Hanu Man OTT Record: ಒಟಿಟಿಯಲ್ಲೂ ಹನುಮಾನ್ ಸಿನಿಮಾ ವಿಶ್ವದಾಖಲೆ..!

Hanu Man OTT World Record: ಈ ವರ್ಷದ ಬಿಗ್ ಸಿನಿಮಾಗಳಲ್ಲಿ ಹನುಮಾನ್ ಸಿನಿಮಾ ಸೆನ್ಸೇಷನಲ್ ಸಕ್ಸಸ್ ಕಂಡಿದೆ. ಈ ವರ್ಷ ಸಂಕ್ರಾಂತಿ ಉಡುಗೊರೆಯಾಗಿ ಬಿಡುಗಡೆಯಾದ ಈ ಸಿನಿಮಾ ಬಾಕ್ಸಾಫೀಸ್‌ ಕೊಳ್ಳೆ ಹೊಡೆದಿದೆ. 

Written by - Chetana Devarmani | Last Updated : Mar 21, 2024, 04:03 PM IST
    • ಸೆನ್ಸೇಷನಲ್ ಸಕ್ಸಸ್ ಕಂಡ ಹನುಮಾನ್ ಸಿನಿಮಾ
    • ಹನುಮಾನ್ ಸಿನಿಮಾ ಒಟಿಟಿನಲ್ಲೂ ಹೊಸ ದಾಖಲೆ
    • OTT ನಲ್ಲಿ ಸ್ಟ್ರೀಮ್ ಆಗುತ್ತಿರುವ ಹನುಮಾನ್ ಸಿನಿಮಾ
Hanu Man OTT Record: ಒಟಿಟಿಯಲ್ಲೂ ಹನುಮಾನ್ ಸಿನಿಮಾ ವಿಶ್ವದಾಖಲೆ..! title=

Hanu Man OTT Streaming: ಹನುಮಾನ್‌ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ನಿರೀಕ್ಷೆಯಂತೆ ಬ್ಲಾಕ್ ಬಸ್ಟರ್ ಹಿಟ್‌ ಆಯಿತು. ಮೇಲಾಗಿ ಈ ಸಿನಿಮಾ ಬಿಡುಗಡೆಗೂ ಮುನ್ನವೇ ಹಲವು ದಾಖಲೆಗಳನ್ನು ತನ್ನ ಹೆಸರಿಗೆ ಬರೆದುಕೊಂಡಿತ್ತು. ಈ ಚಿತ್ರದ ಥಿಯೇಟ್ರಿಕಲ್ ರನ್ ಈಗ OTT ನಲ್ಲಿ ಸ್ಟ್ರೀಮ್ ಆಗುತ್ತಿದೆ. ಈ ಚಲನಚಿತ್ರವು ಈ ತಿಂಗಳ 17 ರಿಂದ ಜನಪ್ರಿಯ OTT ಪ್ಲಾಟ್‌ಫಾರ್ಮ್ ZEE5 ನಲ್ಲಿ ಸ್ಟ್ರೀಮ್ ಆಗುತ್ತಿದೆ. ಒಟಿಟಿ ಸ್ಟ್ರೀಮಿಂಗ್ ಆದ 11 ಗಂಟೆಗಳಲ್ಲಿ ವಿಶ್ವ ದಾಖಲೆಯನ್ನು ನಿರ್ಮಿಸಿದೆ. 

ಇದನ್ನೂ ಓದಿ: ಸೆಟ್ಟೇರಿತು ರಾಮ್ ಚರಣ್ - ಜಾಹ್ನವಿ ಕಪೂರ್‌ ಹೊಸ ಸಿನಿಮಾ.! 

ಹನುಮಾನ್‌ ಚಿತ್ರವು 11 ಗಂಟೆಗಳಲ್ಲಿ 102 ಮಿಲಿಯನ್ ವೀಕ್ಷಣೆಯ ನಿಮಿಷಗಳೊಂದಿಗೆ ದಾಖಲೆ ಬರೆದಿದೆ. ಈ ಮೂಲಕ ವಿಶ್ವ ದಾಖಲೆಯನ್ನು ಮಾಡಿದೆ. ಹನುಮಾನ್‌ ಚಲನಚಿತ್ರವು 2024 ರಲ್ಲಿ ZEE5 ನಲ್ಲಿ ನೂತನ ದಾಖಲೆ ಬರೆಯುವ ನಿರೀಕ್ಷೆಯಿದೆ. ZEE5 ವಿಶ್ವಾದ್ಯಂತ ಟಾಪ್ ಟ್ರೆಂಡಿಂಗ್‌ನೊಂದಿಗೆ ಗಗನಕ್ಕೇರುತ್ತಿದೆ. ಅದಕ್ಕೆ ಕಾರಣ 'ಹನುಮಾನ್‌' ಎನ್ನಲಾಗಿದೆ. 

ಪ್ಯಾನ್ ಇಂಡಿಯಾ ರೇಂಜ್‌ನಲ್ಲಿ ಬ್ಲಾಕ್‌ಬಸ್ಟರ್ ಆಗಿರುವ ಈ ಚಿತ್ರ ಜಿ 5 ಜೊತೆಗೆ ಜಿಯೋ ಸಿನಿಮಾದಲ್ಲಿಯೂ ಸ್ಟ್ರೀಮ್ ಆಗುತ್ತಿದೆ. ಪ್ರಶಾಂತ್ ವರ್ಮ ಕಳೆದ ಎರಡು ವರ್ಷಗಳಿಂದ ಈ ಸಿನಿಮಾಗಾಗಿ ಶ್ರಮಿಸಿದ್ದಾರೆ. ಬಿಡುಗಡೆಯ ವೇಳೆಗೆ ಸರಿಯಾದ ಚಿತ್ರಮಂದಿರಗಳು ಸಿಗಲಿಲ್ಲ. ಆದರೆ.. ಹಲವು ಕಷ್ಟ-ನಷ್ಟಗಳನ್ನು ಸಹಿಸಿಕೊಂಡು ಈ ಸಿನಿಮಾ ಸಂಕ್ರಾಂತಿಯಂದು ಬಾಕ್ಸ್ ಆಫೀಸ್ ನಲ್ಲಿ ಗೆದ್ದಿದೆ. ದೊಡ್ಡ ಹೀರೋಗಳಂತೆ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿದೆ. ಈ ಚಲನಚಿತ್ರವು ZEE5 ನಲ್ಲಿ 8 ಕ್ಕೂ ಹೆಚ್ಚು ಭಾಷೆಗಳಲ್ಲಿ ಸ್ಟ್ರೀಮ್ ಆಗುತ್ತಿದೆ.

ಇದನ್ನೂ ಓದಿ: ಭಾರತ ಬಿಡ್ತಾರಾ ಅಲ್ಲು ಅರ್ಜುನ್!? ಅಂತಾರಾಷ್ಟ್ರೀಯ ಡ್ರೈವಿಂಗ್ ಲೈಸೆನ್ಸ್ ಗೆ ಅರ್ಜಿ ಹಾಕಿದ್ದೇಕೆ? 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News