Aishwarya Rai : ಐಶ್ವರ್ಯಾ ರೈಗೆ ಕಾನೂನು ಸಂಕಷ್ಟ, ಮನೆಗೆ ಬಂತು ಲೀಗಲ್ ನೋಟಿಸ್.!
Aishwarya Rai Bachchan: ಮೂಲಗಳ ಪ್ರಕಾರ, ನಾಸಿಕ್ ಜಿಲ್ಲಾಡಳಿತವು ಪದೇ ಪದೇ ಸೂಚನೆ ನೀಡಿದ್ದರೂ, ಅವರು ತೆರಿಗೆ ಪಾವತಿಸುವುದನ್ನು ತಪ್ಪಿಸಿದ್ದಾರೆ. ಇದೇ ಕಾರಣಕ್ಕೆ ಈಗ ಲೀಗಲ್ ನೋಡಿಸ್ ಹೊರಡಿಸಲಾಗಿದೆ.
Legal notice to Aishwarya Rai : ಭೂ ತೆರಿಗೆ ಪಾವತಿಸದ ಕಾರಣಕ್ಕೆ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಆಡಳಿತದಿಂದ ನೋಟಿಸ್ ನೀಡಿದ ನಂತರ ನಟಿ ಐಶ್ವರ್ಯಾ ರೈ ಬಚ್ಚನ್ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಾಹಿತಿಯ ಪ್ರಕಾರ, ಮಹಾರಾಷ್ಟ್ರದ ಸಿನ್ನಾರ್‌ನಲ್ಲಿರುವ ತನ್ನ ಜಮೀನಿಗೆ ಐಶ್ವರ್ಯಾ 22,000 ರೂ ತೆರಿಗೆ ಪಾವತಿಸದ ಕಾರಣ ತಹಸೀಲ್ದಾರ್ ಈ ನೋಟಿಸ್ ನೀಡಿದ್ದಾರೆ. ನೋಟಿಸ್ ಸ್ವೀಕರಿಸಿದ 10 ದಿನಗಳಲ್ಲಿ ಬಾಕಿ ಪಾವತಿಸದಿದ್ದರೆ, ಮಹಾರಾಷ್ಟ್ರ ಭೂಕಂದಾಯ ಕಾಯಿದೆ, 1966 ರ ಕಲಂ 174 ರ ಅಡಿಯಲ್ಲಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ನೋಟಿಸ್ ನಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ : ಕಿಚ್ಚ ಸುದೀಪ್ ನೆಕ್ಸ್ಟ್ ಸಿನಿಮಾಗೋಸ್ಕರ ಕಾಯ್ತಿದ್ದೀರಾ? ಇಲ್ಲಿದೆ ಎಕ್ಸೈಟಿಂಗ್ ಅಪ್ಡೇಟ್
ಐಶ್ವರ್ಯಾ ನಾಸಿಕ್‌ನ ಸಿನ್ನಾರ್‌ನ ತಂಗಾವ್ ಬಳಿಯ ಅಡ್ವಾಡಿಯಲ್ಲಿ ಜಮೀನು ಹೊಂದಿದ್ದಾರೆ. ಗುಡ್ಡಗಾಡು ಪ್ರದೇಶದಲ್ಲಿ ಜಮೀನು ನಟಿ ಹೆಸರಿನಲ್ಲಿದೆ. ಮೂಲಗಳ ಪ್ರಕಾರ, ನಾಸಿಕ್ ಜಿಲ್ಲಾಡಳಿತವು ಪುನರಾವರ್ತಿತ ಜ್ಞಾಪನೆಗಳು ಮತ್ತು ಅವಕಾಶಗಳನ್ನು ಒದಗಿಸಿದರೂ, ಅವರು ತೆರಿಗೆ ಪಾವತಿಸುವುದನ್ನು ತಪ್ಪಿಸಿದ್ದಾರೆ.
ಸಿನ್ನಾರ್ ತಾಲೂಕಾ ಕಚೇರಿಯಿಂದ ಐಶ್ವರ್ಯಾ ಜೊತೆಗೆ 1200 ಆಸ್ತಿ ಮಾಲೀಕರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಮಾರ್ಚ್ ಅಂತ್ಯದೊಳಗೆ ಎಲ್ಲ ವಸೂಲಾತಿ ಗುರಿ ಪೂರ್ಣಗೊಳಿಸಲು ಕಂದಾಯ ಇಲಾಖೆ ಕ್ರಮ ಕೈಗೊಳ್ಳುತ್ತಿದೆ. ಸದ್ಯಕ್ಕೆ ಐಶ್ವರ್ಯಾ ನೋಟಿಸ್‌ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಇದನ್ನೂ ಓದಿ : Rashmika tattoo : ರಶ್ಮಿಕಾ ಕೈ ಮೇಲಿರುವ 'Irreplaceable' ಟ್ಯಾಟೂ ಹಿಂದಿನ ಗುಟ್ಟೇನು ಗೊತ್ತೇ?
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.