Aishwarya Arjun: ಮದುವೆಗೂ ಮುನ್ನ ಭಾವಿ ಸೊಸೆಗೆ ಕಂಡೀಷನ್ ಹಾಕಿದ ತಂಬಿ ರಾಮಯ್ಯ..!
Arjun Sarja Daughter: ಐಶ್ವರ್ಯಾ ಅರ್ಜುನ್ ಮತ್ತು ಉಮಾಪತಿ ವಿವಾಹವಾಗಲಿರುವ ಸಂದರ್ಭದಲ್ಲಿ ತಂಬಿ ರಾಮಯ್ಯ ಅವರು ತಮ್ಮ ಭಾವಿ ಸೊಸೆಗೆ ಷರತ್ತನ್ನು ಹಾಕಿದ್ದಾರೆ ಎಂದು ವರದಿಯಾಗಿದೆ.
Tambi Ramaiah: ಅರ್ಜುನ್ ತಮಿಳು ಚಿತ್ರರಂಗದಲ್ಲಿ ಬಹುಮುಖ ನಟ, ನಿರ್ದೇಶಕ ಮತ್ತು ನಿರ್ಮಾಪಕ. ಅವರ ಮಗಳು ಐಶ್ವರ್ಯ ಕೂಡ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ವಿಶಾಲ್ ಅಭಿನಯದ ಪಟ್ಟತ್ತು ಯಾನೈ ಚಿತ್ರದ ಮೂಲಕ ತಮಿಳಿನಲ್ಲಿ ನಾಯಕಿಯಾಗಿ ಪಾದಾರ್ಪಣೆ ಮಾಡಿದ್ದ ಐಶ್ವರ್ಯಾ ಆ ನಂತರ ಚಿತ್ರರಂಗ ತೊರೆದಿದ್ದರು. ಇವರು ಶೀಘ್ರದಲ್ಲೇ ನಟ ತಂಬಿ ರಾಮಯ್ಯ ಅವರ ಪುತ್ರ ಉಮಾಪತಿ ಅವರನ್ನು ವಿವಾಹವಾಗಲಿದ್ದಾರೆ.
ನಟ ಅರ್ಜುನ್ ಕೆಲವು ವರ್ಷಗಳ ಹಿಂದೆ ಸರ್ವೈವರ್ ಎಂಬ ರಿಯಾಲಿಟಿ ಗೇಮ್ ಶೋ ನಡೆಸಿಕೊಟ್ಟಿದ್ದರು. ಕಾರ್ಯಕ್ರಮದಲ್ಲಿ ಉಮಾಪತಿ ಕೂಡ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದರು. ಐಶ್ವರ್ಯಾ ಆಗಾಗ್ಗೆ ಶೋ ನೋಡಲು ಸರ್ವೈವರ್ ಸೆಟ್ಗಳಿಗೆ ಭೇಟಿ ನೀಡುತ್ತಿದ್ದರು. ಅಲ್ಲಿಯೇ ಐಶ್ವರ್ಯಾ ಉಮಾಪತಿಯೊಂದಿಗೆ ಪರಿಚಿತರಾಗಿದ್ದು ಮತ್ತು ಅಂತಿಮವಾಗಿ ಅದು ಪ್ರೀತಿಗೆ ತಿರುಗಿದ್ದು.
ಇದನ್ನೂ ಓದಿ-BBK 10: ಕ್ಯಾಪ್ಟನ್ ಪಟ್ಟಕ್ಕೆ ವಿನಯ್ ಆಯ್ಕೆ..! ಬಿಗ್ಬಾಸ್ ಆಟಕ್ಕೀಗ ಹೊಸ ತಿರುವು
ಕಳೆದ ತಿಂಗಳು ಐಶ್ವರ್ಯಾ ಮತ್ತು ಉಮಾಪತಿ ಚೆನ್ನೈನಲ್ಲಿ ನಟ ಅರ್ಜುನ್ ನಿರ್ಮಿಸಿರುವ ಆಂಜನೇಯರ್ ದೇವಸ್ಥಾನದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಹತ್ತಿರದ ಸಂಬಂಧಿಕರು ಮತ್ತು ಸ್ನೇಹಿತರು ಮಾತ್ರ ಭಾಗವಹಿಸಿದ್ದರು. ಹೀಗಿರುವಾಗ ನಟ ತಂಬಿ ರಾಮಯ್ಯ ತಮ್ಮ ಭಾವಿ ಸೊಸೆಗೆ ಕಂಡೀಷನ್ ಹಾಕಿದ್ದಾರೆ ಎಂಬ ಸುದ್ದಿ ಕಾಲಿವುಡ್ ವಲಯದಲ್ಲಿ ಹರಿದಾಡುತ್ತಿದೆ.
ಹೌದು ಐಶ್ವರ್ಯಾ ಈಗಾಗಲೇ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿರುವುದರಿಂದ ಮದುವೆಯ ನಂತರ ಸಿನಿಮಾದಲ್ಲಿ ನಟಿಸಬಾರದು ಎಂಬುದು ರಾಮಯ್ಯ ವಿಧಿಸಿರುವ ಷರತ್ತು. ಮಾವನ ಈ ಷರತ್ತಿಗೆ ಐಶ್ವರ್ಯಾ ಕೂಡ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಮುಂದಿನ ವರ್ಷ ಫೆಬ್ರವರಿಯಲ್ಲಿ ಐಶ್ವರ್ಯಾ ಅರ್ಜುನ್-ಉಮಾಪತಿ ರಾಮಯ್ಯ ಅವರ ಮದುವೆ ನಡೆಯಲಿದೆ.
ಇದನ್ನೂ ಓದಿ-BBK 10: ವಿನಯ್ vs ನಮ್ರತಾ ಟೀಮ್ ಕ್ರಿಯಟ್ ಆದ್ರೆ ಬಿಗ್ಬಾಸ್ ಮನೆ ಆಟ ಹೇಗಿರುತ್ತೆ?
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.