶ್ನೆಗೆ ಉತ್ತರಿಸಿದ ಸಾರಾ ‘ಸಮ್ಮತಿ’ ವ್ಯಕ್ತಪಡಿಸಿದ್ದಾಳೆ. ಅಷ್ಟೇ ಅಲ್ಲ, ಹಿಂದೂಸ್ತಾನ್ ಟೈಮ್ಸ್ ಜೊತೆಗಿನ ಸಂವಾದದಲ್ಲಿ ಸಾರಾ, 'ನಾನು ಇತಿಹಾಸ ಮತ್ತು ರಾಜ್ಯಶಾಸ್ತ್ರದಲ್ಲಿ ಪದವಿ ಪಡೆದಿದ್ದೇನೆ. ಅದಕ್ಕಾಗಿಯೇ ನಾನು ಜೀವನದಲ್ಲಿ ನಂತರ ರಾಜಕೀಯಕ್ಕೆ ಪ್ರವೇಶಿಸಲು ಬಯಸುತ್ತೇನೆ, ಆದರೆ ಇದು ಬ್ಯಾಕಪ್ ಯೋಜನೆ ಅಲ್ಲ' ಎಂದಿದ್ದಾಳೆ.


ಇದನ್ನೂ ಓದಿ-ಹುಕ್ಕಾ ಪಾರ್ಲರ್ ಮೇಲೆ ದಾಳಿ : ಬಿಗ್‌ಬಾಸ್‌ ವಿನ್ನರ್ ಸೇರಿ 14 ಮಂದಿ ಬಂಧನ


ಸಾರಾ ಅಲಿ ಖಾನ್ ವೃತ್ತಿ ಜೀವನ ಹೇಗಿದೆ?
ಸಾರಾ ಅಲಿ ಖಾನ್ ಅವರು ತಮ್ಮ ಹೇಳಿಕೆಯನ್ನು ನೀಡುತ್ತಾ, 'ನಾನು ಹೋಗುತ್ತಿಲ್ಲ ಮತ್ತು ಜನರು ನನಗೆ ಬಾಲಿವುಡ್ ನಲಿ ಉಳಿಯಲು ಅವಕಾಶ ನೀಡಿದ್ದಾರೆ, ನಾನು ಸಾಧ್ಯವಾದಷ್ಟು ಕಾಲ ಇಲ್ಲೇ ಇರುತ್ತೇನೆ' ಎಂದು ಹೇಳಿದ್ದಾಳೆ. ಸಾರಾಳ ವೃತ್ತಿ ಜೀವನದ ಕುರಿತು ಹೇಳುವುದಾದರೆ, ಇತ್ತೀಚೆಗೆ ನಟಿ 'ಮರ್ಡರ್ ಮುಬಾರಕ್' ಮತ್ತು 'ಏ ವತನ್ ಮೇರೆ ವತನ್' ನಲ್ಲಿ ಕಾಣಿಸಿಕೊಂಡಿದ್ದಾಳೆ. ಹೋಮಿ ಅದಜಾನಿಯಾ ನಿರ್ದೇಶನದ ಮೊದಲ ಚಿತ್ರ ಮರ್ಡರ್ ಮಿಸ್ಟರಿ ಆಗಿದ್ದರೆ, ಎರಡನೇ ಚಿತ್ರ ಭಾರತದ ಸ್ವಾತಂತ್ರ್ಯ ಹೋರಾಟವನ್ನು ಆಧರಿಸಿದೆ. ಸಾರಾ ಅಲಿ ಖಾನ್ ಅವರ ಈ ಎರಡೂ ಚಿತ್ರಗಳಿಗೆ ಪ್ರೇಕ್ಷಕರಿಂದ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ