ಹುಕ್ಕಾ ಪಾರ್ಲರ್ ಮೇಲೆ ದಾಳಿ : ಬಿಗ್‌ಬಾಸ್‌ ವಿನ್ನರ್ ಸೇರಿ 14 ಮಂದಿ ಬಂಧನ

Bigg Boss 17 winner Munawar Faruqui : ಹುಕ್ಕಾ ಪಾರ್ಲರ್‌ ಮೇಲೆ ನಡೆದ ದಾಳಿಯಲ್ಲಿ ಖ್ಯಾತ ನಟ ಮತ್ತು  ಬಿಗ್ ಬಾಸ್ 17 ವಿನ್ನರ್‌ ಬಂಧನವಾಗಿದೆ. ನಿನ್ನೆ ಮಂಗಳವಾರ ರಾತ್ರಿ ಈ ಘಟನೆ ನಡೆದಿದೆ.   

Written by - Krishna N K | Last Updated : Mar 27, 2024, 03:07 PM IST
    • ಹುಕ್ಕಾ ಪಾರ್ಲರ್‌ ಮೇಲೆ ನಡೆದ ದಾಳಿ
    • ಬಿಗ್‌ಬಾಸ್‌ ವಿನ್ನರ್‌ ಸೇರಿ 14 ಜನರ ಬಂಧನ
    • ಮಂಗಳವಾರ ತಡರಾತ್ರಿ ನಡೆದ ಘಟನೆ
ಹುಕ್ಕಾ ಪಾರ್ಲರ್ ಮೇಲೆ ದಾಳಿ : ಬಿಗ್‌ಬಾಸ್‌ ವಿನ್ನರ್ ಸೇರಿ 14 ಮಂದಿ ಬಂಧನ title=

Munawar Faruqui detained in bar raid : ಹುಕ್ಕಾ ಪಾರ್ಲರ್‌ ಮೇಲೆ ನಡೆದ ದಾಳಿಯಲ್ಲಿ ಬಿಗ್‌ ಬಾಸ್‌ ವಿನ್ನರ್‌ ಸೇರಿದಂತೆ 14 ಜನರನ್ನು ಬಂಧಿಸಲಾಗಿದೆ. ಈ ಘಟನೆ ಮಂಗಳವಾರ ತಡರಾತ್ರಿ ಸಂಭವಿಸಿದೆ. 

ಹೌದು.. ಬಾಲಿವುಡ್‌ ಹಾಸ್ಯನಟ ಹಾಗೂ ಬಿಗ್ ಬಾಸ್ 17  ಮತ್ತು ಲಾಕಪ್‌ ರಿಯಾಲಿಟಿ ಶೋ ವಿಜೇತ ಮುನಾವರ್ ಫಾರೂಕಿ (Munawar Faruqui arrested) ಅವರನ್ನು ಮುಂಬೈ ಪೊಲೀಸರು ಮಂಗಳವಾರ ತಡರಾತ್ರಿ ವಶಕ್ಕೆ ತೆಗೆದುಕೊಂಡಿದ್ದಾರೆ. ನಿನ್ನೆ ರಾತ್ರಿ ಮುಂಬೈನ ಕೋಟೆ ಪ್ರದೇಶದಲ್ಲಿ ಇರುವ ಹುಕ್ಕಾ ಪಾರ್ಲರ್ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಈ ವೇಳೆ ಮುನಾವರ್ ಫಾರೂಕಿ ಸೇರಿದಂತೆ 14 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ:ನೀಲಿ ಮೈಸೂರು ಸಿಲ್ಕ್‌ ಸೀರೆಯಲ್ಲಿ ಕಂಗೊಳಿಸಿದ ಸಪ್ತ ಸಾಗರದಾಚೆಯ ಚೆಲುವೆ!

ಫಾರೂಕಿ ಅವರನ್ನು ಪೊಲೀಸರು ವಿಚಾರಣೆ ನಡೆಸಿ ನೋಟಿಸ್ ನೀಡಿ ಬಿಡುಗಡೆ ಮಾಡಲಾಗಿದೆ. ಸದ್ಯ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಮಂಗಳವಾರ ರಾತ್ರಿ ಸಬಲನ್ ಹುಕ್ಕಾ ಬಾರ್‌ ಮೇಲೆ ದಾಳಿ ನಡೆದಿತ್ತು. ಈ ಬಾರ್‌ನಲ್ಲಿ ಹುಕ್ಕಾ ಹೆಸರಿನಲ್ಲಿ ತಂಬಾಕು ಸೇವನೆ ಮಾಡುತ್ತಿರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ದೊರೆಕಿತ್ತು.

ದಾಳಿ ವೇಳೆ ಪೊಲೀಸರು ತಂಬಾಕು ಸೇರಿದಂತೆ ಇನ್ನಿತರ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ. ಇತ್ತೀಚಿಗೆ ಮುನಾವರ್‌ ಹಿಂದಿಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 17 ರ ವಿಜೇತರಾಗಿ ಹೊರಹೊಮ್ಮಿ ಟ್ರೋಫಿ ಗೆದ್ದಿದ್ದರು. ಮುನಾವರ್ ಫಾರುಕಿ ಖ್ಯಾತ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಆಗಿ ಗುರುತಿಸಿಕೊಂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News