Rakul Preet Singh Jackky Bhagnani Celebrate One Month Anniversary: ಖ್ಯಾತ ಬಹುಭಾಷಾ ನಟಿ ರಾಕುಲ್ ಪ್ರೀತ್ ಸಿಂಗ್ ಮತ್ತು ಜಾಕಿ ಭಗ್ನಾನಿ ಅವರಿಗೆ ಇಂದಿನ ದಿನ ತುಂಬಾ ವಿಶೇಷವಾಗಿದೆ. ಹೌದು, ಈ ದಿನವನ್ನು ಅವರು ವಿಶೇಷ ರೀತಿಯಲ್ಲಿ ಆಚರಿಸಿಕೊಂಡಿದ್ದಾರೆ.  ಅದರ ಸುಂದರವಾದ ಫೋಟೋಗಳನ್ನು ಕೂಡ ರಾಕುಲ್ ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ, ಅದಕ್ಕೆ ಅಭಿಮಾನಿಗಳಿಂದ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. ವಾಸ್ತವದಲ್ಲಿ ಅವರ ಮದುವೆಗೆ ಒಂದು ವರ್ಷ ಕಳೆದಿದೆ. 


COMMERCIAL BREAK
SCROLL TO CONTINUE READING

ಇಂತಹ ಪರಿಸ್ಥಿತಿಯಲ್ಲಿ ಇಬ್ಬರೂ ತಮ್ಮ ಒನ್ ಮಂತ್ ಅನೀವರ್ಸರಿ ಆಚರಿಸಿಕೊಳ್ಳುತ್ತಿದ್ದಾರೆ. ಕಳೆದ ತಿಂಗಳು ಫೆಬ್ರವರಿ 21, 2024 ರಂದು ಗೋವಾದಲ್ಲಿ ನಡೆದ ಸುಂದರ ಸಮಾರಂಭದಲ್ಲಿ ಉಭಯರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ವಿಶೇಷ ಕುಟುಂಬ ಸದಸ್ಯರಲ್ಲದೆ, ಕೆಲ ಆಪ್ತರು ಅವರ ಮದುವೆಗೆ ಹಾಜರಾಗಿದ್ದರು. ಇತ್ತೀಚೆಗೆ, ರಾಕುಲ್ ತನ್ನ ಪತಿ ಜಾಕಿ ಜೊತೆಗಿನ ಸುಂದರವಾದ ಫೋಟೋವನ್ನು ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ, ಅದು ಎಲ್ಲರ ಸಾಕಷ್ಟು ಮೆಚ್ಚುಗೆಯನ್ನು ಗಳಿಸಿತ್ತು.


ಇದನ್ನೂ ಓದಿ-Sangeetha Bhat: ಬೋಲ್ಡ್‌ ಅವತಾರದಲ್ಲಿ ಪಡ್ಡೆ ಹುಡುಗರ ನಿದ್ರೆಗೆಡಿಸಿದ ಸಂಗೀತಾ!!


ರಾಕುಲ್-ಜಾಕಿ ಮದುವೆಗೆ ಒಂದು ತಿಂಗಳು ಪೂರ್ಣಗೊಂಡಿದೆ
ಹಂಚಿಕೊಂಡ ಚಿತ್ರದಲ್ಲಿ, ಇಬ್ಬರೂ ತಮ್ಮ ಮದುವೆಯ ಒಂದು ತಿಂಗಳ ಪೂರ್ಣಗೊಂಡ ಸಂಭ್ರಮಾಚರಣೆಯಲ್ಲಿ ತೊಡಗಿರುವುದನ್ನು ನೀವು ನೋಡಬಹುದು. ಈ ಫೋಟೋಗಳನ್ನು ಹಂಚಿಕೊಂಡ ರಾಕುಲ್, 'ಇನ್ನೊಂದು ತಿಂಗಳು ಕಳೆದಿದೆ. ಸಮಯ ಗತಿಸಿದೆ ಮತ್ತು ಜೀವನವೂ ಕಳೆದಿದೆ! ಅದು ಚಂದ್ರ್ರನೆ ಆಗಿರಲಿ ಅಥವಾ ಚಂದ್ರನ ಆಚೆಯೇ ಆಗಲಿ, ನಾನು ನಿನ್ನನ್ನು ಹೀಗೆಯೇ ಪ್ರೀತಿಸುತ್ತಲೇ ಇರುತ್ತೇನೆ. ಜೀವನದುದ್ದಕ್ಕೂ ನಿಮ್ಮ ಈ ನೃತ್ಯ ಮುಂದುವರೆಯಲಿ. #onemonthanniversary@jackybhagnani'. ಎಂದು ಬರೆದುಕೊಂಡಿದ್ದಾಳೆ.  ಈ ಫೋಟೋಗೆ ಸಾಕಷ್ಟು ಲೈಕ್ ಗಳು ಕೂಡ ಬರುತ್ತಿವೆ. ಇದಲ್ಲದೆ  ಅಭಿಮಾನಿಗಳು ಕಾಮೆಂಟ್ ಮೂಲಕ ಇಬ್ಬರನ್ನೂ ಕೊಂಡಾಡುತ್ತಿದ್ದಾರೆ.


ಇದನ್ನೂ ಓದಿ-Yuva Trailer: ʻಯುವʼ ಟ್ರೇಲರ್‌ ಔಟ್!‌ ರಗಡ್‌ ಅವತಾರದಲ್ಲಿ ಯುವ ರಾಜ್​ಕುಮಾರ್!

ಜಾಕಿ ಕೂಡ ವಿಡಿಯೋ ಹಂಚಿಕೊಂಡು ಸಂಭ್ರಮಿಸಿದ್ದಾರೆ
ರಾಕುಲ ಅಷ್ಟೇ ಅಲ್ಲ ಜಾಕಿ ಕೂಡ ತಮ್ಮ ವಿವಾಹದ ಒಂದು ವಿಡಿಯೋ ತುಣುಕನ್ನು ಹಂಚಿಕೊಂಡು ಹಿಂದಿ ಭಾಷೆಯ ಕವಿಯಂತೆ ಮುದ್ದಾದ ಕ್ಯಾಪ್ಶನ ಬರೆದಿದ್ದಾರೆ.